Friday, March 25, 2011

ಮಳೆ ಬಂತು


ಬೇಸಿಗೆ ಆರಂಭವಾಗಿ ಆಗಲೇ ಸೂರ್ಯ ನಮ್ಮನ್ನೆಲ್ಲ ಸುಟ್ಟು ಬಿಡುವಂತೆ ಕಾಣಿಸುತ್ತಿದೆ. ಇವತ್ತು ಮಧ್ಯಾನ್ಹ ಅದೂ ಇದೂ ಹರಟುತ್ತಾ ಕುಳಿತಿದ್ದಾಗ, "ಬೆಂಗಳೂರಿಗೆ ಒಂದೆರಡು ದಿನ ಮಳೆ ಬೇಕು ಇಲ್ಲಾಂದ್ರೆ ಭಾರಿ ಕಷ್ಟ ಉಂಟು ಮಾರಾಯರೇ" ಅಂದಿದ್ದೆ. ಕೆಲಸ ಮುಗಿಸಿ ಬಸ್ಸನ್ನೇರಲು ಹೊರಗೆ ಕಾಲಿಡುತ್ತಿದ್ದಂತೆ ನೋಡಿದರೆ ಬಾನೆಲ್ಲ ಮೋಡದಿಂದ ಆವರಿಸಿದೆ, ಗಾಳಿ ತಣ್ಣಗೆ ಬೀಸುತ್ತಿದೆ, ಮಳೆಯ ಹನಿಗಳು ಭೂಮಿಗೆ ಬರಲು ಹವಣಿಸುತ್ತಿವೆ.  ನನ್ನ ಕೋರಿಕೆ ದೇವರು ಮನ್ನಿಸಿದಂತಿತ್ತು. ನಮ್ಮ ಬಸ್ಸು ಹೊರಟ ಎರಡು ನಿಮಿಷದೊಳಗೆ ಮಳೆ ಸುರಿಯಲು ತೊಡಗಿತು; ನನ್ನ ಮನಸ್ಸು ಅರಳತೊಡಗಿತು.  ಮಳೆ ಯಾವಾಗಲು ನನ್ನನ್ನು ನಾಸ್ಟಾಲ್ಜಿಕ್ ಆಗಿ ಮಾಡುತ್ತೆ. ಮಳೆ ನನ್ನನ್ನು ಮತ್ತೆ ಮತ್ತೆ ಕಾಡುತ್ತೆ. ಇವತ್ತು ಮಳೆ ನನ್ನಲ್ಲಿ ಮತ್ತೆ ಹೊಸ ಹುರುಪು ತಂದಿದೆ. ನಾಳೇನೂ ಮಳೆ ಬರಲಿ ಅಂತ ನನ್ನ ಹಾರೈಕೆ.   

Pic: Internet

No comments: