Monday, June 2, 2008

BMTC ನ ನಾನು ಯಾಕೆ sue ಮಾಡಬಾರದು...?

ಕೆಲವು ದಿನಗಳ ಹಿಂದೆ ನಾನು BMTC office ಗೆ Smart Card ಮಾಡಿಸಲು ಹೋಗಿದ್ದೆ . ಮೂರು ವರ್ಷ ಅವಧಿಯ Smart Card ಮಾಡಿಸಲು ಐದು ವರ್ಷವಾದರೂ ಮುಗಿಯದ ಸರತಿಯ ಸಾಲಿನಲ್ಲಿ ನಿಂತು ಅಂತೂ ಇಂತೂ ೧೦೦/- ಕಟ್ಟಿ Smart Card ಪಡೆಯುವ ಹೊತ್ತಿಗೆ ಬರೋಬ್ಬರಿ ಒಂದು ಘಂಟೆ ಬೇಕಾಯಿತು. ಆದ್ರೆ ನಾನು BMTC ಮೇಲೆ ಕೇಸ್ ಹಾಕಬೇಕೆನ್ದಿರುವುದು ಯಾಕೆ ಅನ್ನೋದು ನಿಮಗೆಲ್ಲರಿಗೂ ಬಂದಿರಬಹುದಾದ Bisleri ನೀರಿನಸ್ಟು ಶುದ್ಧವಾದ ಅನುಮಾನ! ಅದಕ್ಕೆ Smart Card ಪಡೆಯುವ ವಿಧಾನವನ್ನು ನಾನು ವಿವರಿಸಬೇಕಾಗುತ್ತದೆ. Smart Card ತೆಗೆದುಕೊಳ್ಳುವ process ಅನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.
೧. Ground Floor ನಲ್ಲಿ ಇರೋ counter ನಲ್ಲಿ ೧೦೦/- ರೂಪಾಯಿಯನ್ನು ಕಟ್ಟಿ, ಹಳೆಯ id card ಕೊಟ್ಟು ರಶೀತಿ ಪಡೆಯಬೇಕು.
೨. ನಂತರ 2nd floor ನಲ್ಲಿ ಇರುವ counter ಗಳಲ್ಲಿ ನಮ್ಮ ಭಾವಚಿತ್ರದೊಂದಿಗೆ ವಿವರಗಳನ್ನು Computer ನಲ್ಲಿ Save ಮಾಡಲಾಗುತ್ತದೆ.
೩. save ಆದ ವಿವರಗಳಿಂದ ಸ್ಮಾರ್ಟ್ ಕಾರ್ಡ್ ಪ್ರಿಂಟ್ ಮಾಡಿಕೊಡಲಾಗುತ್ತದೆ.
ಹಾಗಾದರೆ ನಾನು BMTC ಮೇಲೆ ಮುನಿಸಿಕೊಂಡಿರುವುದು ಏಕೆ? ಎ process ನ ಎರಡನೆ ಭಾಗ ನಡೆಯುವುದು 2nd floor ನ haal ಒಳಗಡೆ ಹೋಗಬೇಕಾದರೆ ನಮ್ಮ ಪಾದರಕ್ಷೆಗಳನ್ನು ಹೊರಗಡೆ ಬಿಟ್ಟು ಹೋಗಬೇಕು. ಸಮಸ್ಯೆ ಶುರುವಾಗಿದ್ದೆ ಇಲ್ಲಿಂದ. ಫೋಟೋ ತೆಗೆಸಿ ಸ್ಮಾರ್ಟ್ ಕಾರ್ಡ್ ತೆಗೆದುಕೊಂಡು ಹೊರಗೆ ಬಂದು ನೋಡೋಹೊತ್ತಿಗೆ ಹೊರಗೆ ಬಿಟ್ಟಿದ್ದ ಪಾದರಕ್ಷೆಗಳು ಮಾಯ... ಎಲ್ಲಿ ಹೋದವೋ ಎಲ್ಲ ಮಾಯವಾದವು ಎಂದು ಹಾಡುತ್ತ ಹುಡುಕಿ ಹುಡುಕಿ ಸುಸ್ತಾದ ನಂತರ ನನಗೆ ಅರಿವಾದ ವಿಷಯವೆಂದರೆ ಯಾರೋ ಪುಣ್ಯಾತ್ಮರು ನನ್ನ ಚಪ್ಪಲಿಗಳನ್ನ ಎಗರಿಸಿದಾರೆ ಅಂತ . ಈಗಾಗಲೇ ನಿಮಗೆ ವಿಷ್ಯ ತಕ್ಕಮಟ್ಟಿಗೆ ಅರ್ಥ ಆಗಿದೆ ಎಂದು ತಿಳಿದಿದ್ದೇನೆ. ಆದ್ರೆ ಅ ಚಪ್ಪಲಿ ಕಳ್ಳನಿಗೆ ತಿಳಿದೆ ಇರೋ ವಿಚಾರ ಅಂದ್ರೆ ನನ್ನ ಚಪ್ಪಲಿಗಳು ಅವತ್ತೇ ತೊಳೆದಿದ್ದರಿಂದ ಹೊಸದರ ಹಾಗೆ ಕಾಣುತ್ತಿದ್ದವಷ್ಟೇ; ಆದ್ರೆ ಹರಿದು ಹೋಗೋ stage ಗೆ ಬಂದಿದ್ದವು. ಅದೇನೆ ಇರ್ಲಿ ನನಗೆ BMTC ಆದ ಒಟ್ಟು ನಷ್ಟ ನ ಹೀಗೆ calculate ಮಾಡಬಹುದು.
ನನ್ನ ಕಳೆದುಹೋದ ಚಪ್ಪಲಿಯ ಬೆಲೆ + ಹೊಸದಾಗಿ ಕೊಂಡ ಚಪ್ಪಲಿಯ ಬೆಲೆ + ನಾನು ಚಪ್ಪಲಿ ಕಳೆದುಕೊಂಡು ಪಟ್ಟ ಹಿಂಸೆಗೆ compensation. ಇಷ್ಟು ಮೊತ್ತವನ್ನು BMTC ನನಗೆ ತುಂಬಿಕೊಡಬೇಕು ಎನ್ನುವುದು ನನ್ನ ವಾದ. ಹೇಳಿ ನಾನು BMTC ನ sue ಮಾಡೋದು ತಪ್ಪಾ ?

No comments: