ಕೆಲವು ದಿನಗಳಿಂದ ನನ್ನ ಗಮನ ಸೆಳೆದ/ಚರ್ಚಿಸಲ್ಪಟ್ಟ ವಿಚಾರಗಳಲ್ಲಿ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ನಾಮಕರಣದ ಬಗ್ಗೆ ಎದ್ದಿರುವ ವಿವಾದ. ಕರ್ನಾಟಕ ರಕ್ಷಣಾ ವೇದಿಕೆ ಈ ವಿಚಾರವಾಗಿ ತನ್ನ ಬೇಡಿಕೆಯನ್ನು ಇಡುತ್ತಲೇ ಬಂದಿದೆ. ನಿಲ್ದಾನಕ್ಕಾಗಿ ಜಮೀನನ್ನು ಕಳೆದುಕೊಂಡ ರೈತರ ಕುಟುಂಬದ ಸದಸ್ಯರಿಗೆ ನೌಕರಿ ಕೊಡಬೇಕು, ಪ್ರಮುಖ ಹುದ್ದೆಗಳಿಗೆ ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಹಾಗು ನಿಲ್ದಾಣಕ್ಕೆ ಕೆಂಪೇಗೌಡನ ಹೆಸರಿಡಬೇಕು ಎನ್ನುವುದು ಕರವೇ ಪ್ರಮುಖ ಬೇಡಿಕೆಗಳು. ಇವುಗಳಲ್ಲಿ ಬಹುಚರ್ಚಿತವಾದ ಬೇಡಿಕೆ ಎಂದರೆ ನಾಮಕರಣ. ಈ ಬೇಡಿಕೆಗೆ ಕಾರಣ ಬೆಂಗಳೂರು ಕೆಂಪೇಗೌಡನಿಂದ ನಿರ್ಮಿತವಾಗಿದೆ ಎಂಬುದು. ಈ ವಿಚಾರವಾಗಿ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಪ್ರತಪಸಿಂಹ ನ ಲೇಖನದಲ್ಲಿ BIAL ಗೆ ಕೆಂಪೇಗೌಡನ ಬದಲು ವಿಶ್ವೇಶ್ವರಯ್ಯ ಅವರ ಹೆಸರು ಸೂಕ್ತ ಎಂದು ಸಮರ್ಥಿಸಲಾಗಿದೆ. ಅದಕ್ಕೆ ಚಂದ್ರಶೇಖರನ್ ಕಲ್ಯಾಣ ರಾಮನ್ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. [ ಎರಡೂ ಲೇಖನಗಳು thatskannada.com ನ ಅಂಕಣಗಳು ವಿಭಾಗದಲ್ಲಿ ಲಭ್ಯವಿದೆ .] ಆದರೆ ರಾಮನ್ ಅವರ ವಾದವನ್ನು ನಾನು ಒಪ್ಪುವುದಿಲ್ಲ. ಇತಿಹಾಸದ ಪುಟಗಳನ್ನು ತಗೆದು ನೋಡಿದಾಗ ನಮಗೆ ತಿಳಿದು ಬರುವ ವಿಚಾರವೆನೆಂದರೆ ಭಾರತದಲ್ಲಿರೋ ಹಲವಾರು ನಗರಗಳೆಲ್ಲ ರಾಜರಿಂದಲೇ ಕಟ್ಟಲ್ಪತ್ತಿವೆ ಎಂದು. ಹಾಗಂತ ಹೇಳಿ ಆಧುನಿಕ ಭಾರತದಲ್ಲಿ ನಿರ್ಮಾಣ ಆಗೋ ಎಲ್ಲ ಕಟ್ಟಡಗಳಿಗೂ ಅವರ ಹೆಸರುಗಳನ್ನೂ ಇಡೋಕಾಗಲ್ಲ. ಬೆಂಗಳೂರು ನಿರ್ಮಾತ್ರು ಕೆಂಪೇಗೌಡನ ಹೆಸರನ್ನ ಅಮರ ಮಾಡೋಕೆ
೧. ಕೆಂಪೇಗೌಡನ ಹೆಸರಲ್ಲಿ ರಸ್ತೆ ಇದೆ.
೨. ಶಾಪಿಂಗ್ ಕಾಂಪ್ಲೆಕ್ಸ್ ಇದೆ.
೩. ಶಾಲೆ ಕಾಲೇಜ್ ಗಳು ಇವೆ.
೪. ಬಸ್ ಸ್ಟ್ಯಾಂಡ್ ಇದೆ.
ಅದಲ್ಲದೇನೆ BBMP ಯವರು ಕೆಂಪೇಗೌಡ ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿದ ಗೋಪುರಗಳ ಪ್ರತಿಕ್ರುತಿಯೊಂದನ್ನು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಅಗಸದೆತ್ತರದ ಕಂಭದ ಮೇಲೆ ನಿರ್ಮಿಸಿದ್ದಾರೆ. ಇಷ್ಟೆಲ್ಲಾ ಕೆಂಪೇಗೌಡನ ಹೆಸರನ್ನು ಅಮರ ಮಾದುವುದಕ್ಕೊಸ್ಕರ ಸಾಕಲ್ಲವೇ ! ಇನ್ನು ವಿಶ್ವೇಶ್ವರಯ್ಯನವರು ಆಧುನಿಕ ಕರ್ನಾಟಕವನ್ನು ನಿರ್ಮಾಣ ಮಾಡಲು ಪಟ್ಟ ಶ್ರಮ, ಅವರ ಮುಂದಾಲೋಚನೆಗಳ ಬಗ್ಗೆ ಕರ್ನಾಟಕದ ಜನತೆಗೆ ಏನು ಇಡೀ ಭಾರತಕ್ಕೆ ಗೊತ್ತಿದೆ. ಅದಕ್ಕೆ ಅಲ್ವೆ ಅವರಿಗೆ ಭಾರತ ರತ್ನ ದೊರೆತಿರುವುದು! ಬೆಂಗಳೂರು ಕೇವಲ ಬೆಂಗಳೂರಿನವರಿಗೆ ಅಥವಾ ಕೆಂಪೇಗೌಡನಿಗೆ ಸಂಭಂಧ ಪಟ್ಟಿದಲ್ಲ. ಅದು ಇಡೀ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ಹಾಗೇನೇ BIAL ಕೂಡ ಬೆಂಗಳೂರಿಗೆ ಮಾತ್ರವಲ್ಲ ಅದು ಇಡೀ ಕರ್ನಾಟಕದ ಹೆಮ್ಮೆ. ಅದಕ್ಕೊಸ್ಕರಾನೆ ವಿಶ್ವೇಶ್ವರಯ್ಯನವರ ಹೆಸರನ್ನು ಇಡೋದು ಸೂಕ್ತ ಅನ್ನೋದು ಪ್ರತಾಪ್ ಸಿಮ್ಹನ ವಾದ. ನಿಮಗೂ ಕೂಡ ಇದನ್ನು ಅರ್ಥ ಮಾಡಿ ಕೊಳ್ಳುವಸ್ತು ತಾಳ್ಮೆ ಇದೆ ಅಂತ ನನ್ನ ಭಾವನೆ.
2 comments:
ವಿಶೇಶ್ವರಯ್ಯ ಹೆಸ್ರಲ್ಲೂ ಅನೇಕ ಕಟ್ಟಡಗಳಿವೆ.
ವಿಶ್ವೇಶ್ವರಯ್ಯ ಕಾಲೇಜು
ವಿಶ್ವೇಶ್ವರಯ್ಯ ನಾಲೆ
ವಿಶ್ವೇಶ್ವರಯ್ಯ ಮ್ಯೂಸಿಯಂ
... ಇತ್ಯಾದಿ...
ಒಟ್ಟು ಸಂಖ್ಯೆ ಕೆಂಪೇಗೌಡ್ರಿಗಿಂತ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು.
ಆದ್ರೆ ಚರ್ಚೆ ನಡಿತಾ ಇರೋದು ಅಂಕಿ ಅಂಶಗಳ ಬಗ್ಗೆ ಆಲ್ಲ. ಯಾರ ಹೆಸರನ್ನಿಡೋದು ಸೂಕ್ತ ಅನ್ನೋದರ ಬಗ್ಗೆ. ವಿಶ್ವೇಶ್ವರಯ್ಯನವರ ಹೆಸರು ಯಾಕೆ ಸೂಕ್ತ ಅನ್ನೋ ಕುತೂಹಲ ನಿಮಗೆ ಇದ್ದರೆ ದಯವಿಟ್ಟು ವಿ.ಕ. ದಲ್ಲಿ ಪ್ರಕಟವಾಗಿರೋ ಪ್ರತಾಪ ಸಿಂಹನ ಲೇಖನವನ್ನು ಓದಿ ಅಥವಾ thatskannada.com ನಲ್ಲಿ ಪ್ರಕಟವಾಗಿರೋ ಅದೇ ಲೇಖನವನ್ನ ಓದಿ. BIAL ಗೆ ಹೆಸರಿಡೊ ವಿಷಯ ಈಗ ಜಾತಿ ಪ್ರತಿಷ್ಠೆಯ ಸಂಕೇತವಾಗಿದೆ. ಇದನ್ನ ನೀವು ಅರ್ಥ ಮಾಡಿಕೊತೀರ ಅಂತ ನನ್ನ ಅನಿಸಿಕೆ.
Post a Comment