ಚುಮು ಚುಮು ಮುಂಜಾವಿನ ಚಳೀಲಿ ಬಿಸಿ ಕಾಫಿ ಹೀರುತ್ತಾ ಎಂಜಾಯ್ ಮಾಡ್ತಾ ಇದ್ದೀನಿ. ಅದರಲ್ಲೂ ವಾರಾಂತ್ಯ ಬೇರೆ; ಈ ಎರಡು ದಿನದಲ್ಲಿ ಮಾಡಬೇಕಾದ ಕೆಲಸಗಳನ್ನೆಲ್ಲ ಮನಸ್ಸಲ್ಲಿ ಪಟ್ಟಿ ಹಾಕಿಕೊಂಡಿದೀನಿ ಎಷ್ಟು ಕೆಲಸಗಳು ಮುಗಿಯುತ್ತವೆ ನೋಡಬೇಕು. ತುಂಬಾ ಜನ ಹೊಸ ವರ್ಷಕ್ಕೆ ಅವರದೇ ಆದ ಯೋಜನೆಗಳನ್ನ, resolution ಗಳನ್ನ ಮಾಡಿಕೊಂಡಿರ್ತಾರೆ. ಈ ವರ್ಷ ನಾನು ನಿರ್ಧರಿಸಿ ಕಾರ್ಯರೂಪಕ್ಕೆ ಇಳಿಸಿದ್ದು ಅಂದರೆ ಹೊಸದನ್ನು ಏನಾದ್ರು ಕಲಿಬೇಕು ಅನ್ನೋದು. ಹಾಗಾಗಿ ಕಾರ್ ಡ್ರೈವಿಂಗ್ ಕಲಿತ ಇದ್ದೀನಿ. ನನ್ನ ಹತ್ತಿರ ಲೈಸೆನ್ಸೆ ಕೂಡ ಇಲ್ಲ. ಅಲ್ಲದೆ ಕಾರ್ ಡ್ರೈವಿಂಗ್ ಕಲಿಬೇಕು ಅನ್ನೋ ಹುಚ್ಚು ತುಂಬಾ ದಿನಗಳಿಂದ ಇತ್ತು. ಡ್ರೈವಿಂಗ್ ಚೆನ್ನಾಗಿ ಮಾಡ್ತೀನಿ ಅನ್ನೋ ಆತ್ಮವಿಶ್ವಾಸ ಬೇರೆ! ಸದ್ಯಕ್ಕೆ ಐದು ಕ್ಲಾಸ್ ಮುಗಿದಿದೆ. And good news is I am driving very well. I hope to I will learn better day by day and become skilled driver.
No comments:
Post a Comment