ಹಲವು ವರ್ಷಗಳಿಂದ ಪ್ಲಾಸ್ಟಿಕ್ ನಿತ್ಯೋಪಯೋಗಿ ವಸ್ತುವಾಗಿದೆ. ಯಾವುದೇ ಅಂಗಡಿಗೆ ಹೋದರು ನಾವು ಕೊಳ್ಳುವ ಪ್ರತಿಯೊಂದು ವಸ್ತುವು ಪ್ಲಾಸ್ಟಿಕ್ ನ್ನು ಹೊದಿಕೆಯಾಗಿಸಿಕೊಂಡಿರುತ್ತದೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಾರೆ. ಕೈಚೀಲವೆಂಬ concept ಮರೆಯಾಗಲು ಪ್ಲಾಸ್ಟಿಕ್ ನ ಕೊಡುಗೆ ಅಪಾರ. ನನಗೆ ನೆನಪಿರುವ ಹಾಗೆ ನಮ್ಮ ಬಾಲ್ಯದಲ್ಲಿ ಅಂಗಡಿಯಿಂದ ಏನಾದರು ತರುವುದಿದ್ದರೆ ನಾವು ಕೈಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಸಕ್ಕರೆ, ಬೇಳೆ, ಬೆಲ್ಲ, ಹುಣಸೆ ಏನಾದರು ಆಗಲಿ ಅವನ್ನು ಕಾಗದದಲ್ಲಿ ಕಟ್ಟಿ ಕೊಡುತ್ತಿದ್ದರು. ಪ್ಲಾಸ್ಟಿಕ್ ಬಳಕೆ ಕೆಲವೇ ಕೆಲವು ಪದಾರ್ಥಗಳಿಗೆ ಸೀಮಿತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜನಗಳು ಸೋಮಾರಿಗಳಗಿದ್ದಾರೋ ಅಥವಾ ಪ್ಲಾಸ್ಟಿಕ್ ಎಂಬ ಮಾರಿಗೆ ಬಲಿಯಾಗಿದ್ದಾರೋ ನಾವು ಕೈ ಬೀಸಿಕೊಂಡು ಅಂಗಡಿಗಳಿಗೆ ಹೋಗುತ್ತೇವೆ. ಹೇಗಿದ್ದರೂ ಹ್ಯಾಂಡ್ ಕವರ್ ನಲ್ಲಿ ಹಾಕಿಕೊಡುತ್ತಾರೆಂಬ ನಂಬಿಕೆ.
ಮತ್ತೊಂದು ವಿಧದಲ್ಲಿ ನಾವು ಪ್ಲಾಸ್ಟಿಕ್ ಬಳಸುತ್ತಾ ಇರೋದು ನೀರಿನ / ಸಾಫ್ಟ್ ಡ್ರಿಂಕ್ ಬಾಟಲ್ ಗಳಿಗಾಗಿ. ಯಾವಾಗ use and throw ಯುಗ ಶುರುವಾಯಿತೋ ಈ ಪ್ಲಾಸ್ಟಿಕ್ ಬಾಟಲ್ ಸಿಗದೇ ಇರುವಂತಹ ಜಾಗವೇ ಈ ಜಗತ್ತಿನಲ್ಲಿ ಇಲ್ಲ ಎನ್ನಬಹುದು. ನನ್ನ ಈ ಲೇಖನದ ಮುಖ್ಯ ಉದ್ದೇಶ ಪ್ಲಾಸ್ಟಿಕ್ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಸುವುದೇ ಆಗಿದೆ. ನಿಮಗೆ ಪ್ಲಾಸ್ಟಿಕ್ ಬಾಟಲ್ನಲ್ಲಿ ಪಾನೀಯ / ನೀರು ಕುಡಿಯುವ ಅಭ್ಯಾಸವಿದ್ದರೆ ಯಾವತ್ತಾದರೂ ಅದರ ಕೆಳಭಾಗವನ್ನು ಗಮನಿಸಿದ್ದೀರಾ? ತ್ರಿಕೋನಾಕಾರದ ಚಿಹ್ನೆ ಯಾ ಒಳಗೆ ೧, ೨.....೭ ಯಾವುದಾದರು ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಅಲ್ಲಿ ಇರುವ ಸಂಖ್ಯೆ ಪುನರ್ಬಳಕೆಯನ್ನು ಸೂಚಿಸುತ್ತದೆ ಎಂದು ನೀವು ತಿಳಿದಿದ್ದರೆ.....you are WRONG.
ಹಾಗಾದರೆ ಅದು ಏನು? ಕುತೂಹಲವಿದ್ದರೆ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಗಮನಿಸಿ.
ನಮ್ಮ ಉಪಯೋಗಕ್ಕೆ ತಕ್ಕಂತೆ ಪ್ಲಾಸ್ಟಿಕ್ ನ್ನು ವಿವಿಧ ಕಚ್ಚಾವಸ್ತುಗಳಿಂದ ತಯಾರಿಸಲಾಗುತ್ತದೆ. ಅಂದರೆ ಹ್ಯಾಂಡ್ ಕವರ್ ಗೆ ಉಪಯೋಗಿಸುವ ಪ್ಲಾಸ್ಟಿಕ್ ನ ಕಚ್ಚಾವಸ್ತುಗಳು ಬೇರೆ, ನೀರಿನ ಬಾಟಲ್ ಗೆ ಉಪಯೋಗಿಸುವ ಪ್ಲಾಸ್ಟಿಕ್ ನ ಕಚ್ಚಾವಸ್ತುಗಳು ಬೇರೆ. ನೀರಿನ ಬಾಟಲ್ ಗೆ ಉಪಯೋಗಿಸುವ ಪ್ಲಾಸ್ಟಿಕ್ ನಲ್ಲೂ ಹಲವು ವಿಧಗಳಿವೆ. So NUMBER inside triangle symbol tells you CHEMICAL MAKE UP of the plastic.
1) Polyethylene terephalate (PET)
2) High density polyethylene (HDPE)
3) Unplasticised polyvinyl chloride (UPVC) or Plasticised polyvinyl chloride (PPVC)
4) Low density polyethylene LDPE
5) Polypropylene (PP)
6) Polystyrene (PS) or Expandable polystyrene (EPS)
7) Other, including nylon and acrylic
ಮೇಲೆ ಕೊಟ್ಟಿರುವ ಪ್ಲಾಸ್ಟಿಕ್ ನ ವಿಧಗಳಲ್ಲಿ ಸಂಖ್ಯೆ ೩, ೬, ಮತ್ತು ೭ ಅತ್ಯಂತ ಅಪಾಯಕಾರಿ. ನೀರು / ತಂಪು ಪಾನೀಯ ವಾಸನೆಯಾಗಲು ಈ ಪ್ಲಾಸ್ಟಿಕ್ ಗಳ ಉಪಯೋಗವೇ ಕಾರಣ. ದಯವಿಟ್ಟು ಈ ಸಂಖ್ಯೆಗಳನ್ನು ನಮೂದಿಸಿರುವ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬೇಡಿ. ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಪ್ಲಾಸ್ಟಿಕ್, ಅದರ ಉಪಯೋಗ ಹಾಗು ತಯಾರಿಕೆಯಲ್ಲಿನ ವಸ್ತುಗಳ ಬಳಕೆಯನ್ನು ನೀಡಲಾಗಿದೆ.
PET ಬಗ್ಗೆ ಒಂದು ಚೂರು ಮಾಹಿತಿ:
ಪೆಟ್ ಜಾರ್, ಪೆಟ್ ಬಾಟಲ್ ಗಳ ಬಗ್ಗೆ ಜಾಹಿರಾತುಗಳಲ್ಲಿ ನೋಡಿದ್ದೇ / ಕೇಳಿದ್ದೆ, ಪಠ್ಯ ಪುಸ್ತಕದಲ್ಲಿ ಓದಿದ್ದೆ. " ಆಕರ್ಷಕ ಪೆಟ್ ಜಾರ್ ನಲ್ಲಿ ನಮ್ಮ ಉತ್ಪನ್ನ ಲಭ್ಯ " ಎನ್ನುವುದೇ ಜನರನ್ನು ಸೆಳೆಯುವ ತಂತ್ರವಾಗಿತ್ತು. ನನ್ನ ಸ್ನೇಹಿತರೊಬ್ಬರು ಕಳುಹಿಸಿದ ಇಮೇಲ್ ನೋಡಿದ ಮೇಲೆ ಪೆಟ್ ಬಗ್ಗೆ ಕುತೂಹಲ ಮೂಡಿತು. ಅಂತರ್ಜಾಲ ದಲ್ಲಿ ಅಲೆದಾಡಿ ಸಂಗ್ರಹಿಸಿದ ಕೆಲವು ವಿಷಯಗಳು ಹೀಗಿವೆ.
೧. ೧೯೪೧ ರಲ್ಲಿ British Calico Printers ಎಂಬ ಕಂಪನಿ synthetic fibre ನಿಂದ ಪೆಟ್ ನ್ನು ತಯಾರಿಸಿತು.
೨. ಎಥಿಲೀನ್ ಮತ್ತು ಪ್ಯರಾಕ್ಸಿನ್ ವಸ್ತುಗಳು ಪೆಟ್ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ.
೩. ಪೆಟ್ ನ ಮತ್ತೊಂದು ಅನುಕೂಲವೆಂದರೆ It is fully recyclable.
೪. ಪೆಟ್ ಮಾರುಕಟ್ಟೆಯಲ್ಲಿ ಇಷ್ಟೊಂದು ಪ್ರಸಿದ್ದವಾಗಳು ಕಾರಣ ಅದು unbreakable.
೫. ಪೆಟ್ ತುಂಬ ಹಗುರ, ಪಾರದರ್ಶಕ, ಅಗ್ಗ ಹಾಗು ಪುನರ್ಬಳಕೆಗೆ ಸಹಕಾರಿ.
೬. ಪೆಟ್ ಗೆ ಯಾವುದೇ ಆಕೃತಿಯನ್ನು ಸುಲಭವಾಗಿ ಕೊಡಲು ಸಾಧ್ಯ.
ಕೊನೆ ಹನಿ:
ಪ್ಲಾಸ್ಟಿಕ್ ನ್ನು ನಮ್ಮ ದಿನನಿತ್ಯ ಉಪಯೋಗದಿಂದ ತೆಗೆದುಹಾಕುವುದು ಕಷ್ಟ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ ಪ್ಲಾಸ್ಟಿಕ್ ನ್ನು ಕಡಿಮೆ ಉಪಯೋಗಿಸಲು ಪ್ರಯತ್ನಿಸೋಣ. ಕಡಿಮೆ ಉಪಯೋಗದ ಜೊತೆ ಸುರಕ್ಷಿತ ಉಪಯೋಗದೆಡೆಗೆ ನಮ್ಮ ಗಮನವಿರಬೇಕಾದದ್ದು ಆನಿವಾರ್ಯ.
-- ನವೀನ ಕೆ. ಎಸ್.
ಹೆಚ್ಚಿನ ಮಾಹಿತಿಗೆ:
1. http://www.napcor.com/plastic/bottles/whatispet.html
2. http://www.petcore.org/Content/Default.asp?PageID=6
3 comments:
Hi Naveen,
Thank you for giving introduction about the plastic and its uses.
Your friend,
Ravichandra
thanks for information
Dinesh
thanks for information
Dinesh
Post a Comment