Thursday, July 16, 2009

Pod Slurping - ಮಾಹಿತಿ ಕಳ್ಳತನದ ಹೊಸ ರೂಪ

ಮಾಹಿತಿ ಸಂಗ್ರಹಣೆಗೆ ಉಪಯೋಗಿಸುತ್ತಿದ್ದ ಸ್ಮರಣ ಕೋಶ [ಮೆಮೊರಿ] ಸಾಧನಗಳಲ್ಲಿ ಪ್ರಮುಖವಾದವು floppy, CD-ROm/DVD, Hard Disk. ನಾನು ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ floppy ಅತ್ಯಂತ ಜನಪ್ರಿಯ, ಅಗ್ಗದ ಸಾಧನವಾಗಿತ್ತು. ನಂತರ ಆರಂಭವಾಗಿದ್ದು CD-ROm/DVD ಗಳ ಭರಾಟೆ. ಇದನ್ನೂ ಹಿಂದೆ ಹಾಕಿ ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವುದು Pen Drive ಗಳೆಂಬ ನಮ್ಮ ಹೆಬ್ಬೆರಳು ಗಾತ್ರದ ಸಾಧನಗಳು. [Pen Drive is also known as thumb drive, memory stick, USB flashdrive, key drive, jumpdrive etc]. ಇದಲ್ಲದೆ apple ಕಂಪೆನಿಯವರು ಹೊರಬಿಟ್ಟ iPod ಎಂಬ mp3 ಸಂಗೀತ ಕೇಳುವ ಸಾಧನ ಕೂಡ ಸಂಗೀತದ ಕಡತಗಳನ್ನಲ್ಲದೆ ಬೇರೆ ಮಾಹಿತಿ ಸಂಗ್ರಹಣಕ್ಕೂ ಕೂಡ ಬಳಸಬಹುದಾಗಿದೆ. [ ಸೆಪ್ಟೆಂಬರ್ ೨೦೦೮ ರ ವರೆಗೆ ಸುಮಾರು ೧೭೩,೦೦೦,೦೦೦ ಗಳಷ್ಟು ಐಪಾಡ್ ಗಳು ಮಾರಾಟಗೊಂಡಿವೆ.] ಇತ್ತೀಚಿಗೆ ಮಾರುಕಟ್ಟೆ ಪ್ರವೇಶಿಸಿರುವ mp3 ಪ್ಲೇಯರ್ ಗಳು ಮತ್ತು USB Stick ಗಳ ಸ್ಮರಣ ಸಾಮರ್ಥ್ಯ ಹೆಚ್ಚಿದ್ದು, ಅವುಗಳ ಗಾತ್ರ ನಂಬಲಸಾಧ್ಯವಾದಷ್ಟು ಚಿಕ್ಕದಾಗಿದೆ. ಮಾಹಿತಿ ವರ್ಗಾವನ್ರ್ ವೇಗ ಸಹ ಹೆಚ್ಚಿದೆ. ಮುಗ್ಧನಂತೆ ಕಾಣೋ ನಿಮ್ಮ ಈ portable storage device ತನ್ನಷ್ಟೇ ಸಾಮರ್ಥ್ಯದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ತನ್ನ ತೆಕ್ಕೆಗೆ ವರ್ಗಾಯಿಸಿಕೊಳ್ಳಬಲ್ಲದಾಗಿದೆ. ಉದಾಹರಣೆಗೆ ನಿಮ್ಮಲ್ಲಿ 60GB pen drive ಅಥವಾ mp3 player ಇದ್ದರೆ 60GB ಯಷ್ಟು ಕಾರ್ಪೋರೆಟ್ ಮಾಹಿತಿ / ಇನ್ನ್ಯಾವುದೇ ಮಾಹಿತಿ ಮಿಂಚಿನ ವೇಗದಲ್ಲಿ ನಿಮ್ಮ ಸಾಧನಕ್ಕೆ ವರ್ಗಾಯಿಸಬಹುದು.

ಈ ಸಾಧನಗಳ ಉಪಯೋಗ ಅನೇಕ ಕಂಪೆನಿಗಳಿಗೆ, ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ. Data Leakage, Data Ciphering ಎಂಬ ಮಾಹಿತಿ ಕಳ್ಳತನದ ಪ್ರಕಾರಗಳಿಗೆ Pod Slurping ಎನ್ನುವುದು ಸೇರ್ಪಡೆಗೊಂಡಿದೆ. slurp [= copy] - ನಕಲು. Pod Slurping ಎಂಬ ಪದ portable storage device ಗಳನ್ನು [Pen Drive, iPod ಇತ್ಯಾದಿ] ಉಪಯೋಗಿಸಿಕೊಂಡು ಬಹುಮುಖ್ಯ/ಅತಿಸೂಕ್ಷ್ಮ ಮಾಹಿತಿ ಕದಿಯುವುದು ಎಂದು ವಿವರಿಸಬಹುದು. ಎಲ್ಲ ಮಾಹಿತಿ ಹೊತ್ತೊಯ್ಯುವ ಸಾಧನಗಳು ಉದಾಹರಣೆಗೆ ಡಿಜಿಟಲ್ ಕ್ಯಾಮರ, ಮೊಬೈಲ್ ಫೋನ್, PDA, mp3 player ಗಳು Pod Slurping ಗೆ ಬಳಸಲ್ಪಡುತ್ತವೆ. ಇದೊಂದು ಸರಳ ಯಾಂತ್ರಿಕ ವಿಧಾನವಾಗಿದ್ದು ಯಾವುದೇ ರೀತಿಯಾದಂತಹ ತಾಂತ್ರಿಕ ಕೌಶಲ್ಯ ಇದಕ್ಕೆ ಬೇಕಾಗಿಲ್ಲ. ಕಾರ್ಪೋರೆಟ್ / ಸರ್ಕಾರಿ ಸಂಸ್ಥೆಗಳ ಮಾಹಿತಿಯ ಮೇಲೆ ಕಣ್ಣಿಟ್ಟಿರುವ ಯಾವುದೇ ವ್ಯಕ್ತಿ ಹಾಗೆ ಸುಮ್ಮನೆ ಓಡಾಡುತ್ತಲೇ / ಹಾಡು ಆಲಿಸುತ್ತಲೇ ಮಾಹಿತಿಯನ್ನು ಹೀರಬಹುದು. ಸರಿಸುಮಾರು 100MB ಯಷ್ಟು word, excel, ppt, pdf, txt ಕಡತಗಳನ್ನು ಎರಡು ನಿಮಿಷಗಳೋಳಗಾಗಿ ನಕಲು ಮಾಡಬಹುದು.

ಮಾಹಿತಿ ಕಳ್ಳತನ ಹೊರಗಿನ ವ್ಯಕ್ತಿಗಳಿಂದಲೇ ಆಗಬೇಕೆಂದೇನಿಲ್ಲ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅತೃಪ್ತ ಕೆಲಸಗಾರನಿಂದಲೂ ಇಂತಹ ಬೆದರಿಕೆ ಬರಬಹುದು. ಯಾಕೆಂದರೆ ಈ ಮಾಹಿತಿ ಅನೇಕ ವಿಧಗಳಲ್ಲಿ ಉಪಯೋಗಕ್ಕೆ ಬರುತ್ತದೆ. Engineering plans, tender, price list, source code, data dase scheme, sound files, lyrics etc ಮಾಹಿತಿಗಳಿಂದ ಕದ್ದವನಿಗೆ ಲಕ್ಷ ಲಾಭ ತಂದುಕೊಟ್ಟರೆ ಸಂಸ್ಥೆಗೆ ಕೋಟಿಗಟ್ಟಲೆ ನಷ್ಟ ಉಂಟುಮಾಡುತ್ತದೆ. ಇಂದಿನ ಸ್ಪರ್ಧಾತ್ಮಕ ಉಗದಲ್ಲಿ ಈ ಮೇಲ್ಕಂಡ ಮಾಹಿತಿಗಲೆಲ್ಲವು ಒಂದು ಸಂಸ್ಥೆಯ / ವ್ಯಕ್ತಿಯ ವಿರೋಧಿಗಳಿಗೆ ಮೇಲುಗೈ ಸಾಧಿಸಲು ಸಹಾಯ ಮಾಡುತ್ತವೆ. ಉತ್ತಮ ಹುದ್ದೆಯಲ್ಲಿರುವ ಯಾವುದೇ ಅತೃಪ್ತ ಕೆಲಸಗಾರ ಅತಿಸೂಕ್ಷ್ಮ ಮಾಹಿತಿಗಳನ್ನು ಹೊತ್ತೊಯ್ದು ಪ್ರತಿಸ್ಪರ್ಧಿಗಳಿಗೆ ಮಾರಿಕೊಳ್ಳುವಂತಹ ಸಂಧರ್ಭಗಳಿಗೇನು ಕಡಿಮೆ ಇಲ್ಲ. Pod Slurping ಇನ್ನಷ್ಟು ದೊಡ್ಡದಾದ ಮಾಹಿತಿ ಕಳ್ಳತನದ ವಿದ್ಯಮಾನ ಆಗುವ ಮೊದಲು portable storage control poplicy ಯನ್ನು ತರಲು ಕಾರ್ಪೊರೇಟ್ ಸಂಸ್ಥೆಗಳ ಜೊತೆಗೂಡಿ ಸರ್ಕಾರ ಪ್ರಯತ್ನಿಸುತ್ತದೆಯೋ ಕಾದುನೋಡಬೇಕು.

3 comments:

Prabhuraj Moogi said...

Pod Slurping ಬಗ್ಗೆ ಒಳ್ಳೆ ಮಾಹಿತಿ... ನನಗೆ ಈ ಪದವೇ ಗೊತ್ತಿರಲಿಲ್ಲ :)
ಈಗೀಗ ಆಫೀಸುಗಳಲ್ಲಿ USB portನ್ನು ಬ್ಲಾಕ ಮಾಡ್ತಾ ಇದಾರೆ, ಹಾಗೆ bluetooth ಕೂಡ ಆದರೆ ಕಳ್ಳರಿಗೇನು ಹಲವು ದಾರಿ...

ನವೀನ್ said...

Technology ಬೆಳಿತಾ ಇರೋದೇ ರಂಗೋಲೆ ಕೆಳಗೆ ತೂರುವಂತಹ ಬುದ್ದಿವಂತಿಕೆಯ ಜನರು ಇರೋದ್ರಿಂದ ಅಂತ ನನ್ನ ಅನಿಸಿಕೆ. ಮಾಹಿತಿ ಕಳ್ಳತನದ ಮತ್ತೊಂದು ಮುಖ ಈಗ ಗೋಚರಿಸಲಾರಂಭಿಸಿದೆ.

Prabhuraj Moogi said...

ನಿಮ್ಮನಿಸಿಕೆ ಬಹಳ ಸರಿ, ಈ ಬುದ್ಧಿವಂತ ಕಳ್ಳರ ಮತ್ತು ಹ್ಯಾಕರಗಳಿಂದಾಗೇ technology ಬೆಳೀತಾ ಇರೋದು, ಎಲ್ಲೊ ಓದಿದ ನೆನಪು ಈ ಗೂಗಲ್ ಕಂಪನಿಯವರೊ ಸ್ವತಃ ಹ್ಯಾಕರಗಳನ್ನು ಕೆಲ್ಸಕ್ಕೆ ತೆಗೆದುಕೊಂಡು ತಮ್ಮ ಪ್ರೊಡಕ್ಟಗಳನ್ನೇ ಹ್ಯಾಕ್ ಮಾಡಿಸಿ.. ಇನ್ನಷ್ಟು security ಜಾಸ್ತಿ ಮಾಡ್ತಾರೆ ಅಂತೆ... ಕನ್ನಡದಲ್ಲಿ ಈ ಮಾಹಿತಿ ಕೊಡುತ್ತಿರುವ ನಿಮ್ಮ ಪ್ರಯತ್ನ ಖುಷಿ ಕೊಡುತ್ತದೆ.