"ಮಾಮ್ಸ್, ಸ್ವಲ್ಪ ನಿನ್ ಪೆನ್ಸಿಲ್ ಕೊಡ್ತಿಯ ಮಾಮ್ಸ್" ಎಂಬ ಮಾತು ಕೇಳಿ ನನ್ನ ಮುಂದೆ ನಿಂತಿದ್ದ ದಢೂತಿ ದೇಹದ ಹುಡುಗನನ್ನ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡತೊಡಗಿದೆ. ನನಗೆ ಆಶ್ಚರ್ಯ ಆಗಿದ್ದು ಅವನ ದಢೂತಿ ದೇಹ ಅಲ್ಲ ಬದಲಾಗಿ ಅವನು ಉಪಯೋಗಿಸಿದ 'ಮಾಮ್ಸ್' ಎಂಬ ಪದ ಕೇಳಿ. ತೀರ್ಥಹಳ್ಳಿ ಸಮೀಪದ ಪುಟ್ಟ ಹಳ್ಳಿಯ ಪುಟ್ಟ ಪ್ರಪಂಚದಿಂದ PUC ಓದಲು ಬಂದ ನನಗೆ ಈ ಸಂಭೋದನೆ ಆಶ್ಚರ್ಯ ತರಿಸಿದ್ದು ಆಶ್ಚರ್ಯ ಅಲ್ಲ. ಇದು ನಡೆದು ತುಂಬ ವರ್ಷಗಳಾಗಿದ್ದರೂ ನನ್ನ ಮನಸ್ಸಿನಲ್ಲಿ ಚೆನ್ನಾಗಿ Print ಆಗಿದೆ. ಈ ಘಟನೆಯನ್ನು ನೆನೆದ ಮೇಲೆ ನಾನು ಸಂಭೋದನೆಯ ಬೆನ್ನು ಹತ್ತಿ ಹೊರಟೆ. ಈ ಘಟನೆಯ ನೆನಪಿನಿಂದ ನನ್ನ ಯೋಚನಾ ತರಂಗವು ಸಂಭೋದನೆಯೆಡೆಗೆ ಹರಿಯತೊಡಗಿತು. ಸಾಮಾನ್ಯವಾಗಿ ಎಲ್ಲರೂ ಬಳಸುವ ಪದಗಳು, ೧. ಮಗ ೨. ಗುರು ೩. ಏನಮ್ಮ ೪. ಶಿಷ್ಯ/ಸಿಸ್ಯ ೫. ಮಚ್ಚ/ಮಚ್ಚಿ ೬. ಮಾಮ್ಸ್ ೭. dude ೮. ಮಾಮ ೯. buddy ೧೦. da ೧೧. ಮಾರಾಯ ೧೨. ಹೋಯ್ ೧೩. ರೀ ೧೪. ಅಯ್ಯ. ೧೫ ಸಿವಾ ೧೬. ದೇವ್ರು ೧೭. ಅಪ್ಪ ಇತ್ಯಾದಿ ಇತ್ಯಾದಿ .
High School ನಲ್ಲಿ ಓದಬೇಕಾದರೆ ನಾವು ತುಂಬ ಗರ್ವದಿಂದ friends ನ ಅಥವಾ juioners ನ ' ಏನಮ್ಮ ' ಅಂತ ಕರೀತಿದ್ವಿ. ಆ ರೀತಿ ಕರೆದಾಗ ಅವರು ನಮ್ಮನ್ನು ನೋಡು ದ್ರುಷ್ಟಿನೆ ಬೇರೆ ಬದಲಾಗ್ತಿತ್ತು. ನಾವು ಅವರುಗಳಿಗೆ hero ಗಳ ತಾರಾ ಕಾನಿಸುತ್ತಿದ್ವಿ ಅಥವ ನಾವೇ ಹಾಗೆ ಅಂದುಕೊಳ್ತಾ ಇದ್ವಿ . Primary School ನಲ್ಲಿ ಮೇಸ್ಟ್ರು ಗಳನ್ನ ಸರ್ ಅಂತ ಕರೆದರೆ lady ಮೇಸ್ಟ್ರು ಗಳನ್ನ ಅಂದ್ರೆ madam ಗಳನ್ನ madam ಅನ್ನದೇ teacher ಅನ್ತಿದ್ವಿ . [ಈಗ್ಲೂ ಈ ಪದ್ಧತಿ ಜಾರಿಯಲ್ಲಿದೆ ]. ಹುಡುಗರಿಗಷ್ಟೇ ಅಲ್ಲದೆ ತಂದೆ ತಾಯಿ ಯಾರಿಗೂ teacher ಅನ್ನೋ ಪದ ಸ್ತ್ರೀಲಿಂಗ ಸಂಭೋದನೆ ಪದವಾಗಿ ಮಾತ್ರ ತಿಳಿದಿರೋದು ಯಾಕೆ ಅನ್ನೋದು ನನ್ನ Billion Dollor ಪ್ರಶ್ನೆ....? High School ಗೆ ಬಂದ ಮೇಲೆ ಟೀಚರ್ ಹೋಗಿ madam ಆಯಿತು, ಇಂಜಿನಿಯರಿಂಗ್ ಬಂದ ಮೇಲೆ madam ಹೋಗಿ ' ಮ್ಯಾಮ್ ' ಆಯಿತು. ಎಂಥ ಬದಲಾವಣೆ........!
'ಏನಮ್ಮ', 'ಗುರು', 'ಶಿಷ್ಯ' ನಾನು ಹತ್ತು ಹದಿನೈದು ವರ್ಷಗಳಿಂದ ಹೇಳ್ತಾ / ಕೇಳ್ತಾ ಬಂದಿರೋ ಪದಗಳು. ಮಚ್ಚ ಅನ್ನೋದು [from tamil] ಇತ್ತೀಚಿನ ವರ್ಷಗಳಲ್ಲಿ ಕೇಳಿಬರ್ತಿರೋ ಪದ. Dude, buddy ಇವೆಲ್ಲ ತುಂಬ sophisticated ಆಗಿರೋ ಅಂದ್ರೆ, ಇಂಗ್ಲಿಷ್ ನಲ್ಲೆ ಹುಟ್ಟಿ ಬೆಳೆದ ಹೈಕಳು ಉಪಯೋಗಿಸೋ ಸಂಭೋದನೆ.
ಊರಿನಲ್ಲಿ ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ನಮಗೆ ಸಣ್ಣಯ್ಯ ಅಂತ ಕರದ್ರೆ, ನಮ್ಮ ತಂದೆಗೆ ಅಯ್ಯ ಅಂತ ಕರೀತಿದ್ರು. ಅವರು ನಮ್ಮನ್ನು superior ಅಂತ consider ಮಾಡ್ತಿದ್ರೋ ಅಥವಾ ಅವರಲ್ಲಿ inferiority complex ಇತ್ತೋ ಅಥವ ನಾವು ಹಾಗೆ ಕರೀಲಿ ಅಂತ expect ಮಾಡ್ತಿದ್ವೋ ಎನೊ. ಆದ್ರೆ ಅವರು ಹಾಗೆ ಕರೆದಾಗ ನಮಗೆ ಸಂತೋಷವಾಗುತ್ತಿತ್ತು. ಇನ್ನು ದ.ಕ./ಉ.ಕ./ಶಿವಮೊಗ್ಗ ಕಡೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಪದ 'ಮಾರಾಯ'. "ಇವತ್ತು ಯಾಕೋ ಹಾಳಾದ ಬಸ್ಸು ಇನ್ನೂ ಬರಲಿಲ್ಲ ಮಾರಾಯ" ಅನ್ನೋ ವಾಕ್ಯದಲ್ಲೇ ಎಲ್ಲ ಅಡಗಿದೆ ಸ್ವಾರಸ್ಯ.
ಗಂಡನನ್ನು ಹೆಂಡತಿ ಹೆಸರಿಟ್ಟು ಕರೆಯೋದು ನಮ್ಮ ಸಂಪ್ರದಾಯದಲ್ಲಿ ಇಲ್ಲ. ಹಾಗಾಗಿ ಗಂಡಂದಿರನ್ನು ಕರೆಯುವುದಕ್ಕೆ ಅವರು ಕಂಡುಕೊಂಡಿರೋ ಶಬ್ಧ ' ಏನೂಂದ್ರೆ ' [ ಈಗ ಇದನ್ನ ಸಿನೆಮಾ ದಲ್ಲಿ ಬಿಟ್ಟರೆ ಇನ್ನೆಲ್ಲು ಉಪಯೋಗಿಸೊಲ್ಲ], 'ರೀ ' [ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಬಳಕೆಗೆ ಬಂದಿರೋ ಪದ ].
ಸಂಭೋದನೆಗಳು ಕೇವಲ ಸಂಭೋದನೆಗಳಲ್ಲ ಅವು ಗುರುಹಿರಿಯರಲ್ಲಿ ಗೌರವ , ಚಿಕ್ಕವರಲ್ಲಿ ಪ್ರೀತಿ, ಸಮಾನ ಮನಸ್ಕರಲ್ಲಿ ಆತ್ಮೀಯತೆಯನ್ನು ಸೂಚಿಸುತ್ತವೆ.
ಕೊನೆ ಹನಿ: ಮೇಲೆ ಪಟ್ಟಿ ಮಾಡಿದ ಪದಗಳು ನಾನು ಉಪಯೋಗಿಸಿದ ಅಥವ ಕೇಳಿದ ಪದಗಳು ಮಾತ್ರ. ಪ್ರಪಂಚದಲ್ಲಿ ೧೦೦೦ ಕ್ಕೂ ಹೆಚ್ಚು ಭಾಷೆಗಳಿವೆ. ಅಲ್ಲೆಲ್ಲಾ ಹೇಗೋ.........
1 comment:
Somewhere I have read that in 50 years many of the languages will be lost as people speaking those languages have reduced considerably.
This is due to the fact that more youngsters think that English is superior and his/her own mother tongue is inferior.
Your blog on addressing people opens up discussion on usage of Kannada words in day to day life.
Post a Comment