108 ಇದು ಏನು ?
೧. ಇದು ಮೂರು ಅಂಕಿಯ ಟೋಲ್ ಫ್ರೀ ನಂಬರ್. ಇದಕ್ಕೆ ಕರೆಮಾಡಿ ನೀವು ವೈದ್ಯಕೀಯ, ಪೋಲಿಸ್, ಅಥವಾ ಅಗ್ನಿಶಾಮಕ ದಳದ ತುರ್ತು ಸೇವೆಗಳ ನೆರವು ಪಡೆಯಬಹುದು.
೨. 108 ಇದು ಯಾವುದೇ ಗಂಭೀರ ತುರ್ತು ಸ್ಥಿತಿಯಲ್ಲಿರುವ ಜನರಿಗಾಗಿ ದಿನದ ೨೪ ಗಂಟೆಗಳ ಉಚಿತ ಸೇವೆ.
೩. 108 ನ್ನು ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲ್ ನಿಂದ ನೇರವಾಗಿ ಸಂಪರ್ಕಿಸಬಹುದು.
108 ಇದು ಏನು ಮಾಡುತ್ತದೆ ?
108 ಕರೆಯು ನಿಮ್ಮ ಮತ್ತು / ವೃತ್ತಿಪರರೊಂದಿಗೆ (call center) ಸಂಪರ್ಕ ಹೊಂದಿಸುತ್ತದೆ ಹಾಗು ಅವರು ನಿಮ್ಮ ಕರೆಯನ್ನು ಸ್ವೀಕರಿಸಿ, ನಿಮ್ಮ ತುರ್ತು ಸಂದರ್ಭವನ್ನು ವಿವರಿಸಲು ಕೇಳುತ್ತಾರೆ. ನಂತರ ಅವರು ಅಗತ್ಯದ ತುರ್ತು ಸಿಬ್ಬಂದಿಯನ್ನು ನೀವಿರುವ ಸ್ಥಳಕ್ಕೆ ನಿಮ್ಮ ನೆರವಿಗೆ ಕಳಿಸುತ್ತಾರೆ.
ಯಾವ ಸಂದರ್ಭದಲ್ಲಿ ಕರೆ ಮಾಡಬೇಕು ?
೧. ವೈದ್ಯಕೀಯ ತುರ್ತು ಪರಿಸ್ಥಿತಿಗಳು.
a) ಗಾಯಗಳು b) ಹೃದಯ ತೊಂದರೆಗಳು c) ಲಕ್ವ d) ಉಸಿರಾಟ ಸಮಸ್ಯೆಗಳು e) ಮಧುಮೇಹ f) ಹೆರಿಗೆ g) ಪ್ರಜ್ಞೆ ತಪ್ಪುವಿಕೆ h) ಪ್ರಾಣಿಗಳು ಕಚ್ಚಿದಾಗ i) ಸುಟ್ಟ ಗಾಯಗಳು j) ಜ್ವರ k) ಸೋಂಕುಗಳು
೨. ಪೋಲೀಸ್ ತುರ್ತು ಪರಿಸ್ಥಿತಿಗಳು.
a) ಅಪರಾಧ b) ಕಳ್ಳತನ c) ಹ ೊಡೆದಾಟ d) ಕಳ್ಳತನ ನಡೆಯುತ್ತಿರುವಾಗ e) ಶಾರೀರಿಕ ಅಪರಾಧ.
೩. ಆಕಸ್ಮಿಕ ಅಗ್ನಿ ದುರಂತದ ತುರ್ತು ಪರಿಸ್ಥಿತಿಗಳು.
108 ಗೆ ಕರೆಮಾಡಿದಾಗ ಏನಾಗುತ್ತದೆ ?
ನೀವು 108 ಕ್ಕೆ ಕರೆ ಮಾಡಿದಾಗ ನಿಮ್ಮನ್ನು ವೃತ್ತಿಪರರಿಗೆ ಸಂಪರ್ಕಿಸಲಾಗುತ್ತದೆ. ಕೆಲವು ಅಗತ್ಯದ ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಿಸಿ ತುರ್ತು ಸೇವೆಯ ರೂಪದಲ್ಲಿ - ambulance, ಪೋಲೀಸ್ ಅಥವಾ ಅಗ್ನಿಶಾಮಕ ವಾಹನವನ್ನು ಕಳುಹಿಸಲಾಗುವುದು. ತಿಳಿಸಬೇಕಾದಂತಹ ಕೆಲವು ವಿವರಗಳು.
೧) ನೀವು ಕರೆ ಮಾಡುತ್ತಿರುವ ಸ್ಥಳ.
೨) ತುರ್ತು ಸ್ಥಿತಿಯ ವಿವರ.
೩) ಸಹಾಯ ಅಗತ್ಯವಿರುವ ಜನಗಳ ಸಂಖ್ಯೆ.
೪) ಕರೆ ಮಾಡುತ್ತಿರುವವರ ದೂರವಾಣಿ ಸಂಖ್ಯೆ / ಅವರನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ( ಸ್ಥಳ ಮಾರ್ಗದರ್ಶನಕ್ಕಾಗಿ ).
ಸಹಾಯವೂ ನಿಮ್ಮನ್ನು ಸರಾಸರಿ ೨೦ ನಿಮಿಷಗಳ ಅವಧಿಯಲ್ಲಿ ತಲಪುವುದು. ವೈದ್ಯಕೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವ್ಯಕ್ತಿಯ ಆರೋಗ್ಯದಲ್ಲಿ ಸ್ಥಿರತೆ ತರಲು ಬೇಕಾದ ಪೂರ್ವ ಚಿಕಿತ್ಸೆ ಮಾಡಲಾಗುವುದು. ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಅತ್ಯಂತ ಜನಪ್ರಿಯವಾದಂತ ಸೇವೆಯನ್ನು ಈಗ ನಗರಗಳಿಗೆ ವಿಸ್ತರಿಸಲಾಗಿದೆ. ನೆರವು ಬೇಕಾಗಿರುವ ಸ್ಥಳಕ್ಕೆ ಸಮೀಪವಾಗಿರುವ ತುರ್ತುಪರಿಸ್ಥಿತಿ ನಿರ್ವಹಣಾ ಕೇಂದ್ರದಿಂದ ಸೇವೆಯನ್ನು ಒದಗಿಸಲಾಗುವುದು. ಆದರೆ ಈ ಸೌಲಭ್ಯ ವಿಚಾರಣೆ ಮಾಡುವ ( enquiry) ದೂರವಾಣಿ ಸಂಖ್ಯೆಯಲ್ಲ. ತಮಾಷೆಗಾಗಿ 108 ಕ್ಕೆ ಕರೆ ಮಾಡಿ ಆಟವಾಡಬೇಡಿ. ಯಾವುದೇ ವ್ಯಕ್ತಿ ಗಂಭೀರ ಪರಿಸ್ಥಿತಿಯಲ್ಲಿ ಇಲ್ಲದಿದ್ದಾಗ ಕರೆ ಮಾಡಬಾರದು. ಸರ್ಕಾರ ಒದಗಿಸಿದ ಈ ಉಪಯುಕ್ತ ಸೇವೆಯನ್ನು ಸಾರ್ವಜನಿಕರು ಸದುಪಯೋಗಿಸಿಕೊಳ್ಳುವರೆಮ್ಬುದು ನನ್ನ ಆಶಯ.
1 comment:
ಒಳ್ಳೆ ಮಾಹಿತಿ ನವೀನ್, ಇಂಥ ಹಲವು ಸೇವೆಗಳ ಬಗ್ಗೆ ಜನರಿಗೆ ಗೊತ್ತೇ ಇಲ್ಲ. ಅಂದ ಹಾಗೆ ಮೊಬೈಲನಿಂದ 108 ಗೆ ಕರೆ ಮಾಡಲು ಬರುತ್ತೊ ಇಲ್ವೊ, ನನಗನಿಸಿದಂತೆ 080(ಬೆಂಗಳೂರು ಕೋಡ್)-108 ಗೆ ಮಾಡಬೇಕೊ ಏನೊ ಗೊತ್ತಿದ್ದರೆ ಹೇಳಿ, ಯಾಕೆಂದರೆ ಇಂಥ ಸ್ಥಿತಿಗಳಲ್ಲಿ ಮೊಬೈಲೇ ಉಪಯೋಗಿಸೊದು.
Post a Comment