Tuesday, December 2, 2008

ಮತಾಂತರ

ಮತಾಂತರದ ಬಗ್ಗೆ ಈಗಾಗಲೇ ಸುಧೀರ್ಘ ಚರ್ಚೆಗಳು ನಡೆದಿವೆ. ನನ್ನ ಅನಿಸಿಕೆಗಳು ಮತಾಂತರದ ವಿರುದ್ಧವಾಗಿ ಅಥವಾ ಪರವಾಗಿ ಇಲ್ಲ. ಇದೊಂತರ ನಮ್ಮನ್ನ ನಾವು ಕನ್ನಡಿಯಲ್ಲಿ ನೋಡಿಕೊಂಡು, ಸರಿಯಿಲ್ಲದ ಕಡೆ ತಿದ್ದಿಕೊಂಡು ಹೋಗುವ ಹಾಗೆ. ನಾನು ಗಮನಿಸಿದಂತಹ ಸಂಗತಿಗಳನ್ನು ಹೇಳಲು ಇಷ್ಟಪಡುತ್ತೇನೆ ಅಥವಾ ಪ್ರಯತ್ನಪಟ್ಟಿದ್ದೇನೆ.

ನನಗನಿಸುವ ಮಟ್ಟಿಗೆ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ನಮ್ಮ ಹಿಂದೂ ಸಮಾಜಕ್ಕೆ ಇಂದು ತನ್ನನ್ನು ತಾನು ಪರಾಮರ್ಶಿಸಿಕೊಳ್ಳುವಂತಹ ಹೊಸ್ತಿಲಿಗೆ ಬಂದಿದೆ. ಮತಾಂತರವೆಂಬ ಭೂತ ನಮನ್ನ ಕಾಡ್ತಾ ಇದೆ ಅಂದರೆ ಅದರಲ್ಲಿ ನಮ್ಮ ದೌರ್ಬಲ್ಯಗಳ ಕೊಡುಗೆ ಕೂಡ ಇದೆ ಎಂದು ನನಗೆ ಅನಿಸುತ್ತದೆ. ಮತಾಂತರಿಗಳು [ ಅವರು ಯಾರೇ ಆಗಿರಬಹುದು ] ನಮ್ಮ ಸಮಾಜದಲ್ಲಿರುವ ಕೆಳವರ್ಗಕ್ಕೆ [ಪ್ರಕೃತಿಯ ದೃಷ್ಟಿಯಲ್ಲಿ / ದೇವರ ಸೃಷ್ಟಿಯಲ್ಲಿ ಕೆಳವರ್ಗ ಎನ್ನುವುದು ಇಲ್ಲದಿದ್ದರೂ ಬೇರೆ ಪದ ಹೊಳೆಯದೆ ಹಾಗೆ ಉಪಯೋಗಿಸಿದ್ದೇನೆ] / ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ತಮ್ಮ ಗುರಿಯನ್ನು ಇರಿಸಿಕೊಂಡಿದಾರೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರೂ ಮತಾಂತರ ಹೊಂದಿದ್ದರು ಅದು ಆಮಿಷಕ್ಕೊಳಗಾಗದೆ ಆಗಿರುವಂತಹದ್ದು. ಅಥವ ಅದು ಅವರ ಪ್ರಜ್ಞಾಪೂರ್ವಕ ನಿರ್ಧಾರವಾಗಿರಬಹುದು.

ಶತ ಶತಮಾನಗಳ ಹಿಂದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವಿಧಗಳಾಗಿ ವಿಂಗಡಿಸಿದ್ದು ಅವರು ಮಾಡುವ ಕೆಲಸಕ್ಕನುಗುಣವಾಗಿ ಅಷ್ಟೆ . ಕಾಲಕ್ರಮೇಣ ವರ್ಗಗಳು ಜಾತಿಗಳಾಗಿ, ಉಪಜಾತಿಗಳಾಗಿ ತಾನು ಶ್ರೇಷ್ಠ, ಮತ್ತೊಬ್ಬ ಕೀಳು ಎಂಬ ಭ್ರಮೆಗೊಳಗಾಗಿದ್ದು ಒಂದು ದುರಂತ. ಇನ್ನೂ ಅಸ್ಪ್ರುಶ್ಯತೆಯಂತಹ ಅಸಹ್ಯ ಪದ್ಧತಿ ಇದೆ ಎಂದರೆ ನಾವು ನಾಗರೀಕರಾಗಿ ವಿಕಾಸಹೊಂದಿದ್ದೀವ ಅಥವಾ ಅನಾಗರೀಕತೆಯತ್ತ ಮುಖ ಮಾಡಿದ್ದೇವಾ ? ಇಂತಹ ಪದ್ಧತಿಗಳು [ಇನ್ನೊಂದು ಉದಾಹರಣೆಯೆಂದರೆ ದೇವದಾಸಿಪದ್ದತಿ] ನಮ್ಮ ಧರ್ಮದ ದೌರ್ಬಲ್ಯಗಳಲ್ಲವೇ?

ಶ್ರೀಕೃಷ್ಣ " ವಸುದೈವ ಕುಟುಂಬಕಂ " ಅಂತ ಹೇಳಿದ. ವಿಶ್ವದಲ್ಲಿರುವ ಸಕಲ ಜೀವ ಜಂತುಗಳು ದೇವರ ಸೃಷ್ಟಿಯಲ್ಲಿ ಒಂದೇ. ಹಾಗಾದರೆ ನಾವೆಲ್ಲರೂ ಒಂದೇ ಎಂದು ಯಾಕೆ ಭಾವಿಸಬಾರದು. ಜಾತಿ ಪದ್ದತಿಯನ್ನು ಬೇರು ಸಮೇತ ಕೀಳೋದು ಅಷ್ಟು ಸುಲಭವಲ್ಲ ನಿಜ. ವಿಚಾರವಾಗಿ ಕ್ರಾಂತಿಯಾಗಲಿ ಅಂತ ನಿರೀಕ್ಷೆಸೋದು ತಪ್ಪಾಗುತ್ತೆ. ಆದರೆ ವಿಚಾರವಾಗಿ ಉದಾತ್ತ ಚಿಂತನೆಗಳು ನಡೆಯಬೇಕಿದೆ. ಮತಾಂತರವನ್ನು ವಿರೋಧಿಸುವ ಮೊದಲು ನಮ್ಮನು ನಾವು ತಿದ್ದಿಕೊಳ್ಳಬೇಕಿದೆ. ನಮ್ಮ ಸಮಾಜದ ವಿಚಾರವಂತರು, ಬುದ್ದಿಜೀವಿಗಳು, ಧರ್ಮದ ಬಗ್ಗೆ ಜ್ಞಾನವನ್ನು ಹೊಂದಿರುವವರು, ಮಠಗಳ ಮುಖ್ಯಸ್ಥರು ಜನರಲ್ಲಿ ಧರ್ಮದ ಬಗ್ಗೆ ಅರಿವನ್ನು, ಅದರ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಬೇಕಿದೆ. ಮಠ ಮಾನ್ಯಗಳು ಒಂದು ಜಾತಿಯ ಶ್ರದ್ಧಾ ಕೇಂದ್ರಗಳಾಗದೆ ನಮ್ಮ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಕೋಟ್ಯಾಂತರ ಹಣ ವೆಚ್ಚಮಾಡಿ ದೇವಸ್ಥಾನಗಳನ್ನು ಕಟ್ಟುವ ಬದಲು ದುರ್ಬಲ / ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೆ ಹಣವನ್ನು ವಿನಿಯೋಗಿಸುವುದು ಸೂಕ್ತ. ಜನರು vote bank ರಾಜಕೀಯಕ್ಕೆ ಬಲಿಯಾಗದೆ ನಾವು ದೂರ ಇಟ್ಟಿರುವವರು ನಮ್ಮವರೇ ಎಂದು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಮನಸ್ಥಿತಿಯನ್ನ ಬೆಳೆಸಿಕೊಳ್ಳಬೇಕಿದೆ. ಆಗ ಮತಾಂತರ ಅಥವಾ ಇನ್ನ್ಯಾವುದೇ ಧಾರ್ಮಿಕ, ಸಾಂಸ್ಕೃತಿಕ, ಸಮಾಜಿಕ ಅಭದ್ರತೆಯನ್ನು ತರುವಂತಹ ಚಟುವಟಿಕೆಗಳ ಆಟ ನಮ್ಮಲ್ಲಿ ನಡೆಯುವುದಿಲ್ಲ ಎಂಬುದು ನನ್ನ ಆಶಯ.

Monday, December 1, 2008

ದೇಶಕ್ಕಾಗಿ ಪ್ರಾಣ ನೀಡಿದವರಿಗೆ ನಮನ



ನಮ್ಮ ದೇಶಕ್ಕೆ ಪ್ರತಿಸಲ ಆಪತ್ತು ಬಂದಾಗ, ವಿಪತ್ತು ಬೆನ್ನೇರಿದಾಗ ನಮ್ಮ ಸಹಾಯಕ್ಕೆ, ರಕ್ಷಣೆಗೆ ಬರುವವರು ಸೈನಿಕರು ಮತ್ತು ಪೊಲೀಸರು. ನದಿಗಳು ಉಕ್ಕಿ ನೆರೆ ಬಂದಾಗ, ಶತ್ರುಗಳು ಮುಗಿಬಿದ್ದಾಗ, ಭಯೋತ್ಪಾದಕರು ಆರ್ಭಟಿಸಿದಾಗ ನಮ್ಮ ರಕ್ಷಣೆಗೆ ಧಾವಿಸಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವವರು ಸೈನಿಕರು. ಮೊನ್ನೆ ಮುಂಬೈ ನಲ್ಲಿ ನಡೆದ ಉಗ್ರಗಾಮಿಗಳ ದಾಳಿಯಲ್ಲಿ

೧) ಅಶೋಕ್ ಕಾಮ್ಟೆ
೨) ವಿಜಯ್ ಸಲಸ್ಕರ್
೩) ಹೇಮಂತ್ ಕರ್ಕೆರೆ
೪) ಸಂದೀಪ್ ಉನ್ನಿಕೃಷ್ಣನ್

ಹಾಗು ಇನ್ನಿತರ ಅನಾಮಧೇಯ ಹೀರೋಗಳು ನಮಗಾಗಿ ಪ್ರಾಣವನ್ನು ಅರ್ಪಿಸಿದ್ದಾರೆ. ಈ ಎಲ್ಲ ಧೀರರಿಗೆ ನನ್ನ ಹೃತ್ಪೂರ್ವಕ ನಮನಗಳು. ನಮ್ಮ ದೇಶ ನಿಮ್ಮ ಶೌರ್ಯವನ್ನ, ನಿಮ್ಮ ಕರ್ತವ್ಯಪ್ರಜ್ಞೆಯನ್ನ, ನಿಮ್ಮ ಸಾಹಸವನ್ನ ಹೆಮ್ಮೆಯಿಂದ ಸ್ಮರಿಸುತ್ತೇವೆ. ಇಂತಹ ಧೈರ್ಯಶಾಲಿ ಸೈನಿಕರು ಇರೋದ್ರಿಂದಲೇ ನಾವು ಇಂದು ನೆಮ್ಮದಿಯ ಜೀವನವನ್ನು ನಡೆಸುತ್ತ ಇದ್ದೇವೆ ಅಂದ್ರೆ ಅದು ಅತಿಶಯೋಕ್ತಿಯೇನಲ್ಲ.

ಆದರೆ ಪ್ರತಿಯೊಬ್ಬ ಸೈನಿಕ ಹುತಾತ್ಮನಾದಾಗ ಅವನ ಕುಟುಂಬದಲ್ಲಿ ಸೃಷ್ಠಿಯಾಗುವ ಶೂನ್ಯವನ್ನು ನಾವು ತುಂಬಲು ಸಾಧ್ಯವೇ? ತಂದೆತಾಯಿಗೆ ಮಗನನ್ನ, ಅಕ್ಕನಿಗೆ ತಮ್ಮನನ್ನ, ತಂಗಿಯರಿಗೆ ಅಣ್ಣನನ್ನ, ಹೆಂಡತಿಗೆ ಗಂಡನನ್ನ ಕಳೆದುಕೊಂಡ ದುಃಖವನ್ನು ಕಿಂಚಿತ್ತಾದರೂ ಭರಿಸಲು ನಮಗೆ ಸಾಧ್ಯವೇ? ನಮ್ಮ ಕರ್ತವ್ಯ ಅವರಿಗೆ ಸಲ್ಯೂಟ್ ಹೊಡೆಯುವುದರಲ್ಲೇ ಮುಗಿದು ಹೋಗುತ್ತಾ ಇದೆಯಲ್ಲ ಅನ್ನೋ ಭಾವ ನನ್ನನ್ನ ಕಾಡ್ತಾ ಇದೆಯಲ್ಲ?

Monday, November 10, 2008

ಕತೆ: ಪ್ರಶ್ನೆಗಳು ?

"ಇತ್ತೀಚೆಗೆ ಯಾಕೋ ಸರಿಯಾಗಿ ನಿದ್ದೆ ಬರ್ತಾ ಇಲ್ಲ. ಬೇಡದ ಯೋಚನೆಗಳು. ಕೆಲವೊಮ್ಮೆ ನಿದ್ದೆ ಬಂದಿದ್ರು ಬೆಂಬಿಡದೆ ಕಾಡಿಸುವ ಸಾವಿನ ಕನಸುಗಳು. ಕನಸುಗಳಿಗೆ ಅದೆಷ್ಟು ಶಕ್ತಿ. ನಮ್ಮಲ್ಲೇ ಹುಟ್ಟಿ, ನಮ್ಮ ಆಲೋಚನೆಗಳಲ್ಲೇ ಬೆಳೆದು, ನಮ್ಮನೆ ತಿನ್ನಲು ಬಯಸುತ್ತವೆ. ಪ್ರತಿಯೊಂದು ಕನಸಿಗೂ ಅರ್ಥ ಇದೆಯಾ? ಅವೇನು ಭವಿಷ್ಯದ ಮುನ್ಸೂಚನೆಗಳೇ, ಭೂತಕಾಲದ ಪಾಪದ ಪ್ರಜ್ನೆಗಳೆ? ವರ್ತಮಾನದ ಸತ್ಯಗಳೆ? ಮೊದಮೊದಲು ಕಾಣಿಸುತ್ತಿದ್ದ ಕನಸುಗಳು.....ಅದೇ....ಬಾಲ್ಯದಲ್ಲಿರುವಾಗ ಬೀಳುತ್ತಿದ್ದ ಕನಸುಗಳು....ಅವೇ ಚೆನ್ನಾಗಿರುತ್ತಿದ್ವು. ರಾತ್ರಿ ಅಮ್ಮ ಹೇಳೋ ಕಥೆಗಳನ್ನ ಕೇಳಿ, ಅದೇ ಕಥೆ ಕನಸಿನಲ್ಲೊಮ್ಮೆ ಪುನರಾವರ್ತನೆಗೊಂಡು.....ಒಮ್ಮೊಮ್ಮೆ ಹೆದರಿ ಅಮ್ಮನನ್ನು ಅಪ್ಪಿ ಮಲಗುತ್ತ ಇದ್ದಿದ್ದು. ಈ ನೆನಪುಗಳು ನನಸಾಗಿ ಮತ್ತೊಮ್ಮೆ ಜೀವನಚಕ್ರ ಅಲ್ಲಿಂದ ತಿರುಗಲು ಶುರುವಾಗಿದ್ದರೆ..... ಅಮ್ಮನ ಬೆಚ್ಚನೆ ಅಪ್ಪುಗೆಯಲ್ಲಿನ ಹಿತವನ್ನು ಮತ್ತೊಮ್ಮೆ ಅನುಭವಿಸುವ ಹಾಗಿದ್ದರೆ.....ಛೆ ಎಲ್ಲ ಬರಿ ಯೋಚನೆಗಳಷ್ಟೆ. ನನಗೇನು ಕಡಿಮೆ ವಯಸ್ಸಾಗಿಲ್ಲ. ಸುಮಾರು ಇಪ್ಪತ್ತಾರು ವರ್ಷದವನಿದ್ದಾಗ ಮದುವೆಯಾಗಿದ್ದು ಲಕ್ಷ್ಮಿಯನ್ನು. ಮುಂದಿನ ತಿಂಗಳು ಹದಿನೆಂಟಕ್ಕೆ ನಮ್ಮ ಮದುವೆಯಾಗಿ ಮೂವತ್ತು ವರ್ಷ ತುಂಬುತ್ತೆ ಅಂತ ಲಕ್ಷ್ಮಿ ಹೇಳ್ತಿದ್ಲು. ಅಲ್ಲಿಗೆ ನನಗೆ ಐವತ್ತಾರು ವರ್ಷ. "

" ವಯಸ್ಸಾದಂತೆ ನಾವೇನಾದರೂ ಮಕ್ಕಳಾಗ್ತೀವ? ಈಗ ಒಂಥರಾ ಮಂಪರು.....ಎಚ್ಚರದ ಮತ್ತು ನಿದ್ರೆಯ ಮಧ್ಯ ಸ್ಥಿತಿ. ಇಲ್ಲಿಯೂ ಯೋಚನೆಗಳ, ಕನಸುಗಳ ಕಲಸುಮೇಲೋಗರ. ಚಿಕ್ಕವರಿರುವಾಗ ಯಾವಾಗ ದೊಡ್ದವರಾಗ್ತೀವೋ ಅನ್ನೋ ಕಾತುರ. ದೊಡ್ಡವರಾದ ಮೇಲೆ ಯಾಕೆ ದೊಡ್ಡವರಾಗಿಬಿಟ್ಟೆವಪ್ಪ ಅನ್ನೋ ಅಸಹನೆ. ಜೀವನದಲ್ಲಿ ಯಾಕಿಷ್ಟು ತಾಕಲಾಟ? ಅರೆರೆ ಯಾಕಿಷ್ಟು ಪ್ರಶ್ನೆಗಳು? ಯಾಕಿಲ್ಲ ಉತ್ತರಗಳು? ಮೊದಲೆಲ್ಲ ಈ ಆಲೋಚನೆಗಳೇ ಇರಲಿಲ್ಲ. ಇವೊಂತರ ಮನಸ್ಸನ್ನು ಭಾರವಾಗಿಸುವಂತಹ, ಕಸಿವಿಸಿಗೊಲೋಸುವಂತಹ ಯೋಚನೆಗಳು. ನನ್ನ ಬದುಕಿನ ಪುಟಗಳ ನಡುವೆ ನನ್ನನ್ನು ನಾನೇ ಹುಡುಕಲು ಪ್ರಚೋದಿಸುವ ಯೋಚನೆಗಳು. ನನ್ನನು ನಾನೇ ಹುಡುಕುತ್ತ ಇದ್ದೆನಿ ಅಂದ್ರೆ ನಾನೆಲ್ಲೋ ಕಳೆದುಹೊಗಿದ್ದೀನಿ ಅನ್ನೋ ಅರ್ಥ ಬರುತ್ತೆ. ನಾನು ಇಲ್ಲೇ ಇದ್ರೂ ಹೇಗೆ ಕಳೆದುಹೋದೆ? ಎಲ್ಲಿ ಕಳೆದುಹೋದೆ? ಒಂಥರಾ ಪೀಕಲಾಟ, ತೊಳಲಾಟ. ಒಮ್ಮೊಮ್ಮೆ ಅಲ್ಲೆಲ್ಲೋ ಮರುಭೂಮಿಯಲ್ಲಿನ ಓಯಸಿಸ್ ನ ಹಾಗೆ ಬರುವ ಮಧುರ ನೆನಪುಗಳ ತುಂಟಾಟ. ಕಳೆದುಹೊದದ್ದೆಲ್ಲಿಗೆ, ಹುಡುಕುತ್ತಿರೋದು ಯಾಕೆ? ಪ್ರಶ್ನೆಗಳೋ ಪ್ರಶ್ನೆಗಳು. ಮರುಭೂಮಿಯ ಮರಳಿನ ಕಣಗಳ ಹಾಗೆ.....ಅಗಾಧ....ಅಳದಲ್ಲೂ, ವಿಸ್ತಾರದಲ್ಲೂ. ಆಲೋಚನೆಯೆಂಬ ಬಿರುಗಾಳಿಯ ಜೊತೆಗೆ ಪ್ರಶ್ನೆಗಳೆಂಬ ಮರಳುಗುಡ್ಡೆಗಳ ಅಲೆದಾಟ. ಇಷ್ಟು ವರ್ಷ ಹಿಂದಿರುಗಿ ನೋಡದೆ ನಡೆದು ಈಗ ಕವಲುದಾರಿಯಲ್ಲಿ ನಿಂತ ಅನುಭವ. ಜೀವನ ಇಷ್ಟೇನಾ? ಬೇರೆಯವರು ನನ್ನ ಹಾಗೆ ಅನುಭವಿಸಿದ್ದಾರ ಈ ಸಂಕಟವನ್ನು? ಎಲ್ಲರ ಹಾಗೆ ಓದಿದ್ದಾಯಿತು, ಕೆಲಸಕ್ಕೆ ಸೇರಿದ್ದಾಯಿತು, ಮದುವೆಯಾಯಿತು, ಮಕ್ಕಳಾದವು.....ಅವರೆಲ್ಲ ದೊಡ್ದವರಾಗಿಯು ಆಯ್ತು. ಹಾಗಾದರೆ ಜೀವನದಲ್ಲಿ ಮುಂದೇನು? ಓದು...ಮದುವೆ....ಮಕ್ಕಳು....ಮೊಮ್ಮಕ್ಕಳು....ಉಹುಂ....ಎಲ್ಲರು ಮಾಡೋದೇ. ನನ್ನದೇನು ವಿಶೇಷ ಇಲ್ಲ. ತುಂಬ ಆರ್ಡಿನರಿ ಅನಿಸೋದಿಲ್ವಾ ನಾನು? ನನ್ನ ಜೀವನವನ್ನ ನೆನಸಿಕೊಂಡಾಗ ತ್ರುಪ್ತಿನೆ ಇಲ್ಲವಲ್ಲ! ಓದುವಾಗ ಕೆಲಸಕ್ಕೆ ಸೇರಿದರೆ ಲೈಫ್ ಆದ ಹಾಗೆ ಅಂತ....ಕೆಲಸಕ್ಕೆ ಸೇರಿದ ಮೇಲೆ ಮದುವೆಯಾದರೆ ಲೈಫ್ ಆದ ಹಾಗೆ ಅಂತ. ಕೆಲಸಕ್ಕೆ ಸೇರಿಯಾಯಿತು, ಮದುವೆಯು ಆಯಿತು, ಮಕ್ಕಳಾದವು, ಅವರ ವಿದ್ಯಾಭ್ಯಾಸವು ಒಂದು ಹಂತಕ್ಕೆ ಬಂದು ಅವರ ಮದುವೆಯು ಆಯಿತು. ಹಾಗಾದರೆ ನನಗೆ ತೃಪ್ತಿ ಯಾಕಿಲ್ಲ? ನಾನು ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳೆಲ್ಲ ತುಂಬ ಚೀಪ್ ಅಂತ ಯಾಕೆ ಅನಿಸತೊಡಗಿದೆ ನನಗೆ? ಆಗ ಸಿಕ್ಕ ಸಂತೋಷಗಳೆಲ್ಲ ಕೇವಲ ಸಾಂಧರ್ಭಿಕ ಸಂತೋಷಗಳೇ? ಬಾಲ್ಯದ ಆಟ ಪಾಠಗಳನ್ನು ನೆನೆಸಿಕೊಂಡಾಗ ಆಗುವ ಆನಂದ.....ದೊಡ್ಡವರಾದ ನಂತರ ಜೀವನವನ್ನು ನೆನೆದಾಗ ಆಗೋದಿಲ್ಲ ಯಾಕೆ? ಇಲ್ಲಿಯವರೆಗೂ ಅಪ್ಪ ಅಮ್ಮನನ್ನ, ಹೆಂಡತಿಯನ್ನ, ಮಕ್ಕಳನ್ನ, ಸಮಾಜವನ್ನ ಸರಿದೂಗಿಸುವಂತಹ ಸಾಹಸವನ್ನಲ್ಲವೇ ಮಾಡಿರಿವುದು? ನಾನು ಇಂತಹ ಸಾಧನೆ ಮಾಡಿದೀನಿ ಅಥವಾ ಇಂತಹ ಒಳ್ಳೆ ಕೆಲಸ ಮಾಡಿದ್ದೀನಿ ಅನ್ನುವ, ಗರ್ವಪಡುವ, ಆನಂದಿಸುವ ಸಂಗತಿಗಳೇ ನನ್ನ ಸ್ಮೃತಿಪಟಲಕ್ಕೆ ಬರ್ತಾ ಇಲ್ವೆ? ಅಪ್ಪನ ಮಾತನ್ನ ಕೇಳಿ ಅವರ ಸಂತೋಷಕ್ಕೋಸ್ಕರ ನನ್ನ ಇಷ್ಟದ ಮೇಷ್ಟ್ರ ಕೆಲಸವನ್ನ ಬಿಟ್ಟದ್ದು ಅವರನ್ನು ಆ ಸಂಧರ್ಭದಲ್ಲಿ ಖುಷಿಯಾಗಿಡಲು ಮಾತ್ರ. ಮತ್ತೊಂದು ಚೆನ್ನಾಗಿರುವ ಕೆಲಸಕ್ಕೆ.....ಚೆನ್ನಾಗಿರುವ ಅಂದ್ರೆ ಹೆಚ್ಚು ಸಂಬಳ ಬರುವ ಕೆಲಸಕ್ಕೆ ಸೇರಿದ್ದಾಗಿದ್ದ್ರು ಅದರಲ್ಲಿ ನನ್ನತನ ಇರಲಿಲ್ಲ. ಏಕೆಂದರೆ ಅದು ಮಾವನ influence ನಿಂದ ಸಿಕ್ಕಿದ ಕೆಲಸವಾಗಿತ್ತು. ಸ್ವತಂತ್ರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶವಿದ್ದರೂ ಅಪ್ಪನನ್ನು ಮೀರದೆ ನಡೆದು ಬಂದದ್ದಾಗಿತ್ತು. ಮೇಷ್ಟ್ರ ಕೆಲಸವನ್ನೇ ಮಾಡುವಂತಹ ಗಟ್ಟಿ ನಿರ್ಧಾರವನ್ನು ಏಕೆ ಮಾಡಲಾಗಲಿಲ್ಲ? ಅಂತಹ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಒಳ್ಳೆ ಮೇಷ್ಟ್ರೇ ಆಗ್ತಿದ್ದೆ. ಯಾಕೆಂದರೆ ನನಗೆ ಮಕ್ಕಳಿಗೆ ಹೇಳಿಕೊಡೋದು ಗೊತ್ತಿತ್ತು. ಎಲ್ಲರಿಗಿಂತ ನಾನು ಚೆನ್ನಾಗಿ ಪಾಠ ಹೇಳ್ತೀನಿ ಅನ್ನೋ ವಿಶ್ವಾಸಾನು ಇತ್ತು. ನನ್ನ ಮಕ್ಕಳು ಈವಾಗ್ಲು ನಾನು ಅವರಿಗೆ ಚಿಕ್ಕಂದಿನಲ್ಲಿ ಹೇಳಿಕೊಟ್ಟ ಪಾಠಗಳನ್ನ ನೆನೆಸಿಕೊಳ್ತಾರೆ. ಅವರ ಮಾತು ಕೇಳಿ ನನಗೊಂತರ ಆನಂದ. ಅರೆರೆ....ಹೌದಲ್ಲ ನಾನು teaching ನ ಎಂಜಾಯ್ ಮಾಡ್ತಿದ್ದೆ....ಮತ್ತೆ..ಮತ್ತೆ ಈಗಲೂ ಅದರ ಬಗ್ಗೆ ಆಸಕ್ತಿ ಇದೆ. ಇಷ್ಟದ ಕೆಲಸವನ್ನೇ ಕಷ್ಟಪಟ್ಟು ಮಾಡಬಹುದಿತ್ತಲ್ವ? ಈಗಲೂ ಅದಕ್ಕೆ ಅವಕಾಶಗಳಿವೆಯಾ? ಹಾಗಾದರೆ ಮುಂದೇನು ಮಾಡಬಹುದು? ಈಗಿನ ಕೆಲಸ ಬಿಟ್ಟು ಪಾಠ ಹೇಳೋದೇ? ನೋಡಿದವರು ಏನೆಂದುಕೊಳ್ಳೋದಿಲ್ಲ!??? ಲಕ್ಷ್ಮಿಗೆ ಈ ಕೆಲಸ ಬಿಟ್ಟು ಮೇಷ್ಟ್ರ ಕೆಲಸ ಮಾಡ್ತೀನಿ ಅಂತ ಹೇಳೋದ? ಅವಳು ಅದನ್ನು ಒಪ್ಕೊತಾಳ? ಮಕ್ಕಳು ಈ ನಿರ್ಧಾರವನ್ನು ಬೆಂಬಲಿಸುತ್ತಾರ? ಛೆ...ಮತ್ತದೇ ಮನೆಯವರನ್ನು, ಸಮಾಜವನ್ನು ಎದುರಿಸಲಾಗದ ಹೇಡಿತನ. ಈ ನಿರ್ಧಾರ ಅಷ್ಟೊಂದು ಕಠಿಣವೇ? ನನಗೆ ಯಾರನ್ನ ಎದುರಿಸಲಿಕ್ಕೆ ಆಗ್ತ ಇಲ್ಲ? ಹೆಂಡತಿಯನ್ನೇ? ಮಕ್ಕಳನ್ನೇ? ಈ ಸಮಾಜವನ್ನೇ?....................ಹೌದು ಹೆಂಡತಿಯನ್ನ ಒಪ್ಪಿಸಬಹುದು. ಮಕ್ಕಳು ಈಗ ಅರ್ಥ ಮಾಡಿಕೊಳ್ಳದಿದ್ದರೂ ಮುಂದೆ ಮಾಡಿಕೊಳ್ಳಬಹುದೇನೋ. ಇನ್ನು ಸಮಾಜ.........ಅದನ್ನ ಬಿಟ್ಹಾಕು. ಜಾಸ್ತಿ ಏನಾಗಬಹುದು? ನನ್ನನ್ನು ನೋಡಿ ನಗಬಹುದು. ಅಷ್ಟೆತಾನೆ. ನನಗೆ ನನ್ನ ನಿರ್ಧಾರ ಮುಖ್ಯ. ಮನಸ್ಸಿಗೆ ತ್ರುಪ್ತಿಯಗುವಂತ ಕೆಲಸ ಮಾಡೋದು ಮುಖ್ಯ. ಹೌದು ಇನ್ನು ತಡಮಾಡಲ್ಲ........Better late than never. ನನ್ನ ಜೀವನದ ಕೊನೆಯಲ್ಲೊಂದು ಹೊಸ ಅಧ್ಯಾಯ ಶುರುವಾಗಲಿ. ಈಗ್ಯಾಕೋ ಒಂಥರಾ ಹಿತವಾದ ಅನುಭವ.....ಅಮ್ಮನ ಅಪ್ಪುಗೆಯಂತೆ......ನಾನು ಮಗುವಾದಂತೆ. ಕಾರ್ಗತ್ತಲೆಯ ಸುರಂಗದ ಮಧ್ಯದಿಂದ ಕಾಣುತ್ತಿದೆ ಚುಕ್ಕೆಯಂತಹ ಬೆಳಕು. ಅದು ಕೇವಲ ಬೆಳಕಲ್ಲ....ನಾನು ಹೋಗಬೇಕಿರುವ ದಾರಿಯ ದ್ವಾರ. ನಡೆ...ನಡೆ...ನಡೆ...ಮುಂದೆ ನಡೆ. ಈಗ್ಯಾಕೋ ಒಂಥರಾ ಹಿತವಾದ ಅನುಭವ.....ಅಮ್ಮನ ಅಪ್ಪುಗೆಯಂತೆ......ನಾನು ಮಗುವಾದಂತೆ. ಈಗ್ಯಾಕೋ ಒಂಥರಾ ಹಿತವಾದ ಅನುಭವ.....ಅಮ್ಮನ ಅಪ್ಪುಗೆಯಂತೆ......ನಾನು ಮಗುವಾದಂತೆ. "


--ನವೀನ ಕೆ. ಎಸ್.

Monday, October 6, 2008

ನಮ್ಮ ಟ್ರಿಪ್ಪಿನ ಬಗ್ಗೆ ನಿಮಗೆ updateಉ

" ಈ ಸಲನಾದ್ರು ಎಲ್ಲಾದರು ಟ್ರಿಪ್ಗೆ ಹೋಗಬೇಕು "
" ಹೋಗೋಣ ಬಿಡೋ "
" ಪ್ರತಿ ಸಲಾನೂ ಹೀಗೆ ಹೇಳ್ತೀರಾ ಮಕ್ಳ...ಬರಿ ಹೋಗೋಣ ಅನ್ನೋದಷ್ಟೇ ಆಯಿತು "
" ಆಯಿತಪ್ಪ placeಉ, dateಉ ಫಿಕ್ಸ್ ಮಾಡು.....ನಾವು ಬರ್ತೀವಿ "
" ಏನು ನಿಮಗೆಲ್ಲ ಇಂಟರೆಸ್ಟ್ ಇಲ್ಲವ......ನನಗೊಬ್ಬನಿಗೊಸ್ಕರ ಬರೋತರ ಮಾತಾಡ್ತೀರಲ್ಲ "
" ಸರಿ ಬಿಡು ಗುರು, ಒಂದೆರಡು place ನೋಡಿ ಇಮೇಲ್ ಹಾಕಿ.....ಆಮೇಲೆ decide ಮಾಡಿದರಾಯಿತು "

ಈ ಸಂಭಾಷಣೆ ನಾವು ವಾರಾಂತ್ಯಕ್ಕೆ ಸಿಕ್ಕಾಗಲೆಲ್ಲ ಪುನರಾವರ್ತನೆ ಗೊಳ್ಳುತ್ತಿತ್ತು. ಪ್ರತಿ ವರ್ಷಾನು ಎರಡು ಅಥವಾ ಮೂರು ದಿನ ಪ್ರವಾಸ ಹೋಗೋದು ನಮ್ಮ ಗುಂಪಿನ ವಾಡಿಕೆ. ಕೊಡೈಕೆನಾಲ್ ಗೆ ಹೋಗಿದ್ದು ೨೦೦೬ ರಲ್ಲಿ. ಕಳೆದ ವರ್ಷ ಕಲವಾರಹಳ್ಳಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದು ಬಿಟ್ರೆ ಮತ್ತೆಲ್ಲೂ ಹೋಗಿರಲಿಲ್ಲ. ಹಾಗಾಗಿ ಈ ಸಲ ಪ್ರವಾಸಕ್ಕೆ ಹೋಗೋದು ಒಂಥರಾ ಹೊಸ ಹುಮ್ಮಸ್ಸು ತಂದಿತ್ತು. ನಮ್ಮ ಗುಂಪಿನ ಹಲವರು ಸಂಸಾರಕ್ಕೆ ಕಾಲಿಡೋಕೆ ಯೋಚಿಸುತ್ತಿರೋದ್ರಿಂದ ಮುಂದಿನ ವರ್ಷ ಎಷ್ಟು ಜನ ಸಿಕ್ತಾರೆ ಅನ್ನೋ ಅನುಮಾನ ಎಲ್ಲರಿಗೂ ಇತ್ತು. ಇದೊಂದು ಕುಂಟು ನೆಪಾನು ಸೇರಿಕೊಂಡು ನಾವು ಕೊಡಚಾದ್ರಿಗೆ ಮತ್ತು ಜೋಗಕ್ಕೆ ಹೋಗೋದು ಅಂತ ತೀರ್ಮಾನವಾಯಿತು. ಹೋಗಿದ್ದು ಆಯಿತು, ಸುಂದರ ನೆನಪುಗಳನ್ನು ನಮ್ಮ ನೆನಪಿನ ಖಜಾನೆಗೆ ಸೇರಿಸಿದ್ದು ಆಯಿತು. ನಾವೆಲ್ಲರೂ IT sector ನಲ್ಲಿ ಕೆಲಸ ಮಾಡ್ತಿರೋದ್ರಿಂದ ಈ ತರಹದ ಒಂದು refreshment ನಮಗೆ ಬೇಕಿತ್ತು.

ರಾತ್ರಿ ಕೊಲ್ಲೂರಿಗೆ ಕೆ.ಎಸ್.ಆರ್.ಟೀ.ಸೀ ಬಸ್ಗೆ ಟಿಕೆಟ್ ಬುಕ್ ಮಾಡಿಸಿದ ಅಸಾಮಿನೆ ಬಸ್ಸು ಹೊರಡೋವೇಳೆ ಆದರು ಪತ್ತೆ ಇಲ್ಲ. ಬಸ್ ಸ್ಟ್ಯಾಂಡ್ ನಲ್ಲಿ ಕಂಡಕ್ಟರ್ ಸಮಜಾಯಿಷಿ ನೀಡಿ ನಮಗೆ ಸಾಕಾಗಿದ್ರೆ ಅವ್ನು ಆರಾಮವಾಗಿ ಕೈ ಬೀಸಿಕೊಂಡು ಬರ್ತಾ ಇದಾನೆ. ಯಾಕೋ lateಉ ಅಂದ್ರೆ ಇನ್ನು ೮:೨೫ ಕಣೋ ನನ್ನ ಗಡಿಯಾರದಲ್ಲಿ ಅಂತ ೧೦ ನಿಮಿಷ ಹಿಂದೆ ಇರೋ ಮೊಬೈಲ್ ತೋರಿಸ್ತಾನೆ. ಸರಿ ಅಂತ ಬಸ್ ಏರಿ, ಹೊರಟು, ಅರ್ಧರಾತ್ರಿಯಲ್ಲಿ ನಂದಿನಿ ಪೇಡ ತಿಂದು, ಅಕ್ಕಪಕ್ಕ ದ ಪ್ರಯಾಣಿಕರಿಂದೆಲ್ಲ ಶಾಪ ಹಾಕಿಸಿಕೊಂಡು ಕೊಲ್ಲೂರಿಗೆ ಹೋಗಿದ್ದಾಯಿತು. ಮೂಕಾಂಬಿಕೆ ದರ್ಶನದ ನಂತರ ಜೇಸನ್ ಹೇಳುತ್ತಿದ್ದ f ವರ್ಡ್ ಜೋಕ್ ಗಳಿಗೆಲ್ಲ ನಗುತ್ತ ಕೊಡಚಾದ್ರಿಯನ್ನು ಬೆವರು ಬಸಿಯುತ್ತಲೇ ಹತ್ತಿ, ಭಟ್ಟರ ಮನೆಯಲ್ಲಿ ಸುಸ್ತಾಗಿ ಕುಕ್ಕರಿಸಿ, ಅವರು ಕೊಟ್ಟ ಟೀ ಕುಡಿದ ಮೇಲೆ ನಮಗೆ ಜೀವ ಬಂದಿದ್ದು. Sunset point ಹತ್ತಿರ ಒಂದಿಷ್ಟು ತರ್ಲೆ ಫೋಟೋಗಳನ್ನು ತೆಗ್ಸಿ, ಸೂರ್ಯನನ್ನು ಮುಳುಗಿಸಿ ಮರಳಿ ಭಟ್ಟರ ಮನೆಗೆ ಬಂದು, ಬಿಸಿ ಬಿಸಿ ಊಟ ಮಾಡಿ, ಬೆಚ್ಚಗೆ ಮಲಗಿದ್ದಾಯಿತು. ಬೆಳಿಗ್ಗೆ ಎದ್ದು ಹಿಂದಿನ ದಿನ ಉಳಿದ ಅನ್ನದಿಂದ ಮಾಡಿದ ಚಿತ್ರಾನ್ನ ತಿಂದು, ಮೈ ಕೈ ನೋವುಮಾಡಿಕೊಂಡು ಜೀಪ್ನಲ್ಲಿ ಕೊಡಚಾದ್ರಿ ಅವರೋಹಿಸಿ, ಮರಳಿ ಕೊಲ್ಲೂರಿಗೆ ಬಂದು ವಿಶ್ರಾಂತಿ ಪಡೆದು, ಸಾಗರಕ್ಕೆ ಪ್ರಯಾಣಿಸಿದ್ದಾಯಿತು. ಮಾರನೆ ದಿನ ಅತ್ಯುತ್ಸಾಹದಿಂದ "ಜೀವನದಲ್ಲೊಮ್ಮೆ ನೋಡಿದ ಜೋಗದ ಗುಂಡಿನ " ಇಳಿದು ಅಷ್ಟೆ ಉತ್ಸುಹಕತೆಯಿಂದ ಹತ್ತಲು ಪ್ರಯತ್ನಿಸಿ, ವಿಫಲರಾಗಿ ಹ್ಯಾಪ್ಮೋರೆ ಹಾಕಿಕೊಂಡು ಕಷ್ಟಪಟ್ಟು ಏರಿದ್ದಯಿತು. ಕೊನೆಗೆ ಅಂತು ಇಂತೂ ಶಿವಮೊಗ್ಗ ತಲುಪಿ ರೈಲು ಹತ್ತಿದ ಮೇಲೆನೆ ನಮಗೆ ಮತ್ತೆ ಬೆಂಗಳೂರು, ಟ್ರಾಫಿಕ್ ಜಾಮ್, ಪೋಲ್ಲುಶನ್, ಡೆಡ್ಲೈನ್, ಪ್ರಾಜೆಕ್ಟ್ ರಿಲೀಸ್ ಅಂತೆಲ್ಲ ನೆನಪಾಗಿದ್ದು.

Friday, September 19, 2008

ಏಕೆ ಹೀಗೆ ನಮ್ಮ ನಡುವೆ ?

ಜೀವನದಲ್ಲಿ ಕೆಲವೊಂದು ಘಟನೆಗಳು [ನಾವು ಭಾಗವಹಿಸದಿದ್ದರೂ ಸಾಕ್ಷಿಯಾದ ಘಟನೆಗಳು ] ನಮ್ಮ ಮನಸ್ಸಿನಲ್ಲಿ ಉಳಿಯದೆ ಮರೆಯಾಗಿಬಿಡುತ್ತವೆ. ಇನ್ನೋದಿಷ್ಟು ಘಟನೆಗಳು ನಮ್ಮನ್ನು ಕಾಡಿದರೂ ನಮ್ಮಿಂದ ಪ್ರಯತ್ನಪೂರ್ವಕವಾಗಿ ಹೊರಹಾಕಲ್ಪಡುತ್ತವೆ. ಇನ್ನೊಂದಿಷ್ಟು ನಮ್ಮನ್ನೇ ಕಾಡಿ, ಮನಸ್ಸನ್ನು ಚಿಂತನೆಗೆ ಹಚ್ಚಿಸಿ, ಕೆಲವೊಮ್ಮೆ ಪ್ರಚೋದಿಸಿ ಶಾಶ್ವತವಾಗಿ ಉಳಿದು ಬಿಡುತ್ತವೆ. ಲೇಖನವನ್ನ ಬರೆಯಲು ಪ್ರಚೋದಿಸಿದ್ದು ಅಂತ ಒಂದು ಘಟನೆ. ಘಟನೆಗೆ ಮೊದಲು ನಾನು ಸಹ ತುಂಬ ಜನ ಯೋಚಿಸುವಂತೆ ಇದ್ದೆ. ಆದರೆ ಘಟನೆ ಘಟಿಸಿದ ಮೇಲೆ ನನ್ನ ಯೋಚನಾ ಲಹರಿಯ ದಿಕ್ಕನ್ನ ಬದಲಿಸಿಕೊಂಡೆ. ಹಾಗಾದರೆ ನಡೆದ ಘಟನೆ ಏನು ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಬಂದಿರೋದು ಸಹಜ. ಈಗ ಘಟನೆಯ ಬಗ್ಗೆ ಬರೋಣ. ಕೆಲವು ದಿನಗಳ ಕೆಳಗೆ ನಾನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ನನ್ನ ಹಿಂದಿನ ಅಂಕಣದಲ್ಲಿ ಒಬ್ಬ ವ್ಯಕ್ತಿ ಅವ್ಯಾಚ ಶಬ್ದಗಳಿಂದ ಯಾರನ್ನೋ ಬಯ್ಯುತ್ತಿರೋದು ಕೇಳಿಸಿತು. ಯಾರೋ ಕುಡಿದು tight ಆಗಿ ಬಾಯಿಯನ್ನು loose ಮಾಡಿಕೊಂಡಿದಾನೆ ಅಂತ ಸುಮ್ಮನಾದೆ. ಆದರೆ ಬರ್ತಾ ಬರ್ತಾ ಧ್ವನಿ ಜೋರಾಗತೊಡಗಿ ಆಸಕ್ತಿ ಇಲ್ಲದಿದ್ದರೂ ಕಡೆ ತಿರುಗುವಂತಾಯಿತು. ಆವೇಳೆಗಾಗಲೇ ವ್ಯಕ್ತಿಯ ಬಯ್ಗುಳದಿಂದ ಬೇಸತ್ತ ಜನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ನನಗೆ ಸ್ಪಷ್ಟವಾಗಿತ್ತು. ಆಗ ನನಗೆ ಗೊತ್ತಾದ ವಿಚಾರವೆಂದರೆ ವ್ಯಕ್ತಿ ಕುಡಿದಿರಲಿಲ್ಲ. ಮತ್ಯಾಕೆ ಹೀಗೆ ಎಂದು ಆಲೋಚಿಸುವ ಹೊತ್ತಿಗಾಗಲೇ ಅಲ್ಲಿರುವ ಹಲವರು ವ್ಯಕ್ತಿಯ ವರ್ತನೆಯಿಂದ ಬೇಸತ್ತು ಅವನನ್ನು ಹೊಡೆಯಲು ಹೋದರು. ಒಂದೆರಡು ಕ್ಷಣ ಅವರ ಕೈಗೆ ಸಿಗದಿದ್ದರೂ ನೂರಾರು ಜನ ಇದ್ದ ಸ್ಥಳವಾಗಿದ್ದರಿಂದ ಅವರಿಗೆ ಸಿಕ್ಕಿದ್ದಾಯಿತು. ಆಲ್ಲಿಂದ ಒಂದು ಹಿಂಸಾತ್ಮಕ ಘಟನೆಗೆ ಮೂಕ ಸಾಕ್ಷಿಯಾಗಿದ್ದೆ. ಸಾರ್ವಜನಿಕರಿಗೆ ಸಿಕ್ಕ ವ್ಯಕ್ತಿ ಅಸಹಾಯಕನಾಗಿದ್ದ. ಹೀಗೆ ಹತ್ತಾರು ಜನ ಒಮ್ಮೆಲೇ ದಾಳಿ ಮಾಡಿ ಬಟ್ಟೆ ಹರಿದು, ಮನಬಂದಂತೆ ಹೊಡೆದು ಅಲ್ಲಿಂದ ಓಡಿಸಿದ್ದು ನನ್ನ ಮನಸ್ಸಿನಲ್ಲಿ ಅಚ್ಚಾಗಿ ಚುಚ್ಚುತ್ತಿದೆ.

ಒಬ್ಬ ವ್ಯಕ್ತಿ ಎಂದು ಹೇಳಿದ್ದರ ಹಿಂದೆ ಉದ್ದೇಶವೇನೆಂದರೆ ಆ ವ್ಯಕ್ತಿ ನಮ್ಮ ನಿಮ್ಮಂತೆ ಕೈ ಕಾಲುಗಳನ್ನು ಹೊಂದಿದ್ದು, ಸಾಮಾನ್ಯ ಜೀವನವನ್ನು ನಡೆಸುತ್ತಿದ್ದರು, ನಾವು ಅವನನ್ನು/ಅವರನ್ನು ಭಿನ್ನವಾದ ವರ್ಗಕ್ಕೆ ಸೇರಿಸಿದ್ದೇವೆ. ಕೇವಲ ಲಿಂಗ ಸಂಭಂಧಿ ವೈಕಲ್ಯದಿಂದಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರಗಿತ್ತಂತಹ ಒಂದು ವರ್ಗ ಅದೇ ಹಿಜಡಾ / Transgender .

ಮೊದಲಿನಿಂದಲೂ ನಮ್ಮ ಸಮಾಜದಲ್ಲಿ ಹಿಜಡಾಗಳ ಬಗ್ಗೆ ಒಂದು ರೀತಿಯಾದ ಅಸಹ್ಯ ಭಾವನೆಯಿದೆ. ಹಾಗಾಗಿ ಅವರನ್ನು treat ಮಾಡುವ ರೀತಿಯೇ ಬೇರೆಯಾಗಿದೆ. ಹಿಜಡಾಗಳು ಬೇರೆ ಯಾವುದೋ ಗ್ರಹದಿಂದ ಬಂದಂತಹ, ಸಮಾಜ ಕಂಟಕ ಶಕ್ತಿಗಳು ಎಂಭ ಭಾವನೆ ನಮ್ಮಲ್ಲಿ ಆಳವಾಗಿ ಬೇರೂರಿದೆ. ಇದಕ್ಕೆ ಮುಖ್ಯ ಕಾರಣ ಅವರ ವರ್ತನೆ ಹಾಗು ವೃತ್ತಿ. ಭಿಕ್ಷೆ ಬೇಡುವುದು ಮತ್ತು ವೇಶ್ಯಾವಾಟಿಕೆ ಇವರ ಮುಖ್ಯವಾದ ವೃತ್ತಿ. ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಅವ್ಯಾಚ ಶಬ್ದಗಳಿಂದ ಜರಿಯುವ, ಕೈಸನ್ನೆಗಳನ್ನು ಮಾಡುವಂತಹ ವರ್ತನೆಗಳು ಅವರ ಬಗ್ಗೆ ಅಸಹ್ಯ ಭಾವನೆ ಮೂಡಿಸಿವೆ.

ಹಾಗಾದರೆ ಅವರ ಈ ವರ್ತನೆಗಳಿಗೆ ಕಾರಣವೇನು ? ಮುಖ್ಯವಾಹಿನಿಯಲ್ಲಿ ಇರುವ, ನಾಗರೀಕರೆನಿಸಿ ಕೊಂಡ, ವಿದ್ಯವಂತರದ ನಾವು ಅವರ ಇಂತಹ ವರ್ತನೆಗೆ ಕಾರಣವನ್ನು ಎಂದಾದರೂ ಯೋಚಿಸಿದ್ದೇವೆಯೇ. ಒಬ್ಬ ಅಸಹಾಯಕ ಹಿಜಡನನ್ನು ನೂರಾರು ಜನ ನಿರ್ದಯದಿಂದ ಹೊಡೆಯುವುದು ಸರಿಯೇ? ಅವರ ಭಿಕ್ಷಾಟನೆ, ವೇಶ್ಯಾವೃತ್ತಿ ಎಲ್ಲವೂ ತಪ್ಪು. ಆದರೆ ಅವರು ಭಿನಾಲಿನ್ಗಿಯಾಗಿ ಹುಟ್ಟಿದ್ದು / ಮಾರ್ಪಾಡಾಗಿದ್ದು ಅವರ ತಪ್ಪೇ? ಇವರ ಇಂತಹ ವರ್ತನೆಗಳಿಗೆ ಕಾರಣವನ್ನು ಹುಡುಕ ಹೊರಟರೆ ಮೊದಲಿಗೆ ಎದುರಾಗೋದು ಈ ಕೆಳಗಿನವು.
೧) ಸರ್ಕಾರದಿಂದ ಅವರಿಗೆ ಯಾವ ಸವಲತ್ತುಗಳು ಇಲ್ಲ.
೨) ರೇಶನ್ ಕಾರ್ಡ್ ಇಲ್ಲ, ಮತದಾನದ ಹಕ್ಕು ಇಲ್ಲ.
೩) ಶಿಕ್ಷಣ, ಆರೋಗ್ಯ, ಉದ್ಯೋಗ ಎಲ್ಲದರಲ್ಲೂ ತಾರತಮ್ಯ.
೪) ಸಾರ್ವಜನಿಕರಿಂದ ನಿಂದನೆಗೆ, ಅಪಹಾಸ್ಯಕ್ಕೆ ಒಳಗಾಗುವಿಕೆ.
೫) ತಮ್ಮ ಮನೆಯವರಿಂದಲೇ ಅವಜ್ಞೆ.

ಮನುಷ್ಯನಿಗೆ ಬೇಕಾದ ಮೂಲ ಸವಲತ್ತುಗಳಾದ ಆಹಾರ, ಆಶ್ರಯ, ಉಡುಪು ಇವುಗಳಿಗೊಸ್ಕರ ಪ್ರತಿನಿತ್ಯ / ಪ್ರತಿಕ್ಷಣ ಹೋರಾಡಬೇಕಾದಂತಹ ಪರಿಸ್ಥಿತಿ ಅವರುಗಳಿಗೆ. Basic need ಗಳಿಗೆ ಹೋರಾಡುವಂತಹ ಅವರ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆಯೇ? ಹಾಗಂತ ಅವರ ಭಿಕ್ಷಾಟನೆ, ವೇಶ್ಯಾವೃತ್ತಿಯನ್ನು ಬೆಂಬಲಿಸುತ್ತಿದ್ದೇನೆ ಎಂಬ ಅರ್ಥ ಅಲ್ಲ. ನಾನು ಅವೆಲ್ಲದರ ವಿರುದ್ಧ ಇದ್ದೇನೆ. ಈಗ ನಾನು ಹೇಳಲು ಹೊರಟಿರುವುದು ಅವರನ್ನು ನಾವ್ಯಾಕೆ ಅನುಕಂಪದಿಂದ, ಮಾನವೀಯತೆಯಿಂದ ನೋಡಬಾರದು. ಅವರಿಗೂ ನಮ್ಮಂತೆ ಮಸ್ಸಿರೋದಿಲ್ಲವೇ? ಅವರ ಭಾವನೆಗಳೇನು ಬರಡಾಗಿವೆಯೇ? ನೀವೇ ಯೋಚಿಸಿ.

Tuesday, July 1, 2008

ರಿಯಾಲಿಟಿ ಶೋಗಳು ಮತ್ತು ಮಕ್ಕಳು

ಇತ್ತೀಚಿನ ದಿನಗಳಲ್ಲಿ Reality Show ಗಳು ಪ್ರತಿಯೊಂದು ಚಾನೆಲ್ ಗಳನ್ನೂ ಆಕ್ರಮಿಸಿಕೊಂಡಿವೆ. ನನಗೆ ನೆನಪಿರುವ ಹಾಗೆ " ಮೇರಿ ಆವಾಜ್ ಸುನೋ " ನಾನು ನೋಡಿದ ಮೊದಲ Reality Show [Though it was not called Reality show at that time]. ಹದಿನೈದು ವರ್ಷಗಳ ಹಿಂದೆ ದೂರದರ್ಶನದಲ್ಲಿ ಅ ಕಾರ್ಯಕ್ರಮ ಪ್ರಸಾರವಾಗಿತ್ತು. ಅ ಕಾರ್ಯಕ್ರಮದ ಮೂಲಕ "ಸುನಿಧಿ ಚೌಹಾನ್ " ಎಂಬ ಅನಾಮಿಕ ಪ್ರತಿಭಾವಂತ ಗಾಯಕಿಯ ಪರಿಚಯ ಚಿತ್ರ ಜಗತ್ತಿಗೆ ಆಯಿತು. ಅಲ್ಲಿಂದೀಚೆಗೆ ಹತ್ತಾರು/ನೂರಾರು ರಿಯಾಲಿಟಿ ಶೋಗಳು ಆಗಿವೆ ಹಾಗು ಆಗುತ್ತಿವೆ. ಪ್ರತಿಯೊಂದು ರಿಯಾಲಿಟಿ ಶೋ ಮುಖ್ಯ " ಪ್ರತಿಭಾನ್ವೇಷಣೆ ".ಅನೇಕರು ಇಂಥಹ ಕಾರ್ಯಕ್ರಮಗಳಲ್ಲಿ ಜಯಶಾಲಿಯಾಗಿದ್ದರೂ ಹೊರಪ್ರಪಂಚದಲ್ಲಿ ಅವರು ಬೆಳೆದದ್ದು ಅತಿಕಡಿಮೆ. ಉದಾಹರಣೆಗೆ Indian Idol - I ಗೆದ್ದಂತಹ ಅಭಿಜಿತ್ ಸಾವಂತ್. ಅವನು ಗೆದ್ದ ಮೊದಲ ವರ್ಷದಲ್ಲಿ ಒಂದೆರಡು ಆಲ್ಬಮ್ ಬಂದಿದ್ದು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಅವನ ಸುದ್ದೀನೆ ಇಲ್ಲ. Indian Idol - 2,3 ವಿಜಯಶಲಿಗಳು ಎಲ್ಲಿದ್ದರೋ? Channel V ನಡೆಸಿದ ಸ್ಪರ್ಧೆಯಲ್ಲಿ ಗೆದ್ದ VIVA ಹುಡುಗಿಯರೂ ಈಗ ನಾಪತ್ತೆ...! ಹಾಗಾದರೆ ಈ ಸ್ಪರ್ಧೆಗಳೆಲ್ಲ ನಿಜವಾದ ಪ್ರತಿಭೆಗಳನ್ನು ಗುರುತಿಸುವುದರಲ್ಲಿ ಎಡವುತ್ತಿವೆಯೋ ಅಥವಾ ರಿಯಾಲಿಟಿ ಶೋ ಅನ್ನೋದೇ ಒಂದು ದೊಡ್ಡ ಗಿಮ್ಮಿಕ್ಕೋ ಅನ್ನೋ ಅನುಮಾನ ಕಾಡಲು ಶುರುವಾಗುತ್ತೆ.
ಸಧ್ಯಕ್ಕಿರುವ trend ಅಂದ್ರೆ Reality Shows for Kids. ಮಕ್ಕಳಲ್ಲಿರುವ ಗಾಯನ/ ನರ್ತನ / ಅಭಿನಯ ಪ್ರತಿಭೆಯನ್ನು ಗುರುತಿಸುವ ಸ್ಪರ್ಧೆಗಳು. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳೆಲ್ಲ ೧೨ ವರ್ಷಕ್ಕಿಂತ ಕೆಳಗಿನವರು. ಕೇವಲ ಹಿಂದಿ ಚಾನಲ್ಗಳಿಗೆ ಸೀಮಿತವಾದಂತಹ ಈ ಸ್ಪರ್ಧೆಗಳು ಈಗ ಪ್ರಾದೇಶಿಕ ವಾಹಿನಿಗಳಿಗೂ ಲಗ್ಗೆ ಇಟ್ಟಿವೆ. ಹಿಂದಿ ಚಾನೆಲ್ ಗಳಲ್ಲಿ ಪ್ರಸರವಾಗುವಂತಹ ಕಾರ್ಯಕ್ರಮಗಳಂತೂ ಅತಿಯಾದ ನಾಟಕೀಯತೆಯಿಂದ ಕೂಡಿರುತ್ತವೆ. ಈ ವಿಚಾರದಲ್ಲಿ ಪ್ರಾದೇಶಿಕ ವಾಹಿನಿಗಳು Better. ಅಲ್ಲದೆ ಜನರು ಸಹ ಇದನ್ನೇ ನಿಜ ಎಂದು ನಂಬುತ್ತಾರೆ.
ಹಾಗಾದರೆ ಇಂತಹ ಸ್ಪರ್ಧೆಗಳನ್ನು ನಡೆಸುವುದು ತಪ್ಪೇ ? ಅನ್ನೋ ಪ್ರಶ್ನೆ ಎದುರಾಗುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ತಪ್ಪಲ್ಲ. ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ಒಳ್ಳೆಯ ಕೆಲಸ. ನನಗೆ ಅಸಮಾಧಾನ ಇರುವುದು ಗುರುತಿಸಲು ಅನುಕರಿಸುವ ಕ್ರಮದ ಬಗ್ಗೆ [ಮಾನದಂಡದ ಬಗ್ಗೆ ಅಲ್ಲ ]. ಚಾನಲ್ ನಿರ್ವಾಹಕರು, ಕಾರ್ಯಕ್ರಮ ನಿರೂಪಕರು, ತೀರ್ಪುಗಾರರು ತಾವು ಪ್ರತಿಭೆಯನ್ನು ಗುರುತಿಸುವ ಕ್ರಮ ಸರಿಯಿದೆಯೇ ಎಂದು ಪರಾಮರ್ಶಿಸುವ ವೇಳೆ ಬಂದಿದೆ. ಪ್ರತಿಭಾನ್ವೇಷಣೆ ಯಲ್ಲಿ ತೀರ್ಪುಗಾರರ ಪಾತ್ರ ಅತ್ಯಂತ ಮಹತ್ವದ್ದು. Reality Show ಹೆಸರಿನಲ್ಲಿ ಸ್ಪರ್ಧಿಗಳನ್ನು ಬಯ್ಯುವ, ಹೀಗೆಳೆಯುವ, ಕೂಗುವ ತೀರ್ಪುಗಾರರು ಮಕ್ಕಳ ಎಳೆ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ಯೋಚಿಸಬೇಕು. There immeture attitude towards kids certainly will have negative impact. ಪ್ರತಿಯೊಬ್ಬ ತೀರ್ಪುಗಾರ Children Psychologyಯನ್ನು ಅರ್ಥಮಾಡಿಕೊಳ್ಳಬೇಕು. Humiliation they undergo during judment is unbearable. It may dishearten the kid.
ಎರಡು ದಿನಗಳ ಹಿಂದೆ ಇಂತಹದೇ ಕಾರ್ಯಕ್ರಮದಲ್ಲಿ ತೀರ್ಪುಗರರಿಂದ ಅವಜ್ಞೆಗೊಳಗಾದ ಸ್ಪರ್ಧಿಯೊಬ್ಬಳು ಸ್ಥಳದಲ್ಲಿಯೇ ಮೂರ್ಛೆಹೊಂದಿದಲ್ಲದೆ ಮಾನಸಿಕ ಸಮತೋಲನವನ್ನು ಕಳೆದುಕೊಂಡ ಅಮಾನವೀಯ ಘಟನೆ ಕೋಲ್ಕತ್ತಾ ದಿಂದ ವರದಿಯಾಗಿದೆ. ತೀರ್ಪುಗಾರರ ಇಂತಹ ಕೆಟ್ಟ ಪ್ರತಿಕ್ರಿಯೆಯಿಂದ ಸಿವಂಜಿ ಸೇನಗುಪ್ತ (16) ಎಂಬ ಹುಡುಗಿ NIMHANS ನಲ್ಲಿ ಚಿಕಿತ್ಸೆ ಪಡೆಯುವ ಮಟ್ಟಕ್ಕೆ ಹೋಗಿದೆಯೆಂದರೆ, ಇವಳಿಗಿಂತ ಚಿಕ್ಕ ಮಕ್ಕಳ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಿದೆ. ಇದರಿಂದ ಒಂದು ಮಗು ಹಾಡುವುದನ್ನೂ / ನರ್ತಿಸುವುದನ್ನೋ ನಿಲ್ಲಿಸಿದರೆ ಅದಕ್ಕೆ ಯಾರು ಹೊಣೆ? ತಾನು ಚೆನ್ನಾಗಿ perform ಮಾಡೋದಿಲ್ಲ ಎನ್ನುವ ಕೀಳರಿಮೆಗೆ [Inferiority Complex] ಒಳಗಾದರೆ ಯಾರು ಹೊಣೆ? ತೀರ್ಪುಗಾರರ ತೀರ್ಪು ಸ್ಪರ್ಧಿಗಳ ಆ ಕ್ಷಣದ performanceನ್ನು ಮಾತ್ರ ಅವಲಂಬಿಸಿರತ್ತೆ ಅನ್ನೋದು ಅರ್ಥಮಾಡಿಕೊಳ್ಳುವಷ್ಟು ಮಕ್ಕಳ ಮನಸ್ಸು ಮಾಗಿರೋದಿಲ್ಲ [ಪಕ್ವವಾಗಿರೋದಿಲ್ಲ] .
ಈ ತರಹದ ಮಕ್ಕಳ ಕಾರ್ಯಕ್ರಮಗಳನ್ನು ಅವರ ಭಾವನೆಗಳಿಗೆ ಘಾಸಿಯಾಗದಂತಹ ರೀತಿಯಲ್ಲಿ ರೂಪಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ಒಂದಿಷ್ಟು ನಿಭಂದನೆಗಳಿರಬೇಕು. ಮಕ್ಕಳ ಭಾವನೆಗಳನ್ನು ರಕ್ಷಿಸುವಂತಹ ಕಾನೂನುಗಳ ರಚನೆಯಾಗಬೇಕು. ತಂದೆ ತಾಯಿ ಕೂಡ ಮಕ್ಕಳನ್ನು ಇಂತಹ ಸ್ಪರ್ಧೆಗಳಿಗೆ ಮಾನಸಿಕವಾಗಿ ಸಿದ್ಧಪಡಿಸಿರಬೇಕು. ಗೆಲ್ಲುವುದೇ ಮೂಲಮಂತ್ರವಾದಾಗ ಸೋಲುವ ಕ್ಷಣಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಗೆಲ್ಲುವುದು ಅನಂತರ ಎನ್ನುವುದನು ಮನದಟ್ಟು ಮಾಡಿರಬೇಕು.
ನಾನು ಈ ತರಹದ Reality Show ಗಳನ್ನೂ ಹೆಚ್ಚು ನೋಡದಿದ್ದರೂ ಕೆಲವೊಂದನ್ನು ಕುತೂಹಲದಿಂದ ವೀಕ್ಷಿಸಿದ್ದೇನೆ. Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ Little Champs ನನ್ನ ಗಮನ ಸೆಳೆದಿರುವ ಹಲವು ಸ್ಪರ್ಧೆಗಳಲ್ಲೊಂದು. ರಾಜೇಶ್ ಕೃಷ್ಣನ್ ಮಕ್ಕಳೊಂದಿಗೆ ಚೆನ್ನಾಗಿ ಮಾತನಾಡಿದರೂ ಕಾರ್ಯಕ್ರಮ ನಿರ್ವಾಹಕಿಯಾದ [Show Host] ಅರ್ಚನ ಉಡುಪ [She is also Zee sarigamapa winner]ಬಗ್ಗೆ ನನಗೆ ಒಂದಿಷ್ಟು ಅಸಮಾಧಾನವಿದೆ. Elimination Round ಬಂದಾಗ ಒಂದಿಷ್ಟು ಮಕ್ಕಳು Danger Zone ಗೆ ಬರುತ್ತಾರೆ. ಅವರಲ್ಲಿ ಇಬ್ಬರು ಸ್ಪರ್ಧೆಯಿಂದ ಹೊರಗೆ ಹೋಗಬೇಕಾಗುತ್ತದೆ. ಈ ತೀರ್ಪನ್ನು ಪ್ರಕಟಿಸಬೇಕಾದರೆ ಮಾಡುವ ನಾಟಕ ಅನಗತ್ಯ ಮತ್ತು ಅನಪೇಕ್ಷಿತ. ಆ ಪುಟ್ಟ ಮಕ್ಕಳನ್ನು ಟೆನ್ಶನ್ಗೆ ನೂಕಿ ತೀರ್ಪು ಪ್ರಕಟಿಸುವ ಅಗತ್ಯ ಇದೆಯಾ? ಅರ್ಚನ ಉಡುಪಳಾ ಮಾತಿನಿಂದ [ಎಳೆದು ಎಳೆದು ಮಾತಾಡುವ ರೀತಿಯಿಂದ ] ಅನೇಕ ಮಕ್ಕಳು ಕೊನೆಗೆ ಅತ್ತೇಬಿಟ್ಟಂತ ಪ್ರಸಂಗಗಳು ನಡೆದಿವೆ. ಈ ವಿಚಾರ ಅರ್ಚನ ಉಡುಪಳಿಗೆ ಮಾತ್ರ ಅಲ್ಲ ಇಂತಹ ಕಾರ್ಯಕ್ರಮವನ್ನು ನಿರ್ವಹಿಸುವ ಎಲ್ಲರಿಗು ಅನ್ವಯಿಸುತ್ತದೆ. ಇನ್ನು ಮುಂದಾದರು TV ಚಾನಲ್ಗಳು, ಸರ್ಕಾರ ಕೂಡ ಶಿನ್ಜಿನಿ ಸೇನಗುಪ್ತದಂತಹ ಪ್ರಕರಣದಿಂದ ಎಚ್ಚೆತ್ತುಕೊಳ್ಳುತ್ತಾರೆ ಅನ್ನೋ ಆಶಾಭಾವನೆ ನನ್ನದು.

Wednesday, June 25, 2008

ಪ್ರೀತಿ - ನೆನಪು

ಮೊದ ಮೊದಲು
ಅವಳ ಪ್ರೀತಿ
ಪೂರ್ಣಚಂದ್ರನಂತೆ
ಕೊನೆ ಕೊನೆಗೆ ಯಾಕೋ
ಅವಳ ಪ್ರೀತಿ
ಕರಗುತ್ತಿರೋ ಚಂದ್ರನಂತೆ

ಮೊದ ಮೊದಲು
ಅವಳು
ದೂರ ಇದ್ದರೂ
ಹತ್ತಿರ
ಕೊನೆ ಕೊನೆಗೆ ಯಾಕೋ
ಅವಳು
ಹತ್ತಿರ ಇದ್ದರೂ
ದೂರ

ಮೊದ ಮೊದಲು
ಅವಳ ನೆನಪು
ಪೂರ್ಣಚಂದ್ರನಂತೆ
ಕೊನೆ ಕೊನೆಗೆ ಯಾಕೋ
ಅವಳ ನೆನೆಪು
ಕರಗುತ್ತಿರೋ ಚಂದ್ರನಂತೆ

--ನವೀನ ಕೆ.ಎಸ್.

Tuesday, June 24, 2008

ಇಳೆಗೆ ಬೇಕು ಮಳೆ

ಹಸಿರು ಬೆಳೆಯಲು
ಉಸಿರು ಉಳಿಯಲು
ಇಳೆಗೆ ಬೇಕು ಮಳೆ

ಇಳೆಯ ಕಿಚ್ಚು ತಣಿಸಲು
ಪ್ರಕೃತಿಯು ಹಚ್ಚೆ ಬರೆಯಲು
ಇಳೆಗೆ ಬೇಕು ಮಳೆ

ಅಹಂಕಾರದ ಕೊಳೆ ತೊಳೆಯಲು
ಹಣದ ಹುಚ್ಚನು ಬಿಡಿಸಲು
ಇಳೆಗೆ ಬೇಕು ಮಳೆ

ಜೀವನವು ಜೀಕಲು
ಮನವು ಚಿಂತಿಸಲು
ಇಳೆಗೆ ಬೇಕು ಮಳೆ


-- ನವೀನ ಕೆ.ಎಸ್.

Wednesday, June 11, 2008

Kabhi Kabhi

I am A.R. Rahaman fan. He always creats which something unimaginable. His recent album is Jaane Tu...ya jaane na. Nowadays i am addicted to one of the songs in the album. The song is Kabhi Kabhi Aditi zindagi main aisa lagta hai..... if you are not a rahaman nothing to worry just listen to this particular song. Sure you are gonna like it.

ಸಂಭೋದನೆಯಾ ಬೆನ್ನು ಹತ್ತಿ.............

"ಮಾಮ್ಸ್, ಸ್ವಲ್ಪ ನಿನ್ ಪೆನ್ಸಿಲ್ ಕೊಡ್ತಿಯ ಮಾಮ್ಸ್" ಎಂಬ ಮಾತು ಕೇಳಿ ನನ್ನ ಮುಂದೆ ನಿಂತಿದ್ದ ದಢೂತಿ ದೇಹದ ಹುಡುಗನನ್ನ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡತೊಡಗಿದೆ. ನನಗೆ ಆಶ್ಚರ್ಯ ಆಗಿದ್ದು ಅವನ ದಢೂತಿ ದೇಹ ಅಲ್ಲ ಬದಲಾಗಿ ಅವನು ಉಪಯೋಗಿಸಿದ 'ಮಾಮ್ಸ್' ಎಂಬ ಪದ ಕೇಳಿ. ತೀರ್ಥಹಳ್ಳಿ ಸಮೀಪದ ಪುಟ್ಟ ಹಳ್ಳಿಯ ಪುಟ್ಟ ಪ್ರಪಂಚದಿಂದ PUC ಓದಲು ಬಂದ ನನಗೆ ಈ ಸಂಭೋದನೆ ಆಶ್ಚರ್ಯ ತರಿಸಿದ್ದು ಆಶ್ಚರ್ಯ ಅಲ್ಲ. ಇದು ನಡೆದು ತುಂಬ ವರ್ಷಗಳಾಗಿದ್ದರೂ ನನ್ನ ಮನಸ್ಸಿನಲ್ಲಿ ಚೆನ್ನಾಗಿ Print ಆಗಿದೆ. ಈ ಘಟನೆಯನ್ನು ನೆನೆದ ಮೇಲೆ ನಾನು ಸಂಭೋದನೆಯ ಬೆನ್ನು ಹತ್ತಿ ಹೊರಟೆ. ಈ ಘಟನೆಯ ನೆನಪಿನಿಂದ ನನ್ನ ಯೋಚನಾ ತರಂಗವು ಸಂಭೋದನೆಯೆಡೆಗೆ ಹರಿಯತೊಡಗಿತು. ಸಾಮಾನ್ಯವಾಗಿ ಎಲ್ಲರೂ ಬಳಸುವ ಪದಗಳು, ೧. ಮಗ ೨. ಗುರು ೩. ಏನಮ್ಮ ೪. ಶಿಷ್ಯ/ಸಿಸ್ಯ ೫. ಮಚ್ಚ/ಮಚ್ಚಿ ೬. ಮಾಮ್ಸ್ ೭. dude ೮. ಮಾಮ ೯. buddy ೧೦. da ೧೧. ಮಾರಾಯ ೧೨. ಹೋಯ್ ೧೩. ರೀ ೧೪. ಅಯ್ಯ. ೧೫ ಸಿವಾ ೧೬. ದೇವ್ರು ೧೭. ಅಪ್ಪ ಇತ್ಯಾದಿ ಇತ್ಯಾದಿ .

High School ನಲ್ಲಿ ಓದಬೇಕಾದರೆ ನಾವು ತುಂಬ ಗರ್ವದಿಂದ friends ನ ಅಥವಾ juioners ನ ' ಏನಮ್ಮ ' ಅಂತ ಕರೀತಿದ್ವಿ. ಆ ರೀತಿ ಕರೆದಾಗ ಅವರು ನಮ್ಮನ್ನು ನೋಡು ದ್ರುಷ್ಟಿನೆ ಬೇರೆ ಬದಲಾಗ್ತಿತ್ತು. ನಾವು ಅವರುಗಳಿಗೆ hero ಗಳ ತಾರಾ ಕಾನಿಸುತ್ತಿದ್ವಿ ಅಥವ ನಾವೇ ಹಾಗೆ ಅಂದುಕೊಳ್ತಾ ಇದ್ವಿ . Primary School ನಲ್ಲಿ ಮೇಸ್ಟ್ರು ಗಳನ್ನ ಸರ್ ಅಂತ ಕರೆದರೆ lady ಮೇಸ್ಟ್ರು ಗಳನ್ನ ಅಂದ್ರೆ madam ಗಳನ್ನ madam ಅನ್ನದೇ teacher ಅನ್ತಿದ್ವಿ . [ಈಗ್ಲೂ ಈ ಪದ್ಧತಿ ಜಾರಿಯಲ್ಲಿದೆ ]. ಹುಡುಗರಿಗಷ್ಟೇ ಅಲ್ಲದೆ ತಂದೆ ತಾಯಿ ಯಾರಿಗೂ teacher ಅನ್ನೋ ಪದ ಸ್ತ್ರೀಲಿಂಗ ಸಂಭೋದನೆ ಪದವಾಗಿ ಮಾತ್ರ ತಿಳಿದಿರೋದು ಯಾಕೆ ಅನ್ನೋದು ನನ್ನ Billion Dollor ಪ್ರಶ್ನೆ....? High School ಗೆ ಬಂದ ಮೇಲೆ ಟೀಚರ್ ಹೋಗಿ madam ಆಯಿತು, ಇಂಜಿನಿಯರಿಂಗ್ ಬಂದ ಮೇಲೆ madam ಹೋಗಿ ' ಮ್ಯಾಮ್ ' ಆಯಿತು. ಎಂಥ ಬದಲಾವಣೆ........!

'ಏನಮ್ಮ', 'ಗುರು', 'ಶಿಷ್ಯ' ನಾನು ಹತ್ತು ಹದಿನೈದು ವರ್ಷಗಳಿಂದ ಹೇಳ್ತಾ / ಕೇಳ್ತಾ ಬಂದಿರೋ ಪದಗಳು. ಮಚ್ಚ ಅನ್ನೋದು [from tamil] ಇತ್ತೀಚಿನ ವರ್ಷಗಳಲ್ಲಿ ಕೇಳಿಬರ್ತಿರೋ ಪದ. Dude, buddy ಇವೆಲ್ಲ ತುಂಬ sophisticated ಆಗಿರೋ ಅಂದ್ರೆ, ಇಂಗ್ಲಿಷ್ ನಲ್ಲೆ ಹುಟ್ಟಿ ಬೆಳೆದ ಹೈಕಳು ಉಪಯೋಗಿಸೋ ಸಂಭೋದನೆ.

ಊರಿನಲ್ಲಿ ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ನಮಗೆ ಸಣ್ಣಯ್ಯ ಅಂತ ಕರದ್ರೆ, ನಮ್ಮ ತಂದೆಗೆ ಅಯ್ಯ ಅಂತ ಕರೀತಿದ್ರು. ಅವರು ನಮ್ಮನ್ನು superior ಅಂತ consider ಮಾಡ್ತಿದ್ರೋ ಅಥವಾ ಅವರಲ್ಲಿ inferiority complex ಇತ್ತೋ ಅಥವ ನಾವು ಹಾಗೆ ಕರೀಲಿ ಅಂತ expect ಮಾಡ್ತಿದ್ವೋ ಎನೊ. ಆದ್ರೆ ಅವರು ಹಾಗೆ ಕರೆದಾಗ ನಮಗೆ ಸಂತೋಷವಾಗುತ್ತಿತ್ತು. ಇನ್ನು ದ.ಕ./ಉ.ಕ./ಶಿವಮೊಗ್ಗ ಕಡೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಪದ 'ಮಾರಾಯ'. "ಇವತ್ತು ಯಾಕೋ ಹಾಳಾದ ಬಸ್ಸು ಇನ್ನೂ ಬರಲಿಲ್ಲ ಮಾರಾಯ" ಅನ್ನೋ ವಾಕ್ಯದಲ್ಲೇ ಎಲ್ಲ ಅಡಗಿದೆ ಸ್ವಾರಸ್ಯ.

ಗಂಡನನ್ನು ಹೆಂಡತಿ ಹೆಸರಿಟ್ಟು ಕರೆಯೋದು ನಮ್ಮ ಸಂಪ್ರದಾಯದಲ್ಲಿ ಇಲ್ಲ. ಹಾಗಾಗಿ ಗಂಡಂದಿರನ್ನು ಕರೆಯುವುದಕ್ಕೆ ಅವರು ಕಂಡುಕೊಂಡಿರೋ ಶಬ್ಧ ' ಏನೂಂದ್ರೆ ' [ ಈಗ ಇದನ್ನ ಸಿನೆಮಾ ದಲ್ಲಿ ಬಿಟ್ಟರೆ ಇನ್ನೆಲ್ಲು ಉಪಯೋಗಿಸೊಲ್ಲ], 'ರೀ ' [ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಬಳಕೆಗೆ ಬಂದಿರೋ ಪದ ].

ಸಂಭೋದನೆಗಳು ಕೇವಲ ಸಂಭೋದನೆಗಳಲ್ಲ ಅವು ಗುರುಹಿರಿಯರಲ್ಲಿ ಗೌರವ , ಚಿಕ್ಕವರಲ್ಲಿ ಪ್ರೀತಿ, ಸಮಾನ ಮನಸ್ಕರಲ್ಲಿ ಆತ್ಮೀಯತೆಯನ್ನು ಸೂಚಿಸುತ್ತವೆ.


ಕೊನೆ ಹನಿ: ಮೇಲೆ ಪಟ್ಟಿ ಮಾಡಿದ ಪದಗಳು ನಾನು ಉಪಯೋಗಿಸಿದ ಅಥವ ಕೇಳಿದ ಪದಗಳು ಮಾತ್ರ. ಪ್ರಪಂಚದಲ್ಲಿ ೧೦೦೦ ಕ್ಕೂ ಹೆಚ್ಚು ಭಾಷೆಗಳಿವೆ. ಅಲ್ಲೆಲ್ಲಾ ಹೇಗೋ.........


Monday, June 2, 2008

ನಾಮಕರಣ ವಿವಾದ

ಕೆಲವು ದಿನಗಳಿಂದ ನನ್ನ ಗಮನ ಸೆಳೆದ/ಚರ್ಚಿಸಲ್ಪಟ್ಟ ವಿಚಾರಗಳಲ್ಲಿ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ನಾಮಕರಣದ ಬಗ್ಗೆ ಎದ್ದಿರುವ ವಿವಾದ. ಕರ್ನಾಟಕ ರಕ್ಷಣಾ ವೇದಿಕೆ ಈ ವಿಚಾರವಾಗಿ ತನ್ನ ಬೇಡಿಕೆಯನ್ನು ಇಡುತ್ತಲೇ ಬಂದಿದೆ. ನಿಲ್ದಾನಕ್ಕಾಗಿ ಜಮೀನನ್ನು ಕಳೆದುಕೊಂಡ ರೈತರ ಕುಟುಂಬದ ಸದಸ್ಯರಿಗೆ ನೌಕರಿ ಕೊಡಬೇಕು, ಪ್ರಮುಖ ಹುದ್ದೆಗಳಿಗೆ ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಹಾಗು ನಿಲ್ದಾಣಕ್ಕೆ ಕೆಂಪೇಗೌಡನ ಹೆಸರಿಡಬೇಕು ಎನ್ನುವುದು ಕರವೇ ಪ್ರಮುಖ ಬೇಡಿಕೆಗಳು. ಇವುಗಳಲ್ಲಿ ಬಹುಚರ್ಚಿತವಾದ ಬೇಡಿಕೆ ಎಂದರೆ ನಾಮಕರಣ. ಈ ಬೇಡಿಕೆಗೆ ಕಾರಣ ಬೆಂಗಳೂರು ಕೆಂಪೇಗೌಡನಿಂದ ನಿರ್ಮಿತವಾಗಿದೆ ಎಂಬುದು. ಈ ವಿಚಾರವಾಗಿ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಪ್ರತಪಸಿಂಹ ನ ಲೇಖನದಲ್ಲಿ BIAL ಗೆ ಕೆಂಪೇಗೌಡನ ಬದಲು ವಿಶ್ವೇಶ್ವರಯ್ಯ ಅವರ ಹೆಸರು ಸೂಕ್ತ ಎಂದು ಸಮರ್ಥಿಸಲಾಗಿದೆ. ಅದಕ್ಕೆ ಚಂದ್ರಶೇಖರನ್ ಕಲ್ಯಾಣ ರಾಮನ್ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. [ ಎರಡೂ ಲೇಖನಗಳು thatskannada.com ನ ಅಂಕಣಗಳು ವಿಭಾಗದಲ್ಲಿ ಲಭ್ಯವಿದೆ .] ಆದರೆ ರಾಮನ್ ಅವರ ವಾದವನ್ನು ನಾನು ಒಪ್ಪುವುದಿಲ್ಲ. ಇತಿಹಾಸದ ಪುಟಗಳನ್ನು ತಗೆದು ನೋಡಿದಾಗ ನಮಗೆ ತಿಳಿದು ಬರುವ ವಿಚಾರವೆನೆಂದರೆ ಭಾರತದಲ್ಲಿರೋ ಹಲವಾರು ನಗರಗಳೆಲ್ಲ ರಾಜರಿಂದಲೇ ಕಟ್ಟಲ್ಪತ್ತಿವೆ ಎಂದು. ಹಾಗಂತ ಹೇಳಿ ಆಧುನಿಕ ಭಾರತದಲ್ಲಿ ನಿರ್ಮಾಣ ಆಗೋ ಎಲ್ಲ ಕಟ್ಟಡಗಳಿಗೂ ಅವರ ಹೆಸರುಗಳನ್ನೂ ಇಡೋಕಾಗಲ್ಲ. ಬೆಂಗಳೂರು ನಿರ್ಮಾತ್ರು ಕೆಂಪೇಗೌಡನ ಹೆಸರನ್ನ ಅಮರ ಮಾಡೋಕೆ

೧. ಕೆಂಪೇಗೌಡನ ಹೆಸರಲ್ಲಿ ರಸ್ತೆ ಇದೆ.

೨. ಶಾಪಿಂಗ್ ಕಾಂಪ್ಲೆಕ್ಸ್ ಇದೆ.

೩. ಶಾಲೆ ಕಾಲೇಜ್ ಗಳು ಇವೆ.

೪. ಬಸ್ ಸ್ಟ್ಯಾಂಡ್ ಇದೆ.

ಅದಲ್ಲದೇನೆ BBMP ಯವರು ಕೆಂಪೇಗೌಡ ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿದ ಗೋಪುರಗಳ ಪ್ರತಿಕ್ರುತಿಯೊಂದನ್ನು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಅಗಸದೆತ್ತರದ ಕಂಭದ ಮೇಲೆ ನಿರ್ಮಿಸಿದ್ದಾರೆ. ಇಷ್ಟೆಲ್ಲಾ ಕೆಂಪೇಗೌಡನ ಹೆಸರನ್ನು ಅಮರ ಮಾದುವುದಕ್ಕೊಸ್ಕರ ಸಾಕಲ್ಲವೇ ! ಇನ್ನು ವಿಶ್ವೇಶ್ವರಯ್ಯನವರು ಆಧುನಿಕ ಕರ್ನಾಟಕವನ್ನು ನಿರ್ಮಾಣ ಮಾಡಲು ಪಟ್ಟ ಶ್ರಮ, ಅವರ ಮುಂದಾಲೋಚನೆಗಳ ಬಗ್ಗೆ ಕರ್ನಾಟಕದ ಜನತೆಗೆ ಏನು ಇಡೀ ಭಾರತಕ್ಕೆ ಗೊತ್ತಿದೆ. ಅದಕ್ಕೆ ಅಲ್ವೆ ಅವರಿಗೆ ಭಾರತ ರತ್ನ ದೊರೆತಿರುವುದು! ಬೆಂಗಳೂರು ಕೇವಲ ಬೆಂಗಳೂರಿನವರಿಗೆ ಅಥವಾ ಕೆಂಪೇಗೌಡನಿಗೆ ಸಂಭಂಧ ಪಟ್ಟಿದಲ್ಲ. ಅದು ಇಡೀ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ಹಾಗೇನೇ BIAL ಕೂಡ ಬೆಂಗಳೂರಿಗೆ ಮಾತ್ರವಲ್ಲ ಅದು ಇಡೀ ಕರ್ನಾಟಕದ ಹೆಮ್ಮೆ. ಅದಕ್ಕೊಸ್ಕರಾನೆ ವಿಶ್ವೇಶ್ವರಯ್ಯನವರ ಹೆಸರನ್ನು ಇಡೋದು ಸೂಕ್ತ ಅನ್ನೋದು ಪ್ರತಾಪ್ ಸಿಮ್ಹನ ವಾದ. ನಿಮಗೂ ಕೂಡ ಇದನ್ನು ಅರ್ಥ ಮಾಡಿ ಕೊಳ್ಳುವಸ್ತು ತಾಳ್ಮೆ ಇದೆ ಅಂತ ನನ್ನ ಭಾವನೆ.

BMTC ನ ನಾನು ಯಾಕೆ sue ಮಾಡಬಾರದು...?

ಕೆಲವು ದಿನಗಳ ಹಿಂದೆ ನಾನು BMTC office ಗೆ Smart Card ಮಾಡಿಸಲು ಹೋಗಿದ್ದೆ . ಮೂರು ವರ್ಷ ಅವಧಿಯ Smart Card ಮಾಡಿಸಲು ಐದು ವರ್ಷವಾದರೂ ಮುಗಿಯದ ಸರತಿಯ ಸಾಲಿನಲ್ಲಿ ನಿಂತು ಅಂತೂ ಇಂತೂ ೧೦೦/- ಕಟ್ಟಿ Smart Card ಪಡೆಯುವ ಹೊತ್ತಿಗೆ ಬರೋಬ್ಬರಿ ಒಂದು ಘಂಟೆ ಬೇಕಾಯಿತು. ಆದ್ರೆ ನಾನು BMTC ಮೇಲೆ ಕೇಸ್ ಹಾಕಬೇಕೆನ್ದಿರುವುದು ಯಾಕೆ ಅನ್ನೋದು ನಿಮಗೆಲ್ಲರಿಗೂ ಬಂದಿರಬಹುದಾದ Bisleri ನೀರಿನಸ್ಟು ಶುದ್ಧವಾದ ಅನುಮಾನ! ಅದಕ್ಕೆ Smart Card ಪಡೆಯುವ ವಿಧಾನವನ್ನು ನಾನು ವಿವರಿಸಬೇಕಾಗುತ್ತದೆ. Smart Card ತೆಗೆದುಕೊಳ್ಳುವ process ಅನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.
೧. Ground Floor ನಲ್ಲಿ ಇರೋ counter ನಲ್ಲಿ ೧೦೦/- ರೂಪಾಯಿಯನ್ನು ಕಟ್ಟಿ, ಹಳೆಯ id card ಕೊಟ್ಟು ರಶೀತಿ ಪಡೆಯಬೇಕು.
೨. ನಂತರ 2nd floor ನಲ್ಲಿ ಇರುವ counter ಗಳಲ್ಲಿ ನಮ್ಮ ಭಾವಚಿತ್ರದೊಂದಿಗೆ ವಿವರಗಳನ್ನು Computer ನಲ್ಲಿ Save ಮಾಡಲಾಗುತ್ತದೆ.
೩. save ಆದ ವಿವರಗಳಿಂದ ಸ್ಮಾರ್ಟ್ ಕಾರ್ಡ್ ಪ್ರಿಂಟ್ ಮಾಡಿಕೊಡಲಾಗುತ್ತದೆ.
ಹಾಗಾದರೆ ನಾನು BMTC ಮೇಲೆ ಮುನಿಸಿಕೊಂಡಿರುವುದು ಏಕೆ? ಎ process ನ ಎರಡನೆ ಭಾಗ ನಡೆಯುವುದು 2nd floor ನ haal ಒಳಗಡೆ ಹೋಗಬೇಕಾದರೆ ನಮ್ಮ ಪಾದರಕ್ಷೆಗಳನ್ನು ಹೊರಗಡೆ ಬಿಟ್ಟು ಹೋಗಬೇಕು. ಸಮಸ್ಯೆ ಶುರುವಾಗಿದ್ದೆ ಇಲ್ಲಿಂದ. ಫೋಟೋ ತೆಗೆಸಿ ಸ್ಮಾರ್ಟ್ ಕಾರ್ಡ್ ತೆಗೆದುಕೊಂಡು ಹೊರಗೆ ಬಂದು ನೋಡೋಹೊತ್ತಿಗೆ ಹೊರಗೆ ಬಿಟ್ಟಿದ್ದ ಪಾದರಕ್ಷೆಗಳು ಮಾಯ... ಎಲ್ಲಿ ಹೋದವೋ ಎಲ್ಲ ಮಾಯವಾದವು ಎಂದು ಹಾಡುತ್ತ ಹುಡುಕಿ ಹುಡುಕಿ ಸುಸ್ತಾದ ನಂತರ ನನಗೆ ಅರಿವಾದ ವಿಷಯವೆಂದರೆ ಯಾರೋ ಪುಣ್ಯಾತ್ಮರು ನನ್ನ ಚಪ್ಪಲಿಗಳನ್ನ ಎಗರಿಸಿದಾರೆ ಅಂತ . ಈಗಾಗಲೇ ನಿಮಗೆ ವಿಷ್ಯ ತಕ್ಕಮಟ್ಟಿಗೆ ಅರ್ಥ ಆಗಿದೆ ಎಂದು ತಿಳಿದಿದ್ದೇನೆ. ಆದ್ರೆ ಅ ಚಪ್ಪಲಿ ಕಳ್ಳನಿಗೆ ತಿಳಿದೆ ಇರೋ ವಿಚಾರ ಅಂದ್ರೆ ನನ್ನ ಚಪ್ಪಲಿಗಳು ಅವತ್ತೇ ತೊಳೆದಿದ್ದರಿಂದ ಹೊಸದರ ಹಾಗೆ ಕಾಣುತ್ತಿದ್ದವಷ್ಟೇ; ಆದ್ರೆ ಹರಿದು ಹೋಗೋ stage ಗೆ ಬಂದಿದ್ದವು. ಅದೇನೆ ಇರ್ಲಿ ನನಗೆ BMTC ಆದ ಒಟ್ಟು ನಷ್ಟ ನ ಹೀಗೆ calculate ಮಾಡಬಹುದು.
ನನ್ನ ಕಳೆದುಹೋದ ಚಪ್ಪಲಿಯ ಬೆಲೆ + ಹೊಸದಾಗಿ ಕೊಂಡ ಚಪ್ಪಲಿಯ ಬೆಲೆ + ನಾನು ಚಪ್ಪಲಿ ಕಳೆದುಕೊಂಡು ಪಟ್ಟ ಹಿಂಸೆಗೆ compensation. ಇಷ್ಟು ಮೊತ್ತವನ್ನು BMTC ನನಗೆ ತುಂಬಿಕೊಡಬೇಕು ಎನ್ನುವುದು ನನ್ನ ವಾದ. ಹೇಳಿ ನಾನು BMTC ನ sue ಮಾಡೋದು ತಪ್ಪಾ ?

Friday, February 22, 2008

I dropped one and a half hour early at airport

I dropped one and a half hour early at airport for my FIRST AIR travel. I along with my colleague Shreevathsan headed to Hyderabad for project work. It was drizzling in the early morning. Kingfisher ವಿಮಾನದಲ್ಲಿ ನಮ್ಮ ಟಿಕೆಟುಗಳು book ಆಗಿದ್ದವು. Boarding pass ತಗೊಂಡು ನಿರಿಕ್ಷಣಾ ಕೊಠಡಿಯಲ್ಲಿ ಕುಳಿತ ನಮಗೆ ಕೆಂಪು ಸುಂದರಿಯರ [Kingfisher Airhostess] ನುಣುಪಾದ ಕಾಲುಗಳನ್ನು ನೋಡ್ತಾ Security Check ಮುಗಿದದ್ದೇ ತಿಳೀಲಿಲ್ಲ. ಈ ದಿನಗಳಲ್ಲಿ ವಿಮಾನ ಪ್ರಯಾಣ ಭಾರಿ ವಿಶೇಷವಲ್ಲದಿದ್ದರೂ ನನಗೆ ಮೊದಲ ಅನುಭವ ಆಗಿತ್ತು. ಮೊದಲನೆಯ ಅನುಭವಗಳೆಲ್ಲ ತುಂಬ exciting ಆಗಿರುತ್ತವೆ ಅನ್ನೋದು ಎಲ್ಲ ಅನುಭವಸ್ತರಿಗೆ ಗೊತ್ತಿರೋ ವಿಚಾರಾನೆ. ವಿಮಾನ ಏರಿದ ಮೇಲೆ ಗಗನ ಸಖಿಯರು ತಂದು ಕೊಟ್ಟ ತಿಂಡಿ ತಿಂದು ಮುಗಿಸುವ ಹೊತ್ತಿಗೆ ಹೈದರಾಬಾದ್ ತಲುಪಿಯಾಗಿತ್ತು. ಒಂದು ಗಂಟೆಯ ಪ್ರಯಾಣ ಕೆಲವೇ ಕ್ಷಣಗಳಂತೆ ಭಾಸವಾಗಿದ್ದರ ಹಿನ್ನೆಲೆಯಲ್ಲಿ Kingfisher ಸುಂದರಿಯರ ಕೈವಾಡ ಇರಬಹುದೇನೋ ಅನ್ನೋ ಶಂಕೆ ನನ್ನು ಇನ್ನು ಕಾಡ್ತಾ ಇದೆ.

Hydrabaad airport ನಿಂದ ಹೊರಬಂದ ನಂತರ ನಮ್ಮನ್ನು ಕರೆದೊಯ್ಯಲು ಬರಬೇಕಿದ್ದ ವ್ಯಕ್ತಿಗಾಗಿ bus stopನಲ್ಲಿ ಕಾಯತೊಡಗಿದೆವು. ಅಲ್ಲಿ ನಿಂತಿರುವಾಗ ನನ್ನ ಮನಸ್ಸು ಬೆಂಗಳೂರನ್ನು ಮತ್ತು ಹೈದರಬಾದನ್ನು compare ಮಾಡಲು ಶುರು ಮಾಡಿಕೊಂಡಿತು. my first observation was about Common people; People in Hydrabaad are much more relaxed than bangaloreans. They were not in hurry to board a bus or getting an auto. they were calm and relaxed. ಆಟೋದಲ್ಲಿ ಹೋಗ್ತಾ ನಾನು ಗಮನಿಸಿದ ಇನ್ನೊದು ಅಂಶ ಅಲ್ಲಿನ ವಿಶಾಲ ಅನ್ನಬಹುದಾದಂತ [ಬೆಂಗಳೂರಿನ ರಸ್ತೆಗಳಿಗೆ ಹೋಲಿಸಿದರೆ] ರಸ್ತೆಗಳು. ಹೈದರಾಬಾದ್ weather ಬಗ್ಗೆ ಬೇರೆಯವರು ಹೇಳಿದ್ದ ಮಾತು ಕೇಳಿ ಬಿಸಿಯಾಗಿದ್ದ ನನ್ನ ತಲೆ ಅಲ್ಲಿನ ತಂಗಾಳಿಗೆ ತಂಪಾಗತೊಡಗಿತು. ತಮಿಳ್ನಾಡಿನಲ್ಲಿ ತಮಿಳು ಗೊತ್ತಿರಲೇಬೇಕು, ಕೇರಳದಲ್ಲಿ ಮಲಯಾಳಂ ಗೊತ್ತಿರಬೇಕು ಅನ್ನೋ ಪರಿಸ್ಥಿತಿ AP ನಲ್ಲಿ ಇಲ್ಲ. ಎಲ್ಲರಿಗೂ ಹಿಂದಿ ಮಾತಾಡಲು ಬರುತ್ತೆ ಅಥವಾ ಅರ್ಥನಾದರೂ ಆಗುತ್ತೆ. Communication was not at all a problem. ಆದ್ರೆ ಹೈದರಾಬಾದ್ನಲ್ಲಿ ನಾನು ಇದ್ದದ್ದು ಮೊದನೆಯ ಮತ್ತು ಕೊನೆಯ ದಿನಗಳು ಮಾತ್ರ. ಯಾಕೇಂದ್ರೆ ಮಧ್ಯದ ಒಂಬತ್ತು ದಿನಗಳು ನಾನು ಬೇರೆ ಬೇರೆ ಊರಿನಲ್ಲಿ ಕಳೆದೆ. ಹಾಗಾಗಿ ಹೈದರಾಬಾದ್ ಸಿಟಿಯನ್ನು explore ಮಾಡೋಕೆ ಸಾಧ್ಯವಾಗಲಿಲ್ಲ. ನಾನು ನೋಡಲೇಬೇಕು ಅಂತ ಅಂದುಕೊಂಡ ಒಂದು place ಚಾರ್ ಮಿನಾರ್. ಚಾರ್ ಮಿನಾರ್ ನೋಡದಿದ್ರೆ ನನ್ನ Hydrabaad stay ಅಪೂರ್ಣ ಅನ್ನೋ ಭಾವನೆ ನನ್ನಲ್ಲಿ ಮೊಳೆತಿತ್ತು. ಮೂರು ದಿನದಿಂದ ಶ್ರೀವತ್ಸನ ತಲೆ ತಿಂತ ಇದ್ದೆ. ಕೊನೆಗೂ ನನ್ನ ಆಸೆ 15th ಫೆಬ್ರವರಿ ಶುಕ್ರವಾರ ನೆರವೇರಿತು. ಸಂಗರೆಡ್ಡಿ ಇಂದ ಬೆಳಿಗ್ಗೆ ಹೊರಟು 11:30Am ಕ್ಕೆ ಹೈದರಾಬಾದ್ ತಲುಪಿದೆವು. Bus stand ನಿಂದ ನೇರವಾಗಿ ಚಾರ್ ಮಿನಾರ್ ಗೆ ಕೇವಲ 15 ನಿಮಿಷದ ಪ್ರಯಾಣ. ಸುಮಾರು 2 ಗಂಟೆಗಳ ಕಾಲ ಅಲ್ಲಿ ಇದ್ದು, ಫೋಟೋ ತೆಗೆಸಿಕೊಂಡು, ಅಲ್ಲೇ ಇರುವ jewellary shop ನಲ್ಲಿ ಮುತ್ತುಗಳನ್ನು ಕೊಂಡುಕೊಂಡು ಏರ್ಪೋರ್ಟ್ ಕಡೆಗೆ ಹೆಜ್ಜೆ ಹಾಕಿದೆವು. ಇನ್ನೊದು ವಿಷ್ಯ ಹೇಳೋಕೆ ಮರೆತಿದ್ದು ಅಂದ್ರೆ ನಾವು ಅಲ್ಲಿನ ಪ್ರಖ್ಯಾತ ಕರಾಚಿ ಬೆಕರಿಗೆ ಭೇಟಿ ನೀಡಿದ್ದು. ಆದ್ರೆ ನನ್ನ colleague ಉಮಾ ಹೇಳಿದ್ದ ಕರಾಚಿ ಮೆಹಂದಿ ತರೋಕೆ ನನಗೆ ಮರೆತುಹೋಯಿತು. ಈ ವಿಚಾರದಲ್ಲಿ ಅವಳನ್ನು ನಾನು disappoint ಮಾಡಿದೆ. ನಿಜ ಹೇಳಬೇಕೂನ್ದ್ರೆ ಒಂದು ವಾರದ ನಂತರ ಬೆಂಗಳೂರನ್ನು ನಾವಿಬ್ರು ತುಂಬ miss ಮಾಡಿಕೊಳ್ಳುತ್ತ ಇದೀವಿ ಅನ್ನೋ ಭಾವನೆ ಶುರುವಾಯಿತು. ಹಾಗಾಗಿ ಇನ್ನು ನಾಲ್ಕಾರು ದಿನಗಳ ನಂತರ ಹೊರಡಬೇಕಿದ್ದ ನಾವು ಬೇಗನೆ ಎಲ್ಲ ಕೆಲಸಗಳನ್ನು ಮುಗಿಸಿ ತರಾತುರಿಯಲ್ಲಿ hometown ಗೆ ಹೊರಟೆವು. ಸಂಜೆ ೭:೩೦ ಬೆಂಗಳೂರಿನಲ್ಲಿ ಇಳಿದಾಗಲೇ ಮನಸ್ಸು ನಿರಾಳವಾಗಿದ್ದು.