ಒಂದಿಷ್ಟು ಜನಸಂಖ್ಯೆ ಹೆಚ್ಚಿ, ಹಲವು ಬಡಾವಣೆಗಳು ಹುಟ್ಟಿ, ಚಿಕ್ಕ ಪುಟ್ಟ ಊರುಗಳೆಲ್ಲ ನಗರ, ಪಟ್ಟಣಗಳೆಂಬ ಹಣೆಪಟ್ಟಿ ಹಚ್ಚಿಕೊಂಡ ಮೇಲೆ ಅಲ್ಲೊಂದಿಷ್ಟು ಸಮಸ್ಯೆಗಳು ಹುಟ್ಟಿಕೊಳ್ಳೋದು ಸಹಜ. ಅದರಲ್ಲೂ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ರಸ್ತೆ, ಚರಂಡಿ, ತ್ಯಾಜ್ಯ ನಿರ್ವಹಣೆ, ವಿದ್ಯುತ್, ನೀರು ಸರಬರಾಜು ಇತ್ಯಾದಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನೆಲ್ಲಾ ನಿರ್ವಹಿಸುವ ಹೊಣೆಹೊತ್ತ ಬೃಬೆ0ಮಪ(BBMP) ಅಧಿಕಾರಿಗಳ ನಿರ್ಲಕ್ಷತನದಿಂದಲೋ, ಗುತ್ತಿಗೆದಾರರ ಸೋಮಾರಿತನದಿಂದಲೋ ಹಲವು ಕೆಲಸಗಳು ನೆನೆಗುದಿಗೆ ಬಿದ್ದಿರುದು ಎಲ್ಲರಿಗು ತಿಳಿದಿದೆ. ಈ ಅಸಮರ್ಪಕ ನಿರ್ವಹಣೆ ಅನೇಕರಲ್ಲಿ ಸಿಟ್ಟು ತಂದಿರಬಹುದಾದರೂ ಅದರ ಬಗ್ಗೆ ದೂರು ನೀಡುವವರು ತುಂಬಾ ಕಡಿಮೆ. ನಾನು ಗಮನಿಸಿದ ಹಾಗೆ ದೂರು ನೀದುವವರೆಲ್ಲರೂ ಮಧ್ಯವಯಸ್ಸನ್ನು ದಾತಿದವರೇ ಹೆಚ್ಚು. ಯುವಕರಿಗೆ ಇಂತಹ ವಿಚಾರಗಳು ಮನಸ್ಸಿಗೆ ಬಂದರೂ ಅವು ಸ್ನೇಹಿತರ ನಡುವೆ ಚರ್ಚಿಸುವ ವಿಚಾರಾಗಳಾಗಿ ಮಾತ್ರ ಉಳಿದಿವೆ. ಯಾಕೆಂದರೆ ಅವರಿಗೆ ವ್ಯವಸ್ಥೆ ಯಲ್ಲಿ ಇರದಿರುವ ನಂಬಿಕೆ. ಹೀಗೆ ದೂರು ನೀಡಬೇಕೆಂದು ಮನಸ್ಸಿಗೆ ಬಂದರೂ, ಕೈಕಟ್ಟಿ ಕುಳಿತವರಿಗೆ ಒಂದು ಆಶಾದಾಯಕವಾದ ಸುದ್ದಿ.
ನಾಗರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆನ್ ಲೈನ್ ಮೂಲಕ ನೇರವಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಬಹುದು ಅಲ್ಲದೇ, ಎಸ್ಎಂಎಸ್ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದಾಗಿದೆ.
ನಿಮ್ಮ ಬಡಾವಣೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ BBMP ಯ ನೂತನ ವೆಬ್ಸೈಟ್ www.spandana.kar.nic.in ನಲ್ಲಿ ದೂರು ದಾಖಲಿಸಬಹುದು. ಈ ವೆಬ್ಸೈಟ್ ನಲ್ಲಿ ನಿಮ್ಮ ದೂರಿಗೆ ಸಂಬಂಧ ಪಟ್ಟ ಛಾಯಾಚಿತ್ರಗಳನ್ನು ಮತ್ತು ವೀಡಿಯೊಗಳನ್ನೂ ಕಳುಹಿಸಬಹುದು.
ಇಂಟರ್ನೆಟ್ ಉಪಯೋಗಿಸಲು ಗೊತ್ತಿಲ್ಲದೇ ಇರುವವರು ಮೊಬೈಲ್ ಸಂಖ್ಯೆ 94818 44444 ಗೆ ಎಸ್ಎಂಎಸ್ ಕಳುಹಿಸಬಹುದು. ದಾಖಲಿಸಿದ ದೂರು ಅಧಿಕಾರಿಗಳ ಗಮನಕ್ಕೆ ಬಂದಿದೆಯೇ ಎಂದು ತಿಳಿದುಕೊಳ್ಳಲು ನಿಮ್ಮ ದೂರಿನ ಸಂಖ್ಯೆಯನ್ನು ಎಸ್ಎಂಎಸ್ ಮಾಡಬಹುದು ಅಥವಾ ವೆಬ್ಸೈಟ್ ನಲ್ಲಿ ನೋಡಬಹುದು. ಬೆರಳ ತುದಿಗೆ ಮಾಹಿತಿ ದೊರೆಯುತ್ತಿರುವಾಗ ಇನ್ನು ತಡವೇಕೆ, ಸೋಮಾರಿತನವೇಕೆ. ವ್ಯವಸ್ಥೆಯನ್ನು ದೂರುವುದು ಬಿಟ್ಟು ಕಾರ್ಯಪ್ರವೃತ್ತರಾಗೋಣ. ಥ್ಯಾಂಕ್ಸ್ BBMP. ಥ್ಯಾಂಕ್ಸ್ ಭರತ್ ಲಾಲ್ ಮೀನಾ.