Tuesday, July 31, 2007

ನಾನೇಕೆ ಬರೆಯಬೇಕು?


ಅರೆರೆ ಹೌದಲ್ಲ! ನಾನ್ಯಾಕೆ ಬರೆಯಬೇಕು? ನನಗೇನು ಆಸ್ಟೋಂದು talent ಇದೆಯಾ? ನಿಜವಾಗ್ಲೂ ಹೇಳ್ತೀನಿ ನನಗೆ ಗೊತ್ತಿಲ್ಲ. ನಾನು ಒಬ್ಬ ಮಾತುಗಾರ. ನನಗೆ ಮಾತಾಡೋದು ತುಂಬಾ ಇಷ್ಟ, ಹಾಗೆನೆ ಕೇಳೋದು ಭಾರಿ ಇಷ್ಟ. ನಾನ್ಯಾಕೆ ಮತಾಡಬಲ್ಲೆ ಅಂದ್ರೆ....ನಾನು ತುಂಬಾ ಓದೊದನ್ನ ಇಷ್ಟಪಡ್ತೀನಿ. ಆದ್ರೆ ಈ ಬರೆಯೋದು ಇದೆಯಲ್ಲ ತುಂಬಾ ಕಷ್ಟ ಅಂತ ತೀರ್ಮಾನಿಸಿಬಿಟ್ಟಿದ್ದೆ. ಇಂಟರ್‌ನೆಟ್ ನಲ್ಲಿ ಅನೇಕ blog ಗಳನ್ನು ನೋಡಿದ ಮೇಲೆ ನಾನ್ಯಾಕೆ ಬರೀಬಾರಾದು ?ಅಂತ ಪ್ರಶ್ನಿಸಿಕೊಂಡೆ. ಇದು ನನಗೆ ಬರವಣಿಗೆ ಆಗಿಬರುತ್ತಾ ಅಂತ ಒಂದು ಪ್ರಯೋಗ ಹಾಗೂ ಪ್ರಯತ್ನ. ಅದಕ್ಕಾಗಿ ಅಕ್ಷರ ರೂಪದಲ್ಲಿ ನಿಮ್ಮ ಎದುರು ಬಂದಿದೀನಿ. ಆದರೆ ಬರೀಬೇಕು ಅಂತ ತೀರ್ಮಾನಮಾಡಿದ ಮೇಲೆ ಏನನ್ನು ಬರೀಬೇಕು ಅನ್ನೋ ಪ್ರಶ್ನೆ ಭೂತಾಕರವಾಗಿ ನನ್ನನ್ನ ಆವರಿಸಿಕೊಂಡಿದೆ.ಏನನ್ನೋ ಬರಿಯೋದು, ಹೋಗ್ತಾ ಹೋಗ್ತಾ Improve ಆಗುತ್ತೆ ಅನ್ನೋ ಆಶಾಭಾವನೆ ಇಟ್ಟುಕೊಂಡು ಬರೆಯೋದಿಕ್ಕೆ ಪ್ರಾರಂಭಿಸಿದ್ದೀನಿ. ಅದೆಲ್ಲ ಸರಿ ನೀನು ಬರಿದ್ದನ್ನು ಓದೋರು ಯಾರು ಅನ್ನೋದು ಯಕ್ಷ ಪ್ರಶ್ನೆ. ಅದಿಕ್ಕೆ ನೀವೇ ಉತ್ತರ ಕೊಡಬೇಕು. ಈ ಕಷ್ಟ ಇಷ್ಟ ಗಳ ನಡುವೆ ನಷ್ಟ ಅನುಭವಿಸೋರು ಯಾರು? ಇನ್ನೂ ಗೊತ್ತಿಲ್ಲ. ಏನಪ್ಪ ಇದು ಬರಿ ಪ್ರಶ್ನೆಗಳೇ ತುಂಬಿಕೊಂಡಿವೆ ಈ ಲೇಖನದಲ್ಲಿ ನಿಮಗೆ ಅನಿಸುತ್ತಾ ಇರಬಹುದು. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೋತೀನಿ ಅನ್ನೋ ಭರವಸೆ ನನಗೆ ಇದೆ. ಮಾತು ಮೌನ ಅಂತ ಯಾಕಯ್ಯ ಹೆಸರಿಟ್ಟೆ ಅನ್ನೋದು ಎಲ್ಲ ಪ್ರಶ್ನೆಗಳಲ್ಲಿ ಪ್ರಮುಖವಾದದ್ದು. ನೋಡಿ ಮನಸ್ಸಿನಲ್ಲಿ ಬರೋದನ್ನೆಲ್ಲ ಮಾತಾಡೋದಿಲ್ಲ . ಹಾಗೆ ಮಾತಾಡೋಕೂ ಆಗೋದಿಲ್ಲ. ಉಪೇಂದ್ರ ಹೇಳಿದ ಹಾಗೆ ಅಲ್ಲೊಂದು ಫಿಲ್ಟರ್ ಹಾಕಿಕೊಂಡಿರ್ತೀವಿ.ನಾನಿಲ್ಲಿ ಫಿಲ್ಟರ್ ಆಗಲೇಬೇಕಾದ ವಿಚಾರಗಳನ್ನ ಮಾತಾಡೋದಿಲ್ಲ. ಕೆಲವೊಂದು ಸಲ ಅನೇಕ ವಿಚಾರಗಳನ್ನು ನಾವು ಮನಸ್ಸಿನಲ್ಲೇ ಪ್ರಶ್ನಿಸಿ ಉತ್ತರ ಕಂಡುಕೊಂಡಿರುತ್ತೇವೆ. ಆದ್ರೆ ಕೆಲವೊಂದು ವಿಚಾರಗಳಿಗೆ ಉತ್ತರ ಸಿಕ್ಕಿರೋಲ್ಲ. ಅದನ್ನು ಬೇರೆಯವರ ಜೊತೆಗೆ ಚರ್ಚಿಸೋಕೂ ಆಗಿರೋಲ್ಲ ಅಥವಾ ಸಮಯ ಸಿಕ್ಕಿರೋಲ್ಲ ಅಥವಾ ಸಮಾನಮನಸ್ಕರು ಸಿಕ್ಕಿರೋಲ್ಲ. ಅದೆಲ್ಲ ಇಲ್ಲಿ ಮಾತಾಗಿ ಬರುತ್ತೆ ಅಂತ ನನ್ನ ಆಶಾವಾದ. ನೀವೇನಾದರೂ ನನ್ನ್ blog ಓದುತ್ತಾ ಇದ್ದರೆ ನಿಮ್ಮ ಅನಿಸಿಕೆಗಳನ್ನು comment ರೂಪದಲ್ಲಿ ಅಥವಾ compliment ರೂಪದಲ್ಲಿ ಇಲ್ಲಿ ಬರೀಬಹುದು. ಸಾಕು ಬೀಡಯ್ಯ ಏನು ಕೊರೀತಿಯ ಅಂತ ಇದೀರಾ? OK ನನ್ನ ಬರಹಗಳನ್ನು ಚೆನ್ನಾಗಿದ್ದರೆ ಓದಿ..........ಅಲ್ಲಯ್ಯ ಓದದೇ ಚೆನ್ನಾಗಿದೆ ಅಂತ ಹೇಗಯ್ಯ ಹೇಳೋದು ಅಂತ ಹೆಳ್ತೀರನ್ತ ನನಗೆ ಗೊತ್ತಿದೆ. ಆದ್ರೂ ಓದಿ..........