ನೀವು ವಿಜ್ಞಾನದ ವಿದ್ಯಾರ್ಥಿಯಾಗಿದ್ದರೆ ಬುನ್ಸೆನ್ ಬರ್ನರ್ ನಿಮಗೆ ತಿಳಿದೇ ಇರುತ್ತೆ . ಮರೆತ್ತಿದ್ದವರಿಗಾಗಿ ಕೆಳಗೆ ಚಿತ್ರ ನೋಡಿದರೆ ನೆನಪಾಗಬಹುದು. ಇವತ್ತು ಅದೂ ಇದೂ ತಡಕಾಡಲು ಗೂಗಲ್ ಕೊಂಡಿಯನ್ನು ತೆರೆದಾಗ ಕಂಡಿದ್ದು ಬುನ್ಸೆನ್ ಬರ್ನರ್ ಕಂಡುಹಿಡಿದ ರಾಬರ್ಟ್ ಬುನ್ಸೆನ್ ನ ಜನ್ಮ ದಿನವನ್ನು ನೆನಪಿಸುವ ಗೂಗಲ್ ಚಿತ್ರ. ರಸಾಯನಶಾಸ್ತ್ರ ಪ್ರಯೋಗಶಾಲೆಯಲ್ಲಿ ಬುನ್ಸೆನ್ ಬರ್ನರ್ ಉಪಯೋಗಿಸಿದ್ದ ನೆನಪಾಯಿತು.
Thursday, March 31, 2011
Wednesday, March 30, 2011
ಇನ್ನು ಒಂದೇ ಒಂದು ಹೆಜ್ಜೆ......ಅಷ್ಟೆ
ಇನ್ನು ಒಂದೇ ಒಂದು ಹೆಜ್ಜೆ......ಅಷ್ಟೆ. ಸಮಬಲ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದು ಭಾರತ ಫೈನಲ್ ಗೆ ಅರ್ಹತೆ ಪಡೆದು ಬೀಗುತ್ತ ಇದೆ. What a thrilling game. ಹೀಗೊಂದು ಗೆಲುವು ನಮ್ಮದಾಗಲಿ ಎನ್ನೋ ಆಶಯ ಎಲ್ಲ ಭಾರತೀಯರದಾಗಿತ್ತು. ಎಲ್ಲರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಟಿವಿ ಮುಂದೆ ಕೂತಿದ್ದು ಸಾರ್ಥಕ. ಇದೆ ಸಾಂಘಿಕ ಹೋರಾಟ ನಿರ್ಣಾಯಕ ಪಂದ್ಯದಲ್ಲೂ ಇರಲಿ ಅನ್ನೋದು ನನ್ನ ಆಶಯ. ಪಟಾಕಿಗಳು ಸಿಡಿಯುತ್ತಿವೆ, ಹರ್ಷದ ನಗೆ ಎಲ್ಲರ ಮುಖದ ಮೇಲಿದೆ; ಹೀಗೆ ಭಾರತ ಕ್ರಿಕೆಟ್ ತಂಡದ ಗೆಲುವಿನ ಓಟ ಮುಂದುವರೆದು ವಿಶ್ವಕಪ್ ನಮ್ಮ ಕೈಸೆರಲೆಂದು ನನ್ನ ಹಾರೈಕೆ.
Friday, March 25, 2011
ಮಳೆ ಬಂತು
ಬೇಸಿಗೆ ಆರಂಭವಾಗಿ ಆಗಲೇ ಸೂರ್ಯ ನಮ್ಮನ್ನೆಲ್ಲ ಸುಟ್ಟು ಬಿಡುವಂತೆ ಕಾಣಿಸುತ್ತಿದೆ. ಇವತ್ತು ಮಧ್ಯಾನ್ಹ ಅದೂ ಇದೂ ಹರಟುತ್ತಾ ಕುಳಿತಿದ್ದಾಗ, "ಬೆಂಗಳೂರಿಗೆ ಒಂದೆರಡು ದಿನ ಮಳೆ ಬೇಕು ಇಲ್ಲಾಂದ್ರೆ ಭಾರಿ ಕಷ್ಟ ಉಂಟು ಮಾರಾಯರೇ" ಅಂದಿದ್ದೆ. ಕೆಲಸ ಮುಗಿಸಿ ಬಸ್ಸನ್ನೇರಲು ಹೊರಗೆ ಕಾಲಿಡುತ್ತಿದ್ದಂತೆ ನೋಡಿದರೆ ಬಾನೆಲ್ಲ ಮೋಡದಿಂದ ಆವರಿಸಿದೆ, ಗಾಳಿ ತಣ್ಣಗೆ ಬೀಸುತ್ತಿದೆ, ಮಳೆಯ ಹನಿಗಳು ಭೂಮಿಗೆ ಬರಲು ಹವಣಿಸುತ್ತಿವೆ. ನನ್ನ ಕೋರಿಕೆ ದೇವರು ಮನ್ನಿಸಿದಂತಿತ್ತು. ನಮ್ಮ ಬಸ್ಸು ಹೊರಟ ಎರಡು ನಿಮಿಷದೊಳಗೆ ಮಳೆ ಸುರಿಯಲು ತೊಡಗಿತು; ನನ್ನ ಮನಸ್ಸು ಅರಳತೊಡಗಿತು. ಮಳೆ ಯಾವಾಗಲು ನನ್ನನ್ನು ನಾಸ್ಟಾಲ್ಜಿಕ್ ಆಗಿ ಮಾಡುತ್ತೆ. ಮಳೆ ನನ್ನನ್ನು ಮತ್ತೆ ಮತ್ತೆ ಕಾಡುತ್ತೆ. ಇವತ್ತು ಮಳೆ ನನ್ನಲ್ಲಿ ಮತ್ತೆ ಹೊಸ ಹುರುಪು ತಂದಿದೆ. ನಾಳೇನೂ ಮಳೆ ಬರಲಿ ಅಂತ ನನ್ನ ಹಾರೈಕೆ.
Pic: Internet
Thursday, March 24, 2011
ಅಭಿನಂದನೆಗಳು........
ಅಂತೂ ಟೀಮ್ ಇಂಡಿಯ ಎಲ್ಲ ಅಡೆತಡೆಗಳನ್ನು ದಾಟಿ ಸೆಮಿಫೈನಲ್ ಹಂತಕ್ಕೆ ಬಂದು ನಿಂತಿದೆ. ಮತ್ತೆ ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ವಿಶ್ವಕಪ್ ನಲ್ಲಿ ಭಾರತ ಆಡಿದ ಪಂದ್ಯಗಳನ್ನು ಗಮನಿಸಿದಾಗ ಪ್ರತಿಯೊಂದು ಪಂದ್ಯದಲ್ಲೂ ಒಬ್ಬ ಆಟಗಾರನ ಕಾಣಿಕೆ ಜಾಸ್ತಿ ಇತ್ತು. ಆದರೆ ಇಂದಿನ ಪಂದ್ಯದಲ್ಲಿ ಎಲ್ಲರು ಜಯಕ್ಕಾಗಿ ಶ್ರಮಿಸಿದ್ದಾರೆ. ಸಚಿನ್ - 53, ಗಂಭೀರ್ - 50, ಕೊಹ್ಲಿ - 24, ಯುವರಾಜ್ - 57, ರೈನಾ - 34. ಪ್ರತಿಯೊಬ್ಬ ಆಟಗಾರನೂ ಜಯಕ್ಕೊಸ್ಕರ ಶ್ರಮಿಸಿದರೆ ಫಲ ಕಟ್ಟಿಟ್ಟ ಬುತ್ತಿ ಎನ್ನೋದು ಇದರಿಂದ ತಿಳಿಯುತ್ತೆ. ಸೆಮಿ ಫೈನಲ್ ಪಂದ್ಯದಲ್ಲಿ ಇದೇ ರೀತಿಯಾದಂತ ಆತ್ಮವಿಶ್ವಾಸ ತೋರಿಸಿದರೆ ಬಹುಷಃ ನಾವು ಫೈನಲ್ಲಿನಲ್ಲಿ ಆಡುವ ಬಗ್ಗೆ ಕನಸು ಕಾಣಬಹುದು. Congrants and All The Best Team INDIA.
Pic: Internet.
Monday, March 14, 2011
Life is a Journey
ಎರಡು ದಿನದ ಪ್ರಯಾಣದಿಂದ ತುಂಬಾ ಆಯಾಸ ಆಗಿದೆ. Life is a journey ಅಂತ ಹೇಳ್ತಾರೆ. ಜೀವನದ ಪ್ರಯಾಣದಲ್ಲಿ ನಾವು ಮುಂದೆ ಹೋಗಬೇಕಾದರೆ ಅವಾಗವಾಗ ನಾವು ಪ್ರಯಾಣಿಸಬೇಕಾಗುತ್ತೆ. So ನಾನು ಮೊನ್ನೆ [12/03/2011] ರಾತ್ರಿ ಸ್ನೇಹಿತೆಯ ಮದುವೆ ಆರತಕ್ಷತೆ ಮುಗಿಸಿ ಊರಿಗೆ ಹೊರಟೆ. ನನ್ನ ಪ್ರಯಾಣದ ವಿವರಗಳು ಸ್ವಲ್ಪ ಆಸಕ್ತಿದಾಯಕವಾಗಿದೆ ಅನ್ನೋದು ನನ್ನ ಅಭಿಪ್ರಾಯ. ನನ್ನ ಪ್ರಯಾಣ ಸಂಜೆ 06:30 ಕ್ಕೆ ಶುರುವಾಯಿತು.
- ಶಾರದಾ ನಗರ ದಿಂದ ಕೋರಮಂಗಲ 01:30 ನಿಮಿಷಗಳು.[015 ಕಿ.ಮಿ.]
- ಕೋರಮಂಗಲ ದಿಂದ ಕೆಂ.ಬ.ನಿ. 01:00 ನಿಮಿಷಗಳು.[010 ಕಿ.ಮಿ.]
- ಕೆಂ.ಬ.ನಿ. ದಿಂದ ನಮ್ಮೂರು 08:30 ನಿಮಿಷಗಳು.[340 ಕಿ.ಮಿ.]
- ನಮ್ಮೂರು ನಿಂದ ಕಾರ್ಗಲ್ 02:15 ನಿಮಿಷಗಳು.[110 ಕಿ.ಮಿ.]
- ಕಾರ್ಗಲ್ ನಿಂದ ನಮ್ಮೂರು 02:15 ನಿಮಿಷಗಳು.[110 ಕಿ.ಮಿ.]
- ನಮ್ಮೂರು ದಿಂದ ಕೆಂ.ಬ.ನಿ 08:30 ನಿಮಿಷಗಳು.[340 ಕಿ.ಮಿ.]
- ಕೆಂ.ಬ.ನಿ. ದಿಂದ ಶಾರದಾ ನಗರ 00:30 ನಿಮಿಷಗಳು.[010 ಕಿ.ಮಿ.]
ಇವತ್ತು ಬೆಳಿಗ್ಗೆ ಆರು ಘಂಟೆಗೆ [14/03/2011] ನನ್ನ ಪ್ರಯಾಣ ಮುಗಿಸಿ ಒಂದೆರಡು ಘಂಟೆ ವಿಶ್ರಾಂತಿ ತೆಗೆದುಕೊಂಡು ಆಫೀಸಿಗೂ ಹೋಗಿ ಬಂದು ಕುಳಿತಿದೀನಿ. ಮೊನ್ನೆಯಿಂದ ಇವತ್ತಿನವರೆಗೂ ಸೇರಿಸಿದರೆ ಒಟ್ಟು 36 ಘಂಟೆಗಳಲ್ಲಿ 24:30 ಘಂಟೆಗಳು ರಸ್ತೆಯ ಮೇಲೆ ಕಳೆದಿದೀನಿ. ಈ 24:30 ಘಂಟೆಗಳಲ್ಲಿ ನಾನು 935 ಕಿಲೋಮೀಟರ್ ಪ್ರಯಾಣಿಸಿದ್ದೀನಿ. ನನ್ನ ಮಟ್ಟಿಗೆ ಇದು ಒಂದು ದಾಖಲೇನೆ. I am tired. So decided to go to bed early. ಸದ್ಯಕ್ಕೆ ಬೈ ಬೈ.
ಚಿತ್ರ ಕೃಪೆ: ಅಂತರ್ಜಾಲ. [http://www.flickr.com/photos/bergenandme/galleries/72157624109614475#photo_3425522665]
Friday, March 11, 2011
ವಿಶ್ವ ಕನ್ನಡ ಸಮ್ಮೇಳನ - ಬೆಳಗಾವಿ
ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆರಂಭವಾಗಿದೆ. ಮಾನ್ಯ ಮುಖ್ಯಮಂತ್ರಿಗಳಾದ ಯೆಡ್ಯೂರಪ್ಪನವರು ಕೊನೆಗೂ ಇನ್ಫೋಸಿಸ್ ಸಂಸ್ಥಾಪಕರನ್ನು ಸಮ್ಮೇಳನದ ಉದ್ಘಾಟನೆಗೆ ಕರೆತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಬಲಗಡೆ ನಾರಾಯಣಮೂರ್ತಿಯವರು, ಎಡಗಡೆ ವಿಶ್ವಸುಂದರಿ ಐಶ್ವರ್ಯ ರೈ ಕೂರಿಸಿಕೊಂಡು ವಿಜಯದ ನಗೆ ಬೀರುತ್ತಿರುವ ಮಾನ್ಯ ಮುಖ್ಯಮಂತ್ರಿಗಳ ಛಾಯಾಚಿತ್ರಗಳನ್ನು ಇಂದಿನ ದಿನಪತ್ರಿಗಳಲ್ಲಿ ನೋಡಬಹುದಾಗಿದೆ. ನನಗೂ ಸಮ್ಮೇಳನದಲ್ಲಿ ಭಾಗವಹಿಸುವ ಆಸೆ ಇದ್ದರೂ ವಯುಕ್ತಿಕ ಕಾರಣಗಳಿಂದಾಗಿ ಹೋಗಲು ಆಗ್ತಾ ಇಲ್ಲ. ಕನ್ನಡದ ವಿಚಾರ ಬಂದಾಗ ನಾನು ತುಂಬಾ ಭಾವುಕ. ಕನ್ನಡ ನನ್ನ ತಾಯಿ ನುಡಿ, ಹೃದಯದ ಭಾಷೆ. ಜಾಗತೀಕರಣ ಸಂಪತ್ತನ್ನು ಸೃಷ್ಟಿಸಿದರೂ, ಅದರ ಹೊಡೆತಕ್ಕೆ ನಮ್ಮ ಕಲೆ, ಸಂಸ್ಕೃತಿ, ಭಾಷೆಗಳು ಸಿಕ್ಕಿ ಒದ್ದಾಡುತ್ತಿರುವ ಅನುಭವ ಈಗ ನಮಗೆ ಸರಿಯಾಗಿ ತಿಳಿಯುತ್ತಿದೆ. ಕನ್ನಡಿಗರನ್ನು ಒಂದುಗೂಡಿಸುವ ಇಂಥಹ ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆಯಬೇಕು. ಕನ್ನಡಿಗರು ಭಾಷೆಯ ಪ್ರಾಮುಖ್ಯತೆ ಆರಿಯಬೇಕು. ನಮ್ಮ ಮಕ್ಕಳಿಗೆ ಕನ್ನಡ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಹೆಮ್ಮೆಪಡುವಂತಹ ವಿಚಾರಗನ್ನು ದೊಡ್ಡವರು ತಿಳಿಸಬೇಕು. ಆ ಮೂಲಕ ಅವರು ಕನ್ನಡ ನುಡಿಯನ್ನು ಶತಮಾನಗಳಾಚೆಗೂ ಉಳಿಸಲು ಬೆಳೆಸಲು ಮಕ್ಕಳು ಕಾರಣಕರ್ತರಾಗುತ್ತಾರೆ. ನಾವು ಕನ್ನಡಿಗರೆಂಬ ಅಭಿಮಾನ, ಕನ್ನಡದ ಬಗ್ಗೆ ಇರುವ ಪ್ರೀತಿ ಇನ್ನು ಹೆಚ್ಚಾಗಲಿ. ವಿಶ್ವ ಕನ್ನಡ ಸಮ್ಮೇಳನದ ಈ ಶುಭ ಸಂದರ್ಭದಲ್ಲಿ ಸಮಸ್ತ ಕನ್ನಡಿಗರಿಗೂ ಶುಭಾಶಯಗಳು. ಜೈ ಕರ್ನಾಟಕ ಮಾತೆ.
Subscribe to:
Posts (Atom)