Tuesday, December 2, 2008
ಮತಾಂತರ
Monday, December 1, 2008
ದೇಶಕ್ಕಾಗಿ ಪ್ರಾಣ ನೀಡಿದವರಿಗೆ ನಮನ
೨) ವಿಜಯ್ ಸಲಸ್ಕರ್
೩) ಹೇಮಂತ್ ಕರ್ಕೆರೆ
೪) ಸಂದೀಪ್ ಉನ್ನಿಕೃಷ್ಣನ್
Monday, November 10, 2008
ಕತೆ: ಪ್ರಶ್ನೆಗಳು ?
--ನವೀನ ಕೆ. ಎಸ್.
Monday, October 6, 2008
ನಮ್ಮ ಟ್ರಿಪ್ಪಿನ ಬಗ್ಗೆ ನಿಮಗೆ updateಉ
" ಹೋಗೋಣ ಬಿಡೋ "
" ಪ್ರತಿ ಸಲಾನೂ ಹೀಗೆ ಹೇಳ್ತೀರಾ ಮಕ್ಳ...ಬರಿ ಹೋಗೋಣ ಅನ್ನೋದಷ್ಟೇ ಆಯಿತು "
" ಆಯಿತಪ್ಪ placeಉ, dateಉ ಫಿಕ್ಸ್ ಮಾಡು.....ನಾವು ಬರ್ತೀವಿ "
" ಏನು ನಿಮಗೆಲ್ಲ ಇಂಟರೆಸ್ಟ್ ಇಲ್ಲವ......ನನಗೊಬ್ಬನಿಗೊಸ್ಕರ ಬರೋತರ ಮಾತಾಡ್ತೀರಲ್ಲ "
" ಸರಿ ಬಿಡು ಗುರು, ಒಂದೆರಡು place ನೋಡಿ ಇಮೇಲ್ ಹಾಕಿ.....ಆಮೇಲೆ decide ಮಾಡಿದರಾಯಿತು "
Friday, September 19, 2008
ಏಕೆ ಹೀಗೆ ನಮ್ಮ ನಡುವೆ ?
ಮೊದಲಿನಿಂದಲೂ ನಮ್ಮ ಸಮಾಜದಲ್ಲಿ ಹಿಜಡಾಗಳ ಬಗ್ಗೆ ಒಂದು ರೀತಿಯಾದ ಅಸಹ್ಯ ಭಾವನೆಯಿದೆ. ಹಾಗಾಗಿ ಅವರನ್ನು treat ಮಾಡುವ ರೀತಿಯೇ ಬೇರೆಯಾಗಿದೆ. ಹಿಜಡಾಗಳು ಬೇರೆ ಯಾವುದೋ ಗ್ರಹದಿಂದ ಬಂದಂತಹ, ಸಮಾಜ ಕಂಟಕ ಶಕ್ತಿಗಳು ಎಂಭ ಭಾವನೆ ನಮ್ಮಲ್ಲಿ ಆಳವಾಗಿ ಬೇರೂರಿದೆ. ಇದಕ್ಕೆ ಮುಖ್ಯ ಕಾರಣ ಅವರ ವರ್ತನೆ ಹಾಗು ವೃತ್ತಿ. ಭಿಕ್ಷೆ ಬೇಡುವುದು ಮತ್ತು ವೇಶ್ಯಾವಾಟಿಕೆ ಇವರ ಮುಖ್ಯವಾದ ವೃತ್ತಿ. ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಅವ್ಯಾಚ ಶಬ್ದಗಳಿಂದ ಜರಿಯುವ, ಕೈಸನ್ನೆಗಳನ್ನು ಮಾಡುವಂತಹ ವರ್ತನೆಗಳು ಅವರ ಬಗ್ಗೆ ಅಸಹ್ಯ ಭಾವನೆ ಮೂಡಿಸಿವೆ.
ಹಾಗಾದರೆ ಅವರ ಈ ವರ್ತನೆಗಳಿಗೆ ಕಾರಣವೇನು ? ಮುಖ್ಯವಾಹಿನಿಯಲ್ಲಿ ಇರುವ, ನಾಗರೀಕರೆನಿಸಿ ಕೊಂಡ, ವಿದ್ಯವಂತರದ ನಾವು ಅವರ ಇಂತಹ ವರ್ತನೆಗೆ ಕಾರಣವನ್ನು ಎಂದಾದರೂ ಯೋಚಿಸಿದ್ದೇವೆಯೇ. ಒಬ್ಬ ಅಸಹಾಯಕ ಹಿಜಡನನ್ನು ನೂರಾರು ಜನ ನಿರ್ದಯದಿಂದ ಹೊಡೆಯುವುದು ಸರಿಯೇ? ಅವರ ಭಿಕ್ಷಾಟನೆ, ವೇಶ್ಯಾವೃತ್ತಿ ಎಲ್ಲವೂ ತಪ್ಪು. ಆದರೆ ಅವರು ಭಿನಾಲಿನ್ಗಿಯಾಗಿ ಹುಟ್ಟಿದ್ದು / ಮಾರ್ಪಾಡಾಗಿದ್ದು ಅವರ ತಪ್ಪೇ? ಇವರ ಇಂತಹ ವರ್ತನೆಗಳಿಗೆ ಕಾರಣವನ್ನು ಹುಡುಕ ಹೊರಟರೆ ಮೊದಲಿಗೆ ಎದುರಾಗೋದು ಈ ಕೆಳಗಿನವು.
೧) ಸರ್ಕಾರದಿಂದ ಅವರಿಗೆ ಯಾವ ಸವಲತ್ತುಗಳು ಇಲ್ಲ.
೨) ರೇಶನ್ ಕಾರ್ಡ್ ಇಲ್ಲ, ಮತದಾನದ ಹಕ್ಕು ಇಲ್ಲ.
೩) ಶಿಕ್ಷಣ, ಆರೋಗ್ಯ, ಉದ್ಯೋಗ ಎಲ್ಲದರಲ್ಲೂ ತಾರತಮ್ಯ.
೪) ಸಾರ್ವಜನಿಕರಿಂದ ನಿಂದನೆಗೆ, ಅಪಹಾಸ್ಯಕ್ಕೆ ಒಳಗಾಗುವಿಕೆ.
೫) ತಮ್ಮ ಮನೆಯವರಿಂದಲೇ ಅವಜ್ಞೆ.
ಮನುಷ್ಯನಿಗೆ ಬೇಕಾದ ಮೂಲ ಸವಲತ್ತುಗಳಾದ ಆಹಾರ, ಆಶ್ರಯ, ಉಡುಪು ಇವುಗಳಿಗೊಸ್ಕರ ಪ್ರತಿನಿತ್ಯ / ಪ್ರತಿಕ್ಷಣ ಹೋರಾಡಬೇಕಾದಂತಹ ಪರಿಸ್ಥಿತಿ ಅವರುಗಳಿಗೆ. Basic need ಗಳಿಗೆ ಹೋರಾಡುವಂತಹ ಅವರ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆಯೇ? ಹಾಗಂತ ಅವರ ಭಿಕ್ಷಾಟನೆ, ವೇಶ್ಯಾವೃತ್ತಿಯನ್ನು ಬೆಂಬಲಿಸುತ್ತಿದ್ದೇನೆ ಎಂಬ ಅರ್ಥ ಅಲ್ಲ. ನಾನು ಅವೆಲ್ಲದರ ವಿರುದ್ಧ ಇದ್ದೇನೆ. ಈಗ ನಾನು ಹೇಳಲು ಹೊರಟಿರುವುದು ಅವರನ್ನು ನಾವ್ಯಾಕೆ ಅನುಕಂಪದಿಂದ, ಮಾನವೀಯತೆಯಿಂದ ನೋಡಬಾರದು. ಅವರಿಗೂ ನಮ್ಮಂತೆ ಮಸ್ಸಿರೋದಿಲ್ಲವೇ? ಅವರ ಭಾವನೆಗಳೇನು ಬರಡಾಗಿವೆಯೇ? ನೀವೇ ಯೋಚಿಸಿ.
Tuesday, July 1, 2008
ರಿಯಾಲಿಟಿ ಶೋಗಳು ಮತ್ತು ಮಕ್ಕಳು
Wednesday, June 25, 2008
ಪ್ರೀತಿ - ನೆನಪು
ಅವಳ ಪ್ರೀತಿ
ಪೂರ್ಣಚಂದ್ರನಂತೆ
ಕೊನೆ ಕೊನೆಗೆ ಯಾಕೋ
ಅವಳ ಪ್ರೀತಿ
ಕರಗುತ್ತಿರೋ ಚಂದ್ರನಂತೆ
ಮೊದ ಮೊದಲು
ಅವಳು
ದೂರ ಇದ್ದರೂ
ಹತ್ತಿರ
ಕೊನೆ ಕೊನೆಗೆ ಯಾಕೋ
ಅವಳು
ಹತ್ತಿರ ಇದ್ದರೂ
ದೂರ
ಮೊದ ಮೊದಲು
ಅವಳ ನೆನಪು
ಪೂರ್ಣಚಂದ್ರನಂತೆ
ಕೊನೆ ಕೊನೆಗೆ ಯಾಕೋ
ಅವಳ ನೆನೆಪು
ಕರಗುತ್ತಿರೋ ಚಂದ್ರನಂತೆ
--ನವೀನ ಕೆ.ಎಸ್.
Tuesday, June 24, 2008
ಇಳೆಗೆ ಬೇಕು ಮಳೆ
ಉಸಿರು ಉಳಿಯಲು
ಇಳೆಗೆ ಬೇಕು ಮಳೆ
ಇಳೆಯ ಕಿಚ್ಚು ತಣಿಸಲು
ಪ್ರಕೃತಿಯು ಹಚ್ಚೆ ಬರೆಯಲು
ಇಳೆಗೆ ಬೇಕು ಮಳೆ
ಅಹಂಕಾರದ ಕೊಳೆ ತೊಳೆಯಲು
ಹಣದ ಹುಚ್ಚನು ಬಿಡಿಸಲು
ಇಳೆಗೆ ಬೇಕು ಮಳೆ
ಜೀವನವು ಜೀಕಲು
ಮನವು ಚಿಂತಿಸಲು
ಇಳೆಗೆ ಬೇಕು ಮಳೆ
-- ನವೀನ ಕೆ.ಎಸ್.
Wednesday, June 11, 2008
Kabhi Kabhi
ಸಂಭೋದನೆಯಾ ಬೆನ್ನು ಹತ್ತಿ.............
"ಮಾಮ್ಸ್, ಸ್ವಲ್ಪ ನಿನ್ ಪೆನ್ಸಿಲ್ ಕೊಡ್ತಿಯ ಮಾಮ್ಸ್" ಎಂಬ ಮಾತು ಕೇಳಿ ನನ್ನ ಮುಂದೆ ನಿಂತಿದ್ದ ದಢೂತಿ ದೇಹದ ಹುಡುಗನನ್ನ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡತೊಡಗಿದೆ. ನನಗೆ ಆಶ್ಚರ್ಯ ಆಗಿದ್ದು ಅವನ ದಢೂತಿ ದೇಹ ಅಲ್ಲ ಬದಲಾಗಿ ಅವನು ಉಪಯೋಗಿಸಿದ 'ಮಾಮ್ಸ್' ಎಂಬ ಪದ ಕೇಳಿ. ತೀರ್ಥಹಳ್ಳಿ ಸಮೀಪದ ಪುಟ್ಟ ಹಳ್ಳಿಯ ಪುಟ್ಟ ಪ್ರಪಂಚದಿಂದ PUC ಓದಲು ಬಂದ ನನಗೆ ಈ ಸಂಭೋದನೆ ಆಶ್ಚರ್ಯ ತರಿಸಿದ್ದು ಆಶ್ಚರ್ಯ ಅಲ್ಲ. ಇದು ನಡೆದು ತುಂಬ ವರ್ಷಗಳಾಗಿದ್ದರೂ ನನ್ನ ಮನಸ್ಸಿನಲ್ಲಿ ಚೆನ್ನಾಗಿ Print ಆಗಿದೆ. ಈ ಘಟನೆಯನ್ನು ನೆನೆದ ಮೇಲೆ ನಾನು ಸಂಭೋದನೆಯ ಬೆನ್ನು ಹತ್ತಿ ಹೊರಟೆ. ಈ ಘಟನೆಯ ನೆನಪಿನಿಂದ ನನ್ನ ಯೋಚನಾ ತರಂಗವು ಸಂಭೋದನೆಯೆಡೆಗೆ ಹರಿಯತೊಡಗಿತು. ಸಾಮಾನ್ಯವಾಗಿ ಎಲ್ಲರೂ ಬಳಸುವ ಪದಗಳು, ೧. ಮಗ ೨. ಗುರು ೩. ಏನಮ್ಮ ೪. ಶಿಷ್ಯ/ಸಿಸ್ಯ ೫. ಮಚ್ಚ/ಮಚ್ಚಿ ೬. ಮಾಮ್ಸ್ ೭. dude ೮. ಮಾಮ ೯. buddy ೧೦. da ೧೧. ಮಾರಾಯ ೧೨. ಹೋಯ್ ೧೩. ರೀ ೧೪. ಅಯ್ಯ. ೧೫ ಸಿವಾ ೧೬. ದೇವ್ರು ೧೭. ಅಪ್ಪ ಇತ್ಯಾದಿ ಇತ್ಯಾದಿ .
High School ನಲ್ಲಿ ಓದಬೇಕಾದರೆ ನಾವು ತುಂಬ ಗರ್ವದಿಂದ friends ನ ಅಥವಾ juioners ನ ' ಏನಮ್ಮ ' ಅಂತ ಕರೀತಿದ್ವಿ. ಆ ರೀತಿ ಕರೆದಾಗ ಅವರು ನಮ್ಮನ್ನು ನೋಡು ದ್ರುಷ್ಟಿನೆ ಬೇರೆ ಬದಲಾಗ್ತಿತ್ತು. ನಾವು ಅವರುಗಳಿಗೆ hero ಗಳ ತಾರಾ ಕಾನಿಸುತ್ತಿದ್ವಿ ಅಥವ ನಾವೇ ಹಾಗೆ ಅಂದುಕೊಳ್ತಾ ಇದ್ವಿ . Primary School ನಲ್ಲಿ ಮೇಸ್ಟ್ರು ಗಳನ್ನ ಸರ್ ಅಂತ ಕರೆದರೆ lady ಮೇಸ್ಟ್ರು ಗಳನ್ನ ಅಂದ್ರೆ madam ಗಳನ್ನ madam ಅನ್ನದೇ teacher ಅನ್ತಿದ್ವಿ . [ಈಗ್ಲೂ ಈ ಪದ್ಧತಿ ಜಾರಿಯಲ್ಲಿದೆ ]. ಹುಡುಗರಿಗಷ್ಟೇ ಅಲ್ಲದೆ ತಂದೆ ತಾಯಿ ಯಾರಿಗೂ teacher ಅನ್ನೋ ಪದ ಸ್ತ್ರೀಲಿಂಗ ಸಂಭೋದನೆ ಪದವಾಗಿ ಮಾತ್ರ ತಿಳಿದಿರೋದು ಯಾಕೆ ಅನ್ನೋದು ನನ್ನ Billion Dollor ಪ್ರಶ್ನೆ....? High School ಗೆ ಬಂದ ಮೇಲೆ ಟೀಚರ್ ಹೋಗಿ madam ಆಯಿತು, ಇಂಜಿನಿಯರಿಂಗ್ ಬಂದ ಮೇಲೆ madam ಹೋಗಿ ' ಮ್ಯಾಮ್ ' ಆಯಿತು. ಎಂಥ ಬದಲಾವಣೆ........!
'ಏನಮ್ಮ', 'ಗುರು', 'ಶಿಷ್ಯ' ನಾನು ಹತ್ತು ಹದಿನೈದು ವರ್ಷಗಳಿಂದ ಹೇಳ್ತಾ / ಕೇಳ್ತಾ ಬಂದಿರೋ ಪದಗಳು. ಮಚ್ಚ ಅನ್ನೋದು [from tamil] ಇತ್ತೀಚಿನ ವರ್ಷಗಳಲ್ಲಿ ಕೇಳಿಬರ್ತಿರೋ ಪದ. Dude, buddy ಇವೆಲ್ಲ ತುಂಬ sophisticated ಆಗಿರೋ ಅಂದ್ರೆ, ಇಂಗ್ಲಿಷ್ ನಲ್ಲೆ ಹುಟ್ಟಿ ಬೆಳೆದ ಹೈಕಳು ಉಪಯೋಗಿಸೋ ಸಂಭೋದನೆ.
ಊರಿನಲ್ಲಿ ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ನಮಗೆ ಸಣ್ಣಯ್ಯ ಅಂತ ಕರದ್ರೆ, ನಮ್ಮ ತಂದೆಗೆ ಅಯ್ಯ ಅಂತ ಕರೀತಿದ್ರು. ಅವರು ನಮ್ಮನ್ನು superior ಅಂತ consider ಮಾಡ್ತಿದ್ರೋ ಅಥವಾ ಅವರಲ್ಲಿ inferiority complex ಇತ್ತೋ ಅಥವ ನಾವು ಹಾಗೆ ಕರೀಲಿ ಅಂತ expect ಮಾಡ್ತಿದ್ವೋ ಎನೊ. ಆದ್ರೆ ಅವರು ಹಾಗೆ ಕರೆದಾಗ ನಮಗೆ ಸಂತೋಷವಾಗುತ್ತಿತ್ತು. ಇನ್ನು ದ.ಕ./ಉ.ಕ./ಶಿವಮೊಗ್ಗ ಕಡೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಪದ 'ಮಾರಾಯ'. "ಇವತ್ತು ಯಾಕೋ ಹಾಳಾದ ಬಸ್ಸು ಇನ್ನೂ ಬರಲಿಲ್ಲ ಮಾರಾಯ" ಅನ್ನೋ ವಾಕ್ಯದಲ್ಲೇ ಎಲ್ಲ ಅಡಗಿದೆ ಸ್ವಾರಸ್ಯ.
ಗಂಡನನ್ನು ಹೆಂಡತಿ ಹೆಸರಿಟ್ಟು ಕರೆಯೋದು ನಮ್ಮ ಸಂಪ್ರದಾಯದಲ್ಲಿ ಇಲ್ಲ. ಹಾಗಾಗಿ ಗಂಡಂದಿರನ್ನು ಕರೆಯುವುದಕ್ಕೆ ಅವರು ಕಂಡುಕೊಂಡಿರೋ ಶಬ್ಧ ' ಏನೂಂದ್ರೆ ' [ ಈಗ ಇದನ್ನ ಸಿನೆಮಾ ದಲ್ಲಿ ಬಿಟ್ಟರೆ ಇನ್ನೆಲ್ಲು ಉಪಯೋಗಿಸೊಲ್ಲ], 'ರೀ ' [ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಬಳಕೆಗೆ ಬಂದಿರೋ ಪದ ].
ಸಂಭೋದನೆಗಳು ಕೇವಲ ಸಂಭೋದನೆಗಳಲ್ಲ ಅವು ಗುರುಹಿರಿಯರಲ್ಲಿ ಗೌರವ , ಚಿಕ್ಕವರಲ್ಲಿ ಪ್ರೀತಿ, ಸಮಾನ ಮನಸ್ಕರಲ್ಲಿ ಆತ್ಮೀಯತೆಯನ್ನು ಸೂಚಿಸುತ್ತವೆ.
ಕೊನೆ ಹನಿ: ಮೇಲೆ ಪಟ್ಟಿ ಮಾಡಿದ ಪದಗಳು ನಾನು ಉಪಯೋಗಿಸಿದ ಅಥವ ಕೇಳಿದ ಪದಗಳು ಮಾತ್ರ. ಪ್ರಪಂಚದಲ್ಲಿ ೧೦೦೦ ಕ್ಕೂ ಹೆಚ್ಚು ಭಾಷೆಗಳಿವೆ. ಅಲ್ಲೆಲ್ಲಾ ಹೇಗೋ.........
Monday, June 2, 2008
ನಾಮಕರಣ ವಿವಾದ
ಕೆಲವು ದಿನಗಳಿಂದ ನನ್ನ ಗಮನ ಸೆಳೆದ/ಚರ್ಚಿಸಲ್ಪಟ್ಟ ವಿಚಾರಗಳಲ್ಲಿ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ನಾಮಕರಣದ ಬಗ್ಗೆ ಎದ್ದಿರುವ ವಿವಾದ. ಕರ್ನಾಟಕ ರಕ್ಷಣಾ ವೇದಿಕೆ ಈ ವಿಚಾರವಾಗಿ ತನ್ನ ಬೇಡಿಕೆಯನ್ನು ಇಡುತ್ತಲೇ ಬಂದಿದೆ. ನಿಲ್ದಾನಕ್ಕಾಗಿ ಜಮೀನನ್ನು ಕಳೆದುಕೊಂಡ ರೈತರ ಕುಟುಂಬದ ಸದಸ್ಯರಿಗೆ ನೌಕರಿ ಕೊಡಬೇಕು, ಪ್ರಮುಖ ಹುದ್ದೆಗಳಿಗೆ ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಹಾಗು ನಿಲ್ದಾಣಕ್ಕೆ ಕೆಂಪೇಗೌಡನ ಹೆಸರಿಡಬೇಕು ಎನ್ನುವುದು ಕರವೇ ಪ್ರಮುಖ ಬೇಡಿಕೆಗಳು. ಇವುಗಳಲ್ಲಿ ಬಹುಚರ್ಚಿತವಾದ ಬೇಡಿಕೆ ಎಂದರೆ ನಾಮಕರಣ. ಈ ಬೇಡಿಕೆಗೆ ಕಾರಣ ಬೆಂಗಳೂರು ಕೆಂಪೇಗೌಡನಿಂದ ನಿರ್ಮಿತವಾಗಿದೆ ಎಂಬುದು. ಈ ವಿಚಾರವಾಗಿ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಪ್ರತಪಸಿಂಹ ನ ಲೇಖನದಲ್ಲಿ BIAL ಗೆ ಕೆಂಪೇಗೌಡನ ಬದಲು ವಿಶ್ವೇಶ್ವರಯ್ಯ ಅವರ ಹೆಸರು ಸೂಕ್ತ ಎಂದು ಸಮರ್ಥಿಸಲಾಗಿದೆ. ಅದಕ್ಕೆ ಚಂದ್ರಶೇಖರನ್ ಕಲ್ಯಾಣ ರಾಮನ್ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. [ ಎರಡೂ ಲೇಖನಗಳು thatskannada.com ನ ಅಂಕಣಗಳು ವಿಭಾಗದಲ್ಲಿ ಲಭ್ಯವಿದೆ .] ಆದರೆ ರಾಮನ್ ಅವರ ವಾದವನ್ನು ನಾನು ಒಪ್ಪುವುದಿಲ್ಲ. ಇತಿಹಾಸದ ಪುಟಗಳನ್ನು ತಗೆದು ನೋಡಿದಾಗ ನಮಗೆ ತಿಳಿದು ಬರುವ ವಿಚಾರವೆನೆಂದರೆ ಭಾರತದಲ್ಲಿರೋ ಹಲವಾರು ನಗರಗಳೆಲ್ಲ ರಾಜರಿಂದಲೇ ಕಟ್ಟಲ್ಪತ್ತಿವೆ ಎಂದು. ಹಾಗಂತ ಹೇಳಿ ಆಧುನಿಕ ಭಾರತದಲ್ಲಿ ನಿರ್ಮಾಣ ಆಗೋ ಎಲ್ಲ ಕಟ್ಟಡಗಳಿಗೂ ಅವರ ಹೆಸರುಗಳನ್ನೂ ಇಡೋಕಾಗಲ್ಲ. ಬೆಂಗಳೂರು ನಿರ್ಮಾತ್ರು ಕೆಂಪೇಗೌಡನ ಹೆಸರನ್ನ ಅಮರ ಮಾಡೋಕೆ
೧. ಕೆಂಪೇಗೌಡನ ಹೆಸರಲ್ಲಿ ರಸ್ತೆ ಇದೆ.
೨. ಶಾಪಿಂಗ್ ಕಾಂಪ್ಲೆಕ್ಸ್ ಇದೆ.
೩. ಶಾಲೆ ಕಾಲೇಜ್ ಗಳು ಇವೆ.
೪. ಬಸ್ ಸ್ಟ್ಯಾಂಡ್ ಇದೆ.
ಅದಲ್ಲದೇನೆ BBMP ಯವರು ಕೆಂಪೇಗೌಡ ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿದ ಗೋಪುರಗಳ ಪ್ರತಿಕ್ರುತಿಯೊಂದನ್ನು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಅಗಸದೆತ್ತರದ ಕಂಭದ ಮೇಲೆ ನಿರ್ಮಿಸಿದ್ದಾರೆ. ಇಷ್ಟೆಲ್ಲಾ ಕೆಂಪೇಗೌಡನ ಹೆಸರನ್ನು ಅಮರ ಮಾದುವುದಕ್ಕೊಸ್ಕರ ಸಾಕಲ್ಲವೇ ! ಇನ್ನು ವಿಶ್ವೇಶ್ವರಯ್ಯನವರು ಆಧುನಿಕ ಕರ್ನಾಟಕವನ್ನು ನಿರ್ಮಾಣ ಮಾಡಲು ಪಟ್ಟ ಶ್ರಮ, ಅವರ ಮುಂದಾಲೋಚನೆಗಳ ಬಗ್ಗೆ ಕರ್ನಾಟಕದ ಜನತೆಗೆ ಏನು ಇಡೀ ಭಾರತಕ್ಕೆ ಗೊತ್ತಿದೆ. ಅದಕ್ಕೆ ಅಲ್ವೆ ಅವರಿಗೆ ಭಾರತ ರತ್ನ ದೊರೆತಿರುವುದು! ಬೆಂಗಳೂರು ಕೇವಲ ಬೆಂಗಳೂರಿನವರಿಗೆ ಅಥವಾ ಕೆಂಪೇಗೌಡನಿಗೆ ಸಂಭಂಧ ಪಟ್ಟಿದಲ್ಲ. ಅದು ಇಡೀ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ಹಾಗೇನೇ BIAL ಕೂಡ ಬೆಂಗಳೂರಿಗೆ ಮಾತ್ರವಲ್ಲ ಅದು ಇಡೀ ಕರ್ನಾಟಕದ ಹೆಮ್ಮೆ. ಅದಕ್ಕೊಸ್ಕರಾನೆ ವಿಶ್ವೇಶ್ವರಯ್ಯನವರ ಹೆಸರನ್ನು ಇಡೋದು ಸೂಕ್ತ ಅನ್ನೋದು ಪ್ರತಾಪ್ ಸಿಮ್ಹನ ವಾದ. ನಿಮಗೂ ಕೂಡ ಇದನ್ನು ಅರ್ಥ ಮಾಡಿ ಕೊಳ್ಳುವಸ್ತು ತಾಳ್ಮೆ ಇದೆ ಅಂತ ನನ್ನ ಭಾವನೆ.