ನಿನ್ನೆ ರಾತ್ರಿ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್ ಪಂದ್ಯ ನೋಡಿ ಮಲಗಿದವನಿಗೆ ಸೊಂಪಾದ ನಿದ್ದೆ. ವಾತಾವರಣ ಕೂಡ ತಂಪಾಗಿದ್ದರಿಂದ ಬೆಳಿಗ್ಗೆ ಏಳು ಗಂಟೆಗೆ ಎಚ್ಚರವಾಗಿದ್ದು. ಊರಿನಲ್ಲಿ ನನಗೆ ಈ ರೀತಿ ನಿದ್ದೆ ಬರುತ್ತೆ. ತುಂಬಾ ದಿನದ ನಂತರ ಮೈಮರೆತು ನಿದ್ದೆ ಮಾಡಿದೀನಿ. ಬೆಳಿಗ್ಗೆ ಏಳುವಾಗ ದೇಹ, ಮನಸ್ಸು ಎರಡೂ ಉಲ್ಲಾಸದಿಂದ ಕೂಡಿದ್ದವು. ವಾರಾಂತ್ಯದ ಎರಡೂ ದಿನಗಳಲ್ಲೂ ಮಾಡಲು ಅನೇಕ ಕೆಲಸಗಳಿವೆ. ಅದನ್ನು ಪಟ್ಟಿ ಮಾಡಬೇಕು. ತುಂಬಾ ದಿನಗಳಿಂದ ಒಂದು ವಿಚಾರ ತಲೆನಲ್ಲಿ ಕೊರೀತಿದೆ. ಅದನ್ನು ಕಾರ್ಯರೂಪಕ್ಕೆ ತರಬೇಕಿದೆ. ಇಂದಿನಿಂದ ಅದಕ್ಕೆ ಸಿದ್ಧತೆ ಮಾಡಲು ಶುರು ಮಾಡಬೇಕು. ಇದೆ ಉತ್ಸಾಹ, ಉಲ್ಲಾಸ ದಿನವಿಡೀ ಇರಲಿ ಅನ್ನೋ ಆಸೆ ನನ್ನದು.