ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆರಂಭವಾಗಿದೆ. ಮಾನ್ಯ ಮುಖ್ಯಮಂತ್ರಿಗಳಾದ ಯೆಡ್ಯೂರಪ್ಪನವರು ಕೊನೆಗೂ ಇನ್ಫೋಸಿಸ್ ಸಂಸ್ಥಾಪಕರನ್ನು ಸಮ್ಮೇಳನದ ಉದ್ಘಾಟನೆಗೆ ಕರೆತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಬಲಗಡೆ ನಾರಾಯಣಮೂರ್ತಿಯವರು, ಎಡಗಡೆ ವಿಶ್ವಸುಂದರಿ ಐಶ್ವರ್ಯ ರೈ ಕೂರಿಸಿಕೊಂಡು ವಿಜಯದ ನಗೆ ಬೀರುತ್ತಿರುವ ಮಾನ್ಯ ಮುಖ್ಯಮಂತ್ರಿಗಳ ಛಾಯಾಚಿತ್ರಗಳನ್ನು ಇಂದಿನ ದಿನಪತ್ರಿಗಳಲ್ಲಿ ನೋಡಬಹುದಾಗಿದೆ. ನನಗೂ ಸಮ್ಮೇಳನದಲ್ಲಿ ಭಾಗವಹಿಸುವ ಆಸೆ ಇದ್ದರೂ ವಯುಕ್ತಿಕ ಕಾರಣಗಳಿಂದಾಗಿ ಹೋಗಲು ಆಗ್ತಾ ಇಲ್ಲ. ಕನ್ನಡದ ವಿಚಾರ ಬಂದಾಗ ನಾನು ತುಂಬಾ ಭಾವುಕ. ಕನ್ನಡ ನನ್ನ ತಾಯಿ ನುಡಿ, ಹೃದಯದ ಭಾಷೆ. ಜಾಗತೀಕರಣ ಸಂಪತ್ತನ್ನು ಸೃಷ್ಟಿಸಿದರೂ, ಅದರ ಹೊಡೆತಕ್ಕೆ ನಮ್ಮ ಕಲೆ, ಸಂಸ್ಕೃತಿ, ಭಾಷೆಗಳು ಸಿಕ್ಕಿ ಒದ್ದಾಡುತ್ತಿರುವ ಅನುಭವ ಈಗ ನಮಗೆ ಸರಿಯಾಗಿ ತಿಳಿಯುತ್ತಿದೆ. ಕನ್ನಡಿಗರನ್ನು ಒಂದುಗೂಡಿಸುವ ಇಂಥಹ ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆಯಬೇಕು. ಕನ್ನಡಿಗರು ಭಾಷೆಯ ಪ್ರಾಮುಖ್ಯತೆ ಆರಿಯಬೇಕು. ನಮ್ಮ ಮಕ್ಕಳಿಗೆ ಕನ್ನಡ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಹೆಮ್ಮೆಪಡುವಂತಹ ವಿಚಾರಗನ್ನು ದೊಡ್ಡವರು ತಿಳಿಸಬೇಕು. ಆ ಮೂಲಕ ಅವರು ಕನ್ನಡ ನುಡಿಯನ್ನು ಶತಮಾನಗಳಾಚೆಗೂ ಉಳಿಸಲು ಬೆಳೆಸಲು ಮಕ್ಕಳು ಕಾರಣಕರ್ತರಾಗುತ್ತಾರೆ. ನಾವು ಕನ್ನಡಿಗರೆಂಬ ಅಭಿಮಾನ, ಕನ್ನಡದ ಬಗ್ಗೆ ಇರುವ ಪ್ರೀತಿ ಇನ್ನು ಹೆಚ್ಚಾಗಲಿ. ವಿಶ್ವ ಕನ್ನಡ ಸಮ್ಮೇಳನದ ಈ ಶುಭ ಸಂದರ್ಭದಲ್ಲಿ ಸಮಸ್ತ ಕನ್ನಡಿಗರಿಗೂ ಶುಭಾಶಯಗಳು. ಜೈ ಕರ್ನಾಟಕ ಮಾತೆ.
1 comment:
ನನ್ನ ಮನದಾಳದ ಮಾತುಗಳನ್ನು ಯಾವ ರಿತಿ ಹೇಳಲಿ ಎಂಬುದು ತಿಳಿತಿಲ್ಲ ಗೇಳೆಯಾ
Post a Comment