2. ಸಂಜೆಯ ಮಿಂಚು
ಮುಂಗಾರು ಮಳೆಯ ಮನ್ಸೂಚನೆಯಲಿ
ಗೆಳೆಯರೆಲ್ಲ ನಿಂತೆವು ನಗೆಯ ಹೊನಲಲಿ
ಹಸ್ಯ ಚಟಾಕಿಯ ವಿಷಯದಲಿಮಿಂಚಂತೆ ಬಂದಳು ಚೆಲುವೆ ನಗುತಲಿ
ನೋಡುತ್ತಾ ನಿಂತೆವು ಆಶ್ಚರ್ಯದಲಿ.
ಅವಳು ನಕ್ಕರೆ ಕೆನ್ನೆಯ ಮೇಲೆ ಕುಳಿ
ಅದರಿಂದಾಗುತ್ತಿತ್ತು ಅವಳ ನೋಡಬೇಕೆನ್ನುವ ಕಳಕಳಿ
ಆದರೂ ಗೋಪಿ ಹೇಳುತ್ತಿದ್ದ ಇಂದುಏಕೋ ಚಳಿ ಚಳಿ............
ಹೇಳಿದ ನವೀನ ಹೇಗಿರಬೇಕೆಂಬುದನ್ನಾ ನೋಡಿ ಕಲಿ
ಮಿಂಚಂತೆ ಬಂದ ಆ ಚಲುವೆ ಮೋಡಿ ಮಾಡಿದಳು ನಮ್ಮನ್ನುಕ್ಷಣವೇ
ಹೋರಟಳು ಅಲ್ಲಿಂದ ತಕ್ಷಣವೇ
ಎಲ್ಲಿರುವೆ ಓ ನನ್ನ ಚಲುವೆ ನಿನಗಾಗಿ ನಾ ಕಾದಿರುವೆ............
-------- ಪ್ರಶಾಂತ್ ಎಂ ಎಸ್
Friday, August 17, 2007
1. ಸ್ವಾತಂತ್ರ್ಯದ ದಿನ
ನಾನಿಲ್ಲಿ ಬ್ಲಾಗಿಸಿರುವುದು ನನ್ನ ಸ್ನೇಹಿತ ಹಾಗೂ ಸಹೋದ್ಯೋಗಿಯಾಗಿರುವ ಪ್ರಶಾಂತ್ ರಚಿಸಿರುವ ಕೆಲವು ಕವನಗಳು ನಿಮಗೂ ಸಹ ಇಷ್ಟವಾಗಬಹುದು ಅನ್ನೋ ಭಾವನೆ ನನ್ನದು.
1. ಸ್ವಾತಂತ್ರ್ಯದ ದಿನ
ಭಾರತ ಸ್ವಾತಂತ್ರ್ಯದ 60 ನೇ ಶುಭ ದಿನ
ತರುವುದೇ ನಮಗೆ ಸಂತಸದ ಸುದಿನ..... ?
ಹಿಂದೆ ದೇಶಪ್ರೇಮಕ್ಕೆ ತ್ಯಾಗ ಬಲಿದಾನ
ಇಂದು ಯುವಪೀಳಿಗೆಗೆ ಆದ ಹೇಳಲು ಸಮಯವಿಲ್ಲದ ದಿನ.
ತಂದರು ಸ್ವಾತಂತ್ರ್ಯವನು ಹಿರಿಯರು ನೆತ್ತರು ಹರಿಸಿ
ಉಳಿಸಿಕೊಳ್ಳೂವರೆ ಇವರು ಬೆವರು ಸುರಿಸಿ.....?
ಹಿಂದೊಮ್ಮೆ ಭಾರತೀಯರ ಮೂಲ ಮಂತ್ರ ಅಹಿಂಸೆ.
ಇಂದು ತಂಡವವಾಡುತಿದೆ ಎಲ್ಲೆಡೆ ಹಿಂಸೆ..
ನಲುಗಿದಳು ಅಂದು ಭಾರತಾಂಬೆ ಪಾಶ್ಚಿಮಾತ್ಯರ ಕೈಯಲ್ಲಿ
ಅನುಸರಿಸುತ್ತಿದ್ದಾರೆ ಇಂದು ಪಾಶ್ಚಿಮಾತ್ಯ ಸಂಸ್ಕೃತಿ ಅಂಧಾನುಕರಣೆಯಲಿ
ಇನ್ದಿಲ್ಲ ದೇಶದಲಿ ಪ್ರಾಮಾಣಿಕತೆ, ಸಹಾಬಾಳ್ವೆ, ..ಸ್ಫೂತಿಸಹಕಾರ
ಕೊಡುತಿದ್ದಾರೆ ಭಯೋತ್ಪಾದನೆ ಚಟುವಟಿಕೆಗೆ ಸಹಕಾರ........

Subscribe to:
Posts (Atom)