ತುಂಬಾ ದಿನಗಳಿಂದ ಶಿವಮೊಗ್ಗಕ್ಕೊಂದು ಇಂಟರ್ ಸಿಟಿ ರೈಲು ಬೇಕೆಂಬ ಕನಸು ನನಸಾಗಿದೆ. ಈ ರೈಲಿನ ವೇಳಾಪಟ್ಟಿ ಈ ಕೆಳಗಿನಂತಿದೆ.
ಈ ರೈಲಿಂದ ಶಿವಮೊಗ್ಗ ಜನರ ಮುಖದಲ್ಲಿ ಮಂದಹಾಸ ಮೂಡಿದ್ದರೂ ವೇಳಾಪಟ್ಟಿ ಸರಿಯಾಗಿ ಗಮನಿಸಿದರೆ ಅದು ಉಪಯೋಗಕಾರಿಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಸದ್ಯದ ವೇಳಾಪಟ್ಟಿಯಿಂದ ಏನೂ ಉಪಯೋಗ ಇಲ್ಲ ಅನ್ನೋದು ನನ್ನ ವಾದ. ಅದಕ್ಕೆ ಸರಿಯಾದ ಕಾರಣಗಳೂ ನನ್ನ ಬಳಿ ಇದೆ.
ನಮ್ಮನೆ ಯಿರೋದು ಶಿವಮೊಗ್ಗದಿಂದ ಸರಿಸುಮಾರು ೬೦ ಕಿ.ಮಿ. ದೂರದಲ್ಲಿ. ಅಲೀಗೆ ಹೋಗಲು[ಅಥವಾ ಅಲ್ಲಿಂದ ಬರಲು] ಎರಡು ಕಾಲು ಗಂಟೆಗಳು ಬೇಕಾಗುತ್ತೆ. ರಾತ್ರಿ ನಮ್ಮೂರಿಗೆ ಹೋಗಲು ಇರುವ ಕೊನೆಯ ಬಸ್ಸು ೭:೩೦ ಕ್ಕೆ. ಅದೂ ಆ ಬಸ್ ನಮ್ಮೊರಿನಿಂದ ೫ ಕಿ.ಮಿ. ಹಿಂದೆ ನಿಲ್ಲುತ್ತೆ. ನಾನೇನಾದರು ಇಂಟರ್ ಸಿಟಿರೈಲಿನಲ್ಲಿ [ಟ್ರೈನ್ ನ0 6201] 10:00 PM ಗೆ ಶಿವಮೊಗ್ಗಕ್ಕೆ ಬಂದಿಳಿದರೆ ರಾತ್ರಿ ಎಲ್ಲಿಗೆ ಹೋಗೋದು? ಬಸ್ ನಿಲ್ದಾಣದಲ್ಲೇ ಜಾಗರಣೆ ಮಾಡೋದ? ನಾನು ರಾತ್ರಿ 10:00 ಕ್ಕೆ ಶಿವಮೊಗ್ಗಕ್ಕೆ ಬಂದು ಬೆಳಗಿನವರೆಗೆ ಕಾದು, ಬೆಳಿಗ್ಗೆ ಮುಂಚೆ ಬಸ್ಸಿಗೆ ಹೋಗೋದಾದರೆ ನಾನು ರಾತ್ರಿನೇ ಬೆಂಗಳೂರಿಂದ ಹೊರಡುತ್ತೇನೆ? ಈ ಇಂಟರ್ ಸಿಟಿರೈಲು ಯಾಕೆ ಬೇಕು? ಇನ್ನು ಬೆಳಿಗ್ಗೆ ಶಿವಮೊಗ್ಗಕ್ಕೆ ಮೊದಲ ಬಸ್ ಇರೋದೇ 06:00 ಕ್ಕೆ. ನಾನು 06:20 ರ ರೈಲಿಗೆ ತಲುಪೋದು ಹೇಗೆ?
ಇದು ನನ್ನೊಬ್ಬನ ಕಥೆಯಲ್ಲ. ಶಿವಮೊಗ್ಗ ನಗರದಿಂದ 10KM ನನತರ ಇರುವ ಎಲ್ಲ ಊರಿನವರ ಸಮಸ್ಯೆ. ಕನಿಷ್ಠ ತಾಲೂಕು ಕೇಂದ್ರಗಳಿಗೆ ಹೋಗಲು/ಬರಲು ರಾತ್ರಿ 08:30 ರ ನಂತರ ಮತ್ತು ಬೆಳಿಗ್ಗೆ 07:30 ರ ಒಳಗೆ ಬಸ್ಸಿನ ಸೌಲಭ್ಯವಿಲ್ಲ.
ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ, ಸೊರಬ, ಹೊನ್ನಾಳಿ ಈ ತಾಲೂಕುಗಳ ಸುತ್ತ ಮುತ್ತ ಇರುವವರಿಗೆ ಈ ರೈಲಿನಿಂದ ಏನೂ ಉಪಯೋಗ ಇಲ್ಲ. ಬೆಂಗಳೂರಿಗೆ ಓಡಾಡುವ ಹೆಚ್ಚಿನ ಜನ ಈ ತಾಲೂಕುಗಳಿಂದಲೇ ಇರುವರು.
ಇಂಟರ್ ಸಿಟಿ ರೈಲಿನಿಂದ ಶಿವಮೊಗ್ಗಾದ ನಾಗರೀಕರಿಗೆ ಮಾತ್ರ ಸಹಾಯ ಆಗಿರೋದು. ಶಿವಮೊಗ್ಗ ಜಿಲ್ಲಾ ನಾಗರೀಕರಿಗೆ ಎಳ್ಳಷ್ಟೂ ಉಪಯೋಗ ಇಲ್ಲ. ರೈಲು ವೇಳಾಪಟ್ಟಿ ಮಾಡುವಾಗ ಶಿವಮೊಗ್ಗ ನಗರ ಜನತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ್ರೆ ಅದನ್ನು ಪರಿಷ್ಕರಿಸುವುದು ಒಳಿತು. ಹೊಸ "
ರೈಲು ಬಿಟ್ಟು " ಜನರ ಬಾಯಿಮುಚ್ಚಿಸುವ ತಂತ್ರವಾಗಿದ್ದರೆ ಅದಕ್ಕಿಂತ ದ್ರೋಹ ಇನ್ನೊಂದಿಲ್ಲ. ಈ ರೈಲಿನಿಂದ ಯಾವ ಒಬ್ಬ ಬಡವನಿಗೂ ಉಪಯೋಗವಿಲ್ಲ ಅನ್ನೋದು ನನ್ನ ಅಭಿಪ್ರಾಯ.
ವೇಳಾಪಟ್ಟಿ ಮಾಡೋದು ತುಂಬಾ ಕಷ್ಟ ಅನ್ನೋದು ನನಗೂ ಗೊತ್ತಿದೆ. ಅದಕ್ಕೆ ಹಲವು ಟ್ರೈನುಗಳ ಸಮಯವನ್ನು ಗಮನಿಸಬೇಕಾಗುತ್ತದೆ. ಅಲ್ಲದೆ ಈ ಮಾರ್ಗದಲ್ಲಿ [ಬೀರೂರು ನಂತರ] ಹಲವಾರು ರೈಲುಗಳು ಓಡಾಡುತ್ತವೆ. ಆದರೆ ಜನರಿಗೆಅನುಕೂಲವಾಗುವಂತಹದ್ದು ಮಾಡಬೇಕಲ್ಲವೇ? ಈ ಕಣ್ಣೊರೆಸುವ ತಂತ್ರ ಏಕೆ? ಜಿಲ್ಲಾ MP ಆದ ಸನ್ಮಾನ್ಯ ರಾಘವೇಂದ್ರ ಅವರು ಈ ಸಾಧನೆಯನ್ನು ಇನ್ನೋದೈದು ವರ್ಷ ಹೇಳಿಕೊಳ್ಳುತ್ತಾ ಕೂರದೆ ವೇಳಾಪಟ್ಟಿಯನ್ನು ಬದಲಾವಣೆ ಮಾಡುವ ಬಗ್ಗೆ ಏನಾದರು ಮಾಡುತ್ತಾರೆ ಎಂದು ಆಶಿಸೋಣವೇ?
1 comment:
ಸರಿಯಾಗಿ ಹೇಳಿದ್ರಿ. ಈ ರೈಲಿಂದ ಸಾಗರ-ಸೊರಬದ ನಮಗೆ ಏನೂ ಉಪಯೋಗ ಆಗಿಲ್ಲ.
Post a Comment