Monday, July 5, 2010

ಅವನು ಸೊಗಸುಗಾರ...ಅವಳು ಅಂದಗಾತಿ...

ಕೆಲವು ತಿಂಗಳುಗಳ ಹಿಂದೆ ಜೇಸನ್ ಬೆಳಿಗ್ಗೆ ಬೆಳಿಗ್ಗೆನೆ ಫೋನ್  ಮಾಡಿದ. ನಾನು ರಿಸೀವ್ ಮಾಡಿ

"ಹಲೋ ಜೇಸನ್ "
"ಏನೋ ಶಿಷ್ಯ....ಏನ್ ಮಾಡ್ತಾ ಇದ್ದೀಯ?"
"ಏನಿಲ್ಲ...ಮಾಮೂಲು ಇರುತ್ತಲ್ಲ...ಬಟ್ಟೆ ಒಗೆಯೋಕೆ ರೆಡಿ ಆಗ್ತಾ ಇದ್ದೆ....ಮತ್ತೆ ಏನೋ ಸಮಾಚಾರ?"
"ಒಂದ್ವಿಷ್ಯ ಕಣೋ...."
"ಏನೋ ಅದು...."
"ನಾನೊಂದು ಹುಡುಗಿ ನೋಡಿದೀನಿ ಕಣೋ....ನನಗೆ ಒಪ್ಪಿಗೆ ಆಗಿದೆ....ಅವರ ಮನೆಯಿಂದ ಇನ್ನು ಒಪ್ಪಿಗೆ ಬರಬೇಕಿದೆ...."
"ಸೂಪರ್ ಕಣೋ....ಏನ್ ಮಾಡ್ತಾಳೆ ಹುಡುಗಿ.....?"
"ಬಿ ಇ ಓದಿದಾಳೆ.....ಬೆಂಗಳೂರಲ್ಲೇ ಕೆಲಸ ಮಾಡ್ತಿದಾಳೆ....."
"ಯಾವೂರು ಹುಡುಗೀದು....?"
"ಮಂಗ್ಳೂರು...."
"ಹುಡುಗಿ ಹೆಸರು...?"
"ಹೆಸರು ಜೆನಿವೀವ್ ಅಂತ..."
"ಏನು....!!!!!!?"
"ಜೆ....ನಿ....ವೀ...ವ್..."
"ಹೆಸರು ಸ್ವಲ್ಪ ಡಿಫರೆಂಟ್ ಆಗಿದೆ...."
"ಹಹಹ...ಹೌದು. ನೀನು ಕೇಳಿರೋಕೆ ಸಾಧ್ಯವಿಲ್ಲ ಅನ್ಸುತ್ತೆ...."
"ಇಲ್ಲಪ್ಪ....ಇದೆ ಫಷ್ಟು....ಆದ್ರೆ ಹೆಸರು ಚೆನ್ನಾಗಿದೆ...."

ಆವತ್ತು ಈ ವಿಚಾರ ಹೇಳಿದ ಜೇಸನ್ ಧ್ವನಿಯಲ್ಲಿ ತುಂಬಾ ಹರುಷವಿತ್ತು. ತನಗೆ ಸೂಕ್ತ ಬಾಳಸಂಗಾತಿ ಸಿಕ್ಕ ಸಮಾಧಾನವಿತ್ತು.

ಇದಾದ ಒಂದು ವಾರದಲ್ಲೇ ಒಬ್ಬರನ್ನೊಬ್ಬರು ಇಷ್ಟಪಟ್ಟ ಜೇಸನ್ ಮತ್ತು ಜೆನಿವೀವ್ ಬಾಳಸಂಗಾತಿಗಳಾಗಲು ಒಪ್ಪಿದರು. ನಾವು ಮದುವೆಗೆ ಹೊರಡುವ ಬಗ್ಗೆ,  ಮಂಗ್ಳೂರು ಅಕ್ಕ ಪಕ್ಕ ಇರೋ ಸ್ಥಳಗಳನ್ನು ನೋಡುವುದರ ಬಗ್ಗೆ ಚಿಂತನೆ ಮಾಡತೊಡಗಿದೆವು.

ಜೇಸನ್ ಮತ್ತು ನಾನು ಸುಮಾರು ಹನ್ನೊಂದು ವರ್ಷಗಳಿಂದ ಸ್ನೇಹಿತರು. We know each other very well. ಜೇಸನ್ ತುಂಬಾ ಮಿತಭಾಷಿ, ವಿಶಾಲ ಹೃದಯಿ. He cares everyone. Sometimes he is very naughty. He is very romantic[ By this time he must have written lot of poems to jenivieve :-)]. ಹೀಗಿರುವ ನಮ್ಮ ಹುಡುಗನ ಹುಡುಗಿ ಹೇಗಿದಾಳೆ ಅನ್ನೋ ಕುತೂಹಲ ನಮ್ಮೆಲ್ಲರಿಗೂ ಇತ್ತು. ವೀಕೆಂಡಿನ ಒಂದು ದಿನ ನಾವು ಅವಳನ್ನು ಭೇಟಿಯಾದ್ವಿ. ಮೊದಲ ಸಲ ನೋಡಿದಾಗ ನಾನು ಗಮನಿಸಿದ್ದು ಅವಳ ಸರಳತೆ. ಅದು ನಮ್ಮ ಮೊದಲ ಬ್ಹೆತಿಯಾಗಿದ್ರು ಏನೂ ಬಿಗುಮಾನವಿಲ್ಲದೆ ತುಂಬಾ ಆತ್ಮೀಯತೆಯಿಂದ ಮಾತನಾಡಿದಳು ಹುಡುಗಿ. ಅವರ ಜೋಡಿ ನೋಡಿ ನಮಗೂ ತುಂಬಾನೇ ಖುಷಿಯಾಯಿತು.




ಮದುವೆಗೆ ಮೂರು ತಿಂಗಳು ಮೊದಲೇನೆ ರೈಲ್ ಬುಕ್ಕಿಂಗ್ ಮಾಡಿ, ಮದುವೆಗೆ ಎರಡು ದಿನ ಮೊದಲೇನೆ ಮಂಗಳೂರಿಗೆ ಹಾಜರಾದ್ವಿ. ಜೇಸನ್ ಮನೆಯಲ್ಲಿ ನಡೆದ ಸಾಂಪ್ರದಾಯಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಿ, ಎಣ್ಣೆ ಹೊಡೆದು...ಡ್ಯಾನ್ಸ್ ಮಾಡಿ ತುಂಬಾನೇ ಎಂಜಾಯ್ ಮಾಡಿದ್ವಿ. ಮದುವೆ ದಿನ ಗರಿ ಗರಿ ಸೂಟಿನಲ್ಲಿ ಮಿಂಚುತ್ತಿದ್ದ ನಮ್ಮ ಹುಡುಗ....ಸಾಂಪ್ರದಾಯಿಕ ಶ್ವೇತ ವಸ್ತ್ರಧಾರಿನಿಯಾಗಿದ್ದ ಹುಡುಗಿ ನೋಡಿ ಸಂಭ್ರಮಿಸಿದ್ವಿ ಮಂತ್ರ ಘೋಷಗಳು ಕೊಂಕಣಿ ಭಾಷೆಯಲ್ಲಿ ಇದ್ದಿದ್ರಿಂದ ಅರ್ಥವಾಗದೆ ಇದ್ರೂ ಅದೊಂದು ಹೊಸ ಅನುಭವ. ಹೀಗೆ ನಮ್ಮ ಹುಡುಗ ಹುಡುಗೀನ ಕೈಹಿಡಿದು, ಸಂಸಾರಕ್ಕೆ ಕಾಲಿಟ್ಟು, [ಅವನ ಬಗ್ಗೆ ಕನಸು ಕಾಣುತ್ತಿದ್ದ ಹುಡುಗಿಯರಿಗೆ ಕೈಕೊಟ್ಟು....]ಎಲ್ಲ [ಮದುವೆಯಾದ]ಹುಡುಗರಂತೆ ಅಪರೋಪಕ್ಕೊಮ್ಮೆ ಫೋನ್ ಮಾಡುವ ಹಾಗಾಗಿದಾನೆ....ಅವರಿಬ್ಬರ ಜೀವನ ಸುಖಮಯವಾಗಿರಲಿ.....ಇಬ್ಬರೂ ತುಂಬಾ ಹರ್ಷದಿಂದ..ಸಂಭ್ರಮದಿಂದ ಜೀವನದ ಪ್ರಯಾಣವನ್ನು ಮಾಡಲಿ ಅಂತ ನನ್ನ ಹಾರೈಕೆ. ಆಲ್ ದಿ ಬೆಸ್ಟ್ . . . . . .

No comments: