2. ಸಂಜೆಯ ಮಿಂಚು
ಮುಂಗಾರು ಮಳೆಯ ಮನ್ಸೂಚನೆಯಲಿ
ಗೆಳೆಯರೆಲ್ಲ ನಿಂತೆವು ನಗೆಯ ಹೊನಲಲಿ
ಹಸ್ಯ ಚಟಾಕಿಯ ವಿಷಯದಲಿಮಿಂಚಂತೆ ಬಂದಳು ಚೆಲುವೆ ನಗುತಲಿ
ನೋಡುತ್ತಾ ನಿಂತೆವು ಆಶ್ಚರ್ಯದಲಿ.
ಅವಳು ನಕ್ಕರೆ ಕೆನ್ನೆಯ ಮೇಲೆ ಕುಳಿ
ಅದರಿಂದಾಗುತ್ತಿತ್ತು ಅವಳ ನೋಡಬೇಕೆನ್ನುವ ಕಳಕಳಿ
ಆದರೂ ಗೋಪಿ ಹೇಳುತ್ತಿದ್ದ ಇಂದುಏಕೋ ಚಳಿ ಚಳಿ............
ಹೇಳಿದ ನವೀನ ಹೇಗಿರಬೇಕೆಂಬುದನ್ನಾ ನೋಡಿ ಕಲಿ
ಮಿಂಚಂತೆ ಬಂದ ಆ ಚಲುವೆ ಮೋಡಿ ಮಾಡಿದಳು ನಮ್ಮನ್ನುಕ್ಷಣವೇ
ಹೋರಟಳು ಅಲ್ಲಿಂದ ತಕ್ಷಣವೇ
ಎಲ್ಲಿರುವೆ ಓ ನನ್ನ ಚಲುವೆ ನಿನಗಾಗಿ ನಾ ಕಾದಿರುವೆ............
-------- ಪ್ರಶಾಂತ್ ಎಂ ಎಸ್
No comments:
Post a Comment